ಎಸ್ಸಿ, ಎಸ್ಟಿ ಬಡ್ತಿಯಲ್ಲಿ ಮೀಸಲಾತಿ 2006ರ ತೀರ್ಪು ಮರುಪರಿಶೀಲನೆ ಇಲ್ಲ; ಸುಪ್ರೀಂಕೋರ್ಟ್​ ಆದೇಶ

news18
Updated:September 26, 2018, 12:30 PM IST
ಎಸ್ಸಿ, ಎಸ್ಟಿ ಬಡ್ತಿಯಲ್ಲಿ ಮೀಸಲಾತಿ 2006ರ ತೀರ್ಪು ಮರುಪರಿಶೀಲನೆ ಇಲ್ಲ; ಸುಪ್ರೀಂಕೋರ್ಟ್​ ಆದೇಶ
news18
Updated: September 26, 2018, 12:30 PM IST
ನ್ಯೂಸ್ 18 ಕನ್ನಡ

ನವದೆಹಲಿ (ಸೆ.26): ಎಸ್ಸಿ, ಎಸ್ಟಿ ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ಕೋರಿ ಕೇಂದ್ರ ಸರ್ಕಾರ ಮಾಡಿದ್ದ ಮನವಿಯನ್ನು ಸುಪ್ರೀಂಕೋರ್ಟ್​ ತಿರಸ್ಕರಿಸಿ, ಬಡ್ತಿ ಮೀಸಲು ವಿಚಾರವಾಗಿ ಎಂ. ನಾಗರಾಜು ಪ್ರಕರಣದಲ್ಲಿ 2006ರಂದು ನ್ಯಾಯಾಲಯ ನೀಡಿದ್ದ ತೀರ್ಪನ್ನು ಏಳು ಸದಸ್ಯರ ಪೀಠಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ ಎನ್ನುವ ಮೂಲಕ ಹಿಂದಿನ ತೀರ್ಪನ್ನು ಎತ್ತಿ ಹಿಡಿದಿದೆ.

ಮುಖ್ಯ ನ್ಯಾಯಮೂರ್ತಿ ದೀಪಕ್​ ಮಿಶ್ರಾ ನೇತೃತ್ವದ ನ್ಯಾ.ಕುರಿಯನ್ ಜೋಸೆಫ್, ಆರ್​.ಎಫ್​.ನಾರಿಮನ್, ಎಸ್​.ಕೆ.ಕೌಲ್ ಮತ್ತು ಇಂಧು ಮಲ್ಹೋತ್ರಾ ಅವರಿದ್ದ ಸಾಂವಿಧಾನಿಕ ಪಂಚಸದಸ್ಯ ನ್ಯಾಯಪೀಠ ಆ.30ರಂದು ವಿಚಾರಣೆ ಆಲಿಸಿ, ತೀರ್ಪು ಕಾಯ್ದಿರಿಸಿತ್ತು.

ಎಸ್‌ಸಿ, ಎಸ್‌ಟಿ ನೌಕರರ ಮುಂಬಡ್ತಿ ಕುರಿತು ಎಂ ನಾಗರಾಜ್ ಪ್ರಕರಣದ ಮರು ಪರಿಶೀಲನೆ ಅಗತ್ಯವಿಲ್ಲ ಎಂದು ನ್ಯಾ. ನಾರಿಮನ್ ಸ್ಪಷ್ಟಪಡಿಸಿದ್ದಾರೆ. ಹಿಂದುಳಿದವರು ಎಂದು ಹೇಳಲು ಮಾಹಿತಿ  ಸಂಗ್ರಹ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅಸಮರ್ಪಕ ಪ್ರತಿನಿಧಿಗಳಿಗೆ ಬಡ್ತಿ ನೀಡಿದರೆ ಸರ್ಕಾರದ ಆಡಳಿತದಲ್ಲಿ ದಕ್ಷತೆ ಕುಸಿಯುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

2006ರ ಎಂ. ನಾಗರಾಜು ಪ್ರಕರಣದ ತೀರ್ಪು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ಸುಪ್ರೀಂಕೋರ್ಟ್​ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದವು. ಎಂ. ನಾಗರಾಜು ಪ್ರಕರಣದ ತೀರ್ಪಿನಲ್ಲಿ ಎಸ್ಸಿ, ಎಸ್ಸಿ ಸರ್ಕಾರಿ ಉದ್ಯೋಗಿಗಳಿಗೆ ಮೀಸಲಾತಿಯ ಪ್ರಯೋಜನ ದೊರೆಯಲು ಹಲವು ಅನಗತ್ಯ ನಿಯಮಗಳನ್ನು ತರಲಾಗಿದೆ ಎಂದು ಆರೋಪಿಸಿದ್ದ ಕೇಂದ್ರ ಈ ತೀರ್ಪನ್ನು ಉನ್ನತ ಪೀಠದಲ್ಲಿ ಮರುಪರಿಶೀಲಿಸುವಂತೆ ಸುಪ್ರೀಂಕೋರ್ಟ್​ಗೆ ಮನವಿ ಮಾಡಿತ್ತು.

ಕೇಂದ್ರದ ಪರ ಅಟಾರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್ ಅವರು ಎಸ್ಸಿ, ಎಸ್ಟಿ ಸಮುದಾಯದವರು ಬಹುಹಿಂದಿನಿಂದಲೂ ಜಾತಿ ತಾರತಮ್ಯ ಎದುರಿಸುತ್ತಿದ್ದಾರೆ. ಹಿಂದುಳಿದ ಆಧಾರದ ಮೇಲೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಎಸ್ಸಿ, ಎಸ್ಟಿ ಉದ್ಯೋಗಿಗಳ ಪರ ಬಲವಾಗಿ ವಾದ ಮಂಡಿಸಿದ್ದರು.

ಇದನ್ನು ಓದಿ: ಸಲಿಂಗಿಗಳಿಗೆ ಒಟ್ಟಾಗಿ ಬದುಕಲು ಅನುಮತಿ ನೀಡಿದ ಕೇರಳ ಹೈಕೋರ್ಟ್​​
Loading...

ಬಡ್ತಿ ಮೀಸಲಾತಿ ವಿರುದ್ಧವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು, ಎಸ್ಸಿ, ಎಸ್ಟಿ ಸಮುದಾಯವರು ಒಮ್ಮೆ ಸರ್ಕಾರಿ ಉದ್ಯೋಗಕ್ಕೆ ಸೇರಿದರೆ ಅವರ ಹಿಂದುಳಿಯುವಿಕೆ ಮಾಯವಾಗುತ್ತದೆ. ವರ್ಗ​ 4 ಮತ್ತು ವರ್ಗ 3 ಸೇವೆಗಳಲ್ಲಿ ಮೀಸಲಾತಿ ಬಡ್ತಿಯನ್ನು ಮುಂದುವರೆಸಬಹುದು. ಆದರೆ, ಉನ್ನತ ಮಟ್ಟದ ಉದ್ಯೋಗಗಳಲ್ಲಿ ಬೇಡ ಎಂದು ನ್ಯಾಯಪೀಠ ಮುಂದೆ ವಾದಿಸಿದ್ದರು.

ಪ್ರಾತಿನಿಧ್ಯದ ಕೊರತೆ ಮತ್ತು ಹಿಂದುಳಿದಿರುವಿಕೆಯ ದತ್ತಾಂಶಗಳ ಆಧಾರದಲ್ಲಿ ಬಡ್ತಿ ಮೀಸಲಾತಿ ನೀಡಬೇಕೆಂದು ಎಂ. ನಾಗರಾಜು ಪ್ರಕರಣದಲ್ಲಿ 2006ರಂದು ಏಳು ಸದಸ್ಯರ ಸಾಂವಿಧಾನಿಕ ನ್ಯಾಯಪೀಠ ತೀರ್ಪು ನೀಡಿತ್ತು.
First published:September 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ