ಬೇರೆ ರಾಜ್ಯಗಳಿಗೆ ವಲಸೆ ಹೋದ ದಲಿತರಿಗೆ ಇಲ್ಲ ಮೀಸಲಾತಿ ಭಾಗ್ಯ: ಸುಪ್ರೀಂ


Updated:August 31, 2018, 5:28 PM IST
ಬೇರೆ ರಾಜ್ಯಗಳಿಗೆ ವಲಸೆ ಹೋದ ದಲಿತರಿಗೆ ಇಲ್ಲ ಮೀಸಲಾತಿ ಭಾಗ್ಯ: ಸುಪ್ರೀಂ

Updated: August 31, 2018, 5:28 PM IST
- ನ್ಯೂಸ್18 ಕನ್ನಡ

ನವದೆಹಲಿ(ಆ. 30): ದೇಶದಲ್ಲಿ ಮೀಸಲಾತಿಯು ಸಾರ್ವತ್ರಿಕವಲ್ಲ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋದ ದಲಿತರಿಗೆ ಮೀಸಲಾತಿ ಹಕ್ಕೂ ಕೈತಪ್ಪಿಹೋಗುತ್ತದೆ. ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಅಭಿಪ್ರಾಯವನ್ನು ಸಾಂವಿಧಾನಿಕ ಪೀಠವೂ ಎತ್ತಿಹಿಡಿದಿದೆ. ಎಸ್ಸಿ/ಎಸ್ಟಿ ಸಮುದಾಯದ ವ್ಯಕ್ತಿಯು ಬೇರೆ ರಾಜ್ಯಕ್ಕೆ ವಲದೆ ಹೋದರೆ ಅವರು ಅದೇ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾ| ರಂಜನ್ ಗೊಗೋಯ್ ನೇತೃತ್ವದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.

ಒಂದು ಸಮುದಾಯದ ವೈಶಿಷ್ಟ್ಯತೆಯು ಆ ರಾಜ್ಯಕ್ಕೆ ಸೀಮಿತವಾಗಿರುತ್ತದೆ. ಇದೇ ಆಧಾರದ ಮೇಲೆ ಮೀಸಲಾತಿಯ ಆಶಯ ನಿಂತಿದೆ. ಬೇರೆ ರಾಜ್ಯಗಳಿಗೆ ಹೋಗಿ ಮೀಸಲಾತಿ ಪಡೆದರೆ ಅಲ್ಲಿಯ ಸಮುದಾಯಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಲ್ಲದೆ, ಅದು ಮೀಸಲಾತಿಯ ಮೂಲಾಶಯಗಳಿಗೆ ವಿರುದ್ಧ ನಿಂತಂತಾಗುತ್ತದೆ ಎಂಬುದು ನ್ಯಾಯಾಲಯದ ಅಭಿಪ್ರಾಯ.

“ಒಂದು ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯು ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ಬೇರೆ ರಾಜ್ಯಕ್ಕೆ ವಲಸೆ ಹೋದರೆ ಅವರನ್ನು ಆ ರಾಜ್ಯದ ಪರಿಶಿಷ್ಟ ಜಾತಿಯ ವ್ಯಕ್ತಿ ಎಂದು ಪರಿಗಣಿಸಲು ಸಾಧ್ಯವಾಗುವುದಿಲ್ಲ,” ಎಂದು ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.

ಪ್ರತಿಯೊಂದು ರಾಜ್ಯಕ್ಕೂ ಪ್ರತ್ಯೇಕ ಮೀಸಲಾತಿ ಪಟ್ಟಿ ಇರುತ್ತದೆ. ಇವೆಲ್ಲದಕ್ಕೂ ರಾಷ್ಟ್ರಪತಿಗಳ ಅನುಮೋದನೆ ಇರುತ್ತದೆ. ಇದೇ ಅಂತಿಮವಾಗಿರುತ್ತದೆ.
First published:August 30, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ