Scotland: ಈ ದೇಶದಲ್ಲಿ ಸ್ಯಾನಿಟರಿ ಪ್ಯಾಡ್, ಕಪ್ಸ್ ಎಲ್ಲಾ ಉಚಿತ! ಅಭಿಯಾನಕ್ಕೆ ಸಿಕ್ತು ಪ್ರತಿಫಲ

ಸ್ಕಾಟಿಷ್ ಸರ್ಕಾರವು ಮಹಿಳೆಯರು ಮುಟ್ಟಿನ ಅವಧಿಯಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್, ಕಪ್ಸ್ ಸೇರಿ ಎಲ್ಲವನ್ನೂ ಉಚಿತವಾಗಿ ನೀಡಲು ನಿರ್ಧರಿಸಿದೆ.

ಸ್ಕಾಟ್ ಲ್ಯಾಂಡ್ ನಲ್ಲಿ ಉಚಿತ ಪೀರಿಯಡ್ಸ್ ಉತ್ಪನ್ನಗಳ ಕಾಯಿದೆ ಜಾರಿ

ಸ್ಕಾಟ್ ಲ್ಯಾಂಡ್ ನಲ್ಲಿ ಉಚಿತ ಪೀರಿಯಡ್ಸ್ ಉತ್ಪನ್ನಗಳ ಕಾಯಿದೆ ಜಾರಿ

  • Share this:
ಮಹಿಳೆಯರ ಮುಟ್ಟಿನ ಅವಧಿಯಲ್ಲಿ (Menstrual Period)  ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡುವ ಹಿತದೃಷ್ಟಿಯಿಂದ ಎಲ್ಲಾ ದೇಶಗಳಲ್ಲಿಯೂ ಋತುಚಕ್ರಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ನೀಡಬೇಕು ಎಂಬುವುದು ಎಲ್ಲೆಡೆ ಕೇಳಿ ಬರುತ್ತಿರುವ ಮಾತು. ಈ ಉದ್ದೇಶವನ್ನು ಸಾಕಾರಗೊಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಸದ್ಯ ಸ್ಕಾಟ್ ಲ್ಯಾಂಡ್ (Scotland) ಪಾತ್ರವಾಗಿದೆ. ಸ್ಕಾಟಿಷ್ ಸರ್ಕಾರವು ಮಹಿಳೆಯರು ಮುಟ್ಟಿನ ಅವಧಿಯಲ್ಲಿ ಬಳಸುವ ಸ್ಯಾನಿಟರಿ ಪ್ಯಾಡ್, ಕಪ್ಸ್ ಸೇರಿ ಎಲ್ಲವನ್ನೂ ಉಚಿತವಾಗಿ ನೀಡಲು ನಿರ್ಧರಿಸಿದೆ. ಉಚಿತ ಪೀರಿಯಡ್ಸ್ ಉತ್ಪನ್ನಗಳ (Periods Product) ಕಾಯಿದೆ (ಪೀರಿಯಡ್ಸ್ ಪ್ರಾಡಕ್ಟ್ ಆ್ಯಕ್ಟ್) ಅಧಿಕೃತವಾಗಿ ಜಾರಿಗೆ ಬರಲಿದ್ದು, ಮುಟ್ಟಿನ ಉತ್ಪನ್ನಗಳನ್ನು ಪ್ರವೇಶಿಸುವ ಹಕ್ಕನ್ನು ಕಾನೂನುಬದ್ಧವಾಗಿ ರಕ್ಷಿಸುವ ವಿಶ್ವದ ಮೊದಲನೆಯ ದೇಶವಾಗಲಿದೆ.

ಮೋನಿಕಾ ಲೆನ್ನನ್ ಅಭಿಯಾನಕ್ಕೆ ಪ್ರತಿಫಲ
ಬಡ ವರ್ಗದ ಯುವತಿಯರು, ಮಹಿಳೆಯರು ಮುಟ್ಟಿನ ದಿನಗಳಲ್ಲಿ ಪ್ಯಾಡ್ ಖರೀದಿಸಲು ಸಹ ಆಗದೇ ಬಟ್ಟೆಗಳಂತಹ ಅಸುರಕ್ಷಿತ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿದ ಆಗಿನ ಸಂಸದೆ ಮೋನಿಕಾ ಲೆನ್ನನ್ ಅವರು 2016 ರಿಂದಲೂ ಈ ಅಭಿಯಾನ ನಡೆಸುತ್ತಿದ್ದರು. 2019ರ ಏಪ್ರಿಲ್ 23ರಂದು ‘ಪೀರಿಯಡ್ಸ್ ಪ್ರಾಡಕ್ಟ್ಸ್ (ಫ್ರೀ ಪ್ರಾವಿಸನ್) (ಸ್ಕಾಟ್ಲೆಂಡ್) [ಪೀರಿಯಡ್ಸ್ ಉತ್ಪನ್ನಗಳು (ಉಚಿತ ಹಂಚಿಕೆ) (ಸ್ಕಾಟ್ಲೆಂಡ್)] ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. ನಂತರ ಆ ಮಸೂದೆ 2021ರಲ್ಲಿ ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕರವಾಗಿತ್ತು. ಸದ್ಯ ಈ ಕಾಯಿದೆ ಸೋಮವಾರದಿಂದ ದೇಶದಲ್ಲಿ ಜಾರಿಯಾಗಲಿದ್ದು ಉಚಿತವಾಗಿ ಉತ್ಪನ್ನಗಳು ಮಹಿಳೆಯರ ಕೈ ಸೇರಲಿವೆ.

ಉತ್ಪನ್ನಗಳನ್ನು ತಲುಪಿಸುವ ಹೊಣೆ ಸ್ಥಳೀಯ ಆಡಳಿತಕ್ಕೆ
ಇದರ ಅನ್ವಯ ಪ್ರತಿ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಅಗತ್ಯ ಇರುವ ಪ್ಯಾಡ್, ಕಪ್ಸ್ ವಿತರಿಸುವ ಕೆಲಸವನ್ನು ಆಯಾ ಸ್ಥಳೀಯ ಆಡಳಿತಗಳು ಇನ್ನು ಮುಂದೆ ಜವಾಬ್ದಾರಿ ತೆಗೆದುಕೊಳ್ಳುತ್ತವೆ. ಇದರರ್ಥ ಸ್ಥಳೀಯ ಅಧಿಕಾರಿಗಳು ಮತ್ತು ಶಿಕ್ಷಣ ಪೂರೈಕೆದಾರರು ಉಚಿತ ಮುಟ್ಟಿನ ಉತ್ಪನ್ನಗಳನ್ನು ಅಗತ್ಯವಿರುವ ಎಲ್ಲರಿಗೂ ತಲುಪಿಸುವ ಕರ್ತವ್ಯವನ್ನು ನಿಭಾಯಿಸುತ್ತಾರೆ.

ಅಕ್ಟೋಬರ್ 2020ರಲ್ಲಿ ಜಾರಿಗೆ ಬಂದ ಶಾಲೆಗಳಲ್ಲಿ ಪೀರಿಯಡ್ಸ್ ಉತ್ಪನ್ನಗಳ (ಸ್ಕಾಟ್ಲೆಂಡ್) ನಿಯಮಗಳ ಮೇಲೆ ಈ ಕಾಯಿದೆ ಕೆಲಸ ಮಾಡುತ್ತದೆ, ವಿದ್ಯಾರ್ಥಿಗಳಿಗೆ ಉಚಿತ ಉತ್ಪನ್ನಗಳನ್ನು ಒದಗಿಸಲು ಸ್ಥಳೀಯ ಅಧಿಕಾರಿಗಳು ಮತ್ತು ಅನುದಾನಿತ ಶಾಲೆಗಳ ಮೇಲೆ ಕರ್ತವ್ಯವನ್ನು ವಿಧಿಸುತ್ತದೆ. ಸ್ಕಾಟಿಷ್ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಪೀರಿಯಡ್ಸ್ ಉತ್ಪನ್ನಗಳಿಗೆ ಪ್ರವೇಶಕ್ಕಾಗಿ 2022-23 ರಲ್ಲಿ £3.4 ಮಿಲಿಯನ್ ಅನುದಾನ ಒದಗಿಸಲು ಕ್ರಮಗಳನ್ನು ಆಯೋಜಿಸಿದೆ.

ಇದನ್ನೂ ಓದಿ:  Insemination Kit ಬಳಸಿ ಮನೆಯಲ್ಲಿಯೇ ಕೃತಕ ಗರ್ಭಧಾರಣೆ ಮಾಡಿಕೊಂಡ ಮಹಿಳೆ

ಹೊಸ ಕಾನೂನಿನ ಅಡಿಯಲ್ಲಿ, ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳು ತಮ್ಮ ಶೌಚಾಲಯದಲ್ಲಿ ಪೀರಿಯಡ್ಸ್ ಉತ್ಪನ್ನಗಳನ್ನು ಉಚಿತವಾಗಿ ಲಭ್ಯವಾಗುವಂತೆ ಕ್ರಮ ತೆಗೆದುಕೊಳ್ಳಲಿವೆ. ಸ್ಕಾಟಿಷ್ ಸರ್ಕಾರವು ಈಗಾಗಲೇ 2017 ರಿಂದ ಲಕ್ಷಾಂತರ ಪೌಂಡ್‌ಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಮುಟ್ಟಿನ ಉತ್ಪನ್ನಗಳಿಗೆ ನಿಧಿಯಲ್ಲಿ ಹೂಡಿಕೆ ಮಾಡಿದ್ದು, ಕಾನೂನಿನಡಿ ಅದು ಜಾರಿಯಾಗಿ ಬರಲಿದೆ.

ಹತ್ತಿರದ ಪಿಕಪ್ ಪಾಯಿಂಟ್ ಹುಡುಕಲು ಮೊಬೈಲ್ ಅಪ್ಲಿಕೇಶನ್
ಸ್ಥಳೀಯ ಲೈಬ್ರರಿ ಅಥವಾ ಸಮುದಾಯ ಕೇಂದ್ರದಂತಹ ಹತ್ತಿರದ ಸ್ಥಳವನ್ನು ಕಂಡುಹಿಡಿಯಲು ಮೊಬೈಲ್ ಫೋನ್ ಅಪ್ಲಿಕೇಶನ್ ಜನರಿಗೆ ಸಹಾಯ ಮಾಡುತ್ತದೆ. ಮೊಬೈಲ್ ಆ್ಯಪ್ ಸಹಾಯದಿಂದ ಪೀರಿಯಡ್ಸ್ ಉತ್ಪನ್ನಗಳನ್ನು ತೆಗೆದುಕೊಳ್ಳಬಹುದು. ಸ್ಕಾಟಿಷ್ ಸರ್ಕಾರದ ಬೆಂಬಲದೊಂದಿಗೆ ಸಾಮಾಜಿಕ ಉದ್ಯಮ 'ಹೇ ಗರ್ಲ್ಸ್' ಈ ವರ್ಷದ ಆರಂಭದಲ್ಲಿ ಪ್ರಾರಂಭಿಸಿರುವ PickupMyPeriod ಮೊಬೈಲ್ ಅಪ್ಲಿಕೇಶನ್ ಮೂಲಕ ಜನರು ತಮ್ಮ ಹತ್ತಿರದ ಸಂಗ್ರಹಣಾ ಸ್ಥಳವನ್ನು ಕಂಡುಹಿಡಿಯಬಹುದು.

"ಮುಕ್ತ ಅವಧಿಯ ಉತ್ಪನ್ನಗಳಿಗೆ ಪ್ರವೇಶವನ್ನು ಒದಗಿಸುವುದು ಸಮಾನತೆ ಮತ್ತು ಘನತೆಗೆ ಮೂಲಭೂತವಾಗಿದೆ ಮತ್ತು ಅವುಗಳನ್ನು ತೆಗೆದುಕೊಳ್ಳಲು ಹಣಕಾಸಿನ ಅಡೆತಡೆಗಳನ್ನು ತೆಗೆದುಹಾಕುತ್ತದೆ" ಎಂದು ಸ್ಕಾಟಿಷ್ ಸಾಮಾಜಿಕ ನ್ಯಾಯ ಕಾರ್ಯದರ್ಶಿ ಶೋನಾ ರಾಬಿಸನ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Viral News: ಮಗನ ಜೊತೆ ತಾಯಿಯೂ ಶಾಲೆ ಕಲೀತಾಳೆ! ಹೀಗೊಂದು ವಿಚಿತ್ರ ಘಟನೆ

ಮಹಿಳೆಯರ ಸುರಕ್ಷತೆ, ನೈರ್ಮಲ್ಯತೆ ಕಾಪಾಡುವಲ್ಲಿ ಸ್ಕಾಟಿಷ್ ಸರ್ಕಾರದ್ದು, ಒಂದು ಮಹತ್ವದ ನಡೆ ಇದು ಎನ್ನಬಹುದು. ಸ್ಯಾನಿಟರಿ ಪ್ಯಾಡ್ ಗಳನ್ನು ಖರೀದಿ ಮಾಡುವಲ್ಲಿ ಅಶಕ್ತರಾಗಿ ಬಟ್ಟೆಗಳನ್ನು ಉಪಯೋಗಿಸುತ್ತಿದ್ದ ಮಹಿಳೆಯರಿಗೆ ಇದೊಂದು ವರದಾನವಾಗಿದೆ.
Published by:Ashwini Prabhu
First published: