• Home
  • »
  • News
  • »
  • national-international
  • »
  • Viral Video: ಅಯ್ಯಪ್ಪಾ! ರಸ್ತೆಯಲ್ಲಿನ ಬೃಹತ್ ಹೊಂಡಕ್ಕೆ ಬಿದ್ದ ಸ್ಕೂಟರ್

Viral Video: ಅಯ್ಯಪ್ಪಾ! ರಸ್ತೆಯಲ್ಲಿನ ಬೃಹತ್ ಹೊಂಡಕ್ಕೆ ಬಿದ್ದ ಸ್ಕೂಟರ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೈಕ್ ಜೊತೆ ರಸ್ತೆಯಲ್ಲಿ ಉಂಟಾಗಿದ್ದ ದೊಡ್ಡ ಹೊಂಡಕ್ಕೆ ಹಿರಿಯ ವ್ಯಕ್ತಿಯೊಬ್ಬರು ಬಿದ್ದಾಗ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ.

  • Share this:

ಜೋಧ್‌ಪುರ: ರಸ್ತೆ ಮಧ್ಯದಲ್ಲಿಯೇ ಇದ್ದ ಬೃಹತ್ ಹೊಂಡಕ್ಕೆ ದ್ವಿಚಕ್ರ ವಾಹನವೊಂದು ಬಿದ್ದ ವಿಡಿಯೋವೊಂದು ಭಾರೀ ವೈರಲ್ (Viral Video) ಆಗುತ್ತಿದೆ. ರಾಜಸ್ಥಾನದ (Rajasthan Viral Video) ಭಗತ್ ಕಿ ಕೋಠಿ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದೆ ಎಂದು ಊಹಿಸಲಾಗಿದೆ. ಸ್ಥಳೀಯ ಮಾಧ್ಯಮಗಳ ಪ್ರಕಾರ ಈ ಘಟನೆಯಲ್ಲಿ ಬೈಕ್ ಜೊತೆಗೆ ರಸ್ತೆಯ ಹೊಂಡಕ್ಕೆ ಬಿದ್ದ (Scooty Fall In Pit) ವ್ಯಕ್ತಿಯನ್ನು ಜಲಮಂದ್ ಪ್ರದೇಶದ ನಿವಾಸಿಯಾದ ಭೋಪಾಲ್ ಸಿಂಗ್ ಎಂದು ಗುರುತಿಸಲಾಗಿದೆ. ಬೈಕ್ ಜೊತೆ ರಸ್ತೆಯಲ್ಲಿ ಉಂಟಾಗಿದ್ದ ದೊಡ್ಡ ಹೊಂಡಕ್ಕೆ ಹಿರಿಯ ವ್ಯಕ್ತಿಯೊಬ್ಬರು ಬಿದ್ದಾಗ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ.


ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಕಳಪೆ ರಸ್ತೆಗಳ ಕುರಿತು ನೆಟ್ಟಿಗರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ಮಗನ ಶಾಲೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ರಗಡ್ ಉತ್ತರ ಕೊಟ್ಟ ತಾಯಿ, ಮಮ್ಮಿ ರಾಕ್ ಟೀಚರ್ಸ್ ಶಾಕ್!


ಎಷ್ಟೋ ಸಾರಿ ಈ ಶಾಲೆಗಳು (School) ತಮ್ಮಲ್ಲಿ ದಾಖಲಾಗುವ ವಿದ್ಯಾರ್ಥಿಗಳ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಲು ಪೋಷಕರಿಗೆ (Parents) ಅನೇಕ ಪ್ರಶ್ನಾವಳಿಗಳಿರುವ ಫಾರ್ಮ್ ಗಳನ್ನು ತುಂಬಲು ಕೊಡುವುದನ್ನು ನಾವು ನೋಡಿರುತ್ತೇವೆ. ಹೀಗೆ ತಮ್ಮ ಮಕ್ಕಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಅವರಿಗೆ ಒದಗಿಸಿದರೆ, ಆ ಮಕ್ಕಳನ್ನು ಶಿಕ್ಷಕರು (Teacher) ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು ಅಂತ ಅವರ ಉದ್ದೇಶವಾಗಿರುತ್ತದೆ. ಹೀಗೆ ಫಾರ್ಮ್ ಕೊಟ್ಟಾಗ ಹೆಚ್ಚಿನ ಪೋಷಕರು ಕಾಟಾಚಾರಕ್ಕೆ ಏನೋ ಒಂದನ್ನು ಬರೆದರೆ, ಇನ್ನೂ ಕೆಲವು ಪೋಷಕರು ಇದು ಒಂದು ಔಪಚಾರಿಕತೆ ಅಂತ ತಿಳಿದುಕೊಂಡು ಏನೋ ಒಂದನ್ನು ಅದರಲ್ಲಿ ಬರೆದು (Write) ಕೊಡುವುದನ್ನು ನಾವು ನೋಡಿರುತ್ತೇವೆ. ಕೆಲವೊಂದು ಸಮಯದಲ್ಲಿ ನಾವು ಸಹ ಈ ಎರಡರಲ್ಲಿ ಒಂದನ್ನು ಮಾಡಿರುತ್ತೇವೆ.


ಇದನ್ನೂ ಓದಿ: Shocking: ಇತರ ವಿದ್ಯಾರ್ಥಿಗಳ ಮುಂದೆ ಬಾಲಕಿಯ ಯುನಿಫಾರ್ಮ್ ಕಳಚಿಸಿದ ಶಿಕ್ಷಕ


ಇಂತಹ ಪೋಷಕರ ನಡುವೆ ಇಲ್ಲೊಬ್ಬ ಅಪರೂಪದ ತಾಯಿಯನ್ನು ನಾವು ನೋಡಬಹುದು. ಹೌದು..ಅಮೆರಿಕದ ತಾಯಿಯೊಬ್ಬಳು ಶಾಲೆಯು ತನಗೆ ತನ್ನ 4 ವರ್ಷ ವಯಸ್ಸಿನ ಮಗನ ಬಗ್ಗೆ ಬರೆಯಲು ಹೇಳಿ ಕೆಲವು ಪ್ರಶ್ನೆಗಳನ್ನು ನೀಡಿದರೆ, ಈ ತಾಯಿ ಮುಕ್ತವಾಗಿ ಮತ್ತು ನೇರವಾಗಿ ಯಾವುದೇ ರೀತಿಯ ಮುಚ್ಚು ಮರೆಯಿಲ್ಲದೆ ಪ್ರತಿಕ್ರಿಯಿಸಿದ್ದಾಳೆ.


ಯಾರು ಈ ಎಮಿಲಿ ಗೌಲ್ಡ್?
ಇಂಟರ್ನೆಟ್ ಬಳಕೆದಾರರು ಮಹಿಳೆಯು ನೀಡಿದಂತಹ ಪ್ರಾಮಾಣಿಕ ಉತ್ತರಗಳನ್ನು ನೋಡಿ ತುಂಬಾನೇ ನಕ್ಕಿದ್ದಾರೆ. ನ್ಯೂಯಾರ್ಕ್ ಮ್ಯಾಗಜಿನ್ ನ ಲೇಖಕಿಯಾದ ಎಮಿಲಿ ಗೌಲ್ಡ್, ತನ್ನ 4 ವರ್ಷದ ಮಗ ಇಲ್ಯಾ ನ ಬಗ್ಗೆ ಶಾಲೆಯು ನೀಡಿದ ಫಾರ್ಮ್ ನಲ್ಲಿ ಕೇಳಿದ ಪ್ರಶ್ನೆಗಳಿಗೆ ಹೇಗೆ ಉತ್ತರಿಸಿದ್ದಾಳೆ ನೋಡಿ.


ಇದನ್ನೂ ಓದಿ: Xi Jinping: ಗೃಹ ಬಂಧನದಲ್ಲಿ ಚೀನಾ ಅಧ್ಯಕ್ಷ ಜಿನ್‌ಪಿಂಗ್?


ಈ ಫಾರ್ಮ್ ನ ಒಂದು ಫೋಟೋವನ್ನು ಈಗ ಟ್ವಿಟರ್ ನಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಓದಿದ ನಂತರ ನೀವು ನಿಸ್ಸಂದೇಹವಾಗಿ ಎಮಿಲಿಯ ಹಾಸ್ಯ ಪ್ರಜ್ಞೆಯನ್ನು ಹೊಗಳುತ್ತೀರಿ, ಏಕೆಂದರೆ ಅದು ತುಂಬಾ ಉಲ್ಲಾಸಕರವಾಗಿದೆ. ಶಾಲೆಯ ಫಾರ್ಮ್ ನಮೂನೆಯಲ್ಲಿ ಟೈಪ್ ಮಾಡಿದ ಉತ್ತರಗಳ ಫೋಟೋವೊಂದನ್ನು ಅವಳು ಟ್ವೀಟ್ ಮಾಡಿದ ಪೋಸ್ಟ್ ನಲ್ಲಿ ಸೇರಿಸಲಾಗಿದೆ.

Published by:ಗುರುಗಣೇಶ ಡಬ್ಗುಳಿ
First published: