Viral Video: ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಈಡಾದ ಪಾಕ್ ಪ್ರಧಾನಿ! ವಿಡಿಯೋ ವೈರಲ್

Pakistan PM Shehbaz Sharif : ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ RIA ಹಂಚಿಕೊಂಡ ವೀಡಿಯೊದಲ್ಲಿ ಶೆಹಬಾಜ್ ಹೆಡ್‌ಫೋನ್‌ ಧರಿಸಲು ತಿಣುಕುವಾಗ ವ್ಲಾದಿಮಿರ್ ಪುಟಿನ್ ನಗುತ್ತಿರುವುದನ್ನು ಕಾಣುತ್ತದೆ.

ಶೆಹಬಾಜ್ ಷರೀಫ್

ಶೆಹಬಾಜ್ ಷರೀಫ್

  • Share this:
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Pakistan PM Shehbaz Sharif) ಜಾಗತಿಕ ಮಟ್ಟದಲ್ಲಿ ನಗೆಪಾಟಲಿಗೆ ಈಡಾಗಿದ್ದಾರೆ. ಉಜ್ಬೇಕಿಸ್ತಾನ್‌ನಲ್ಲಿ ನಡೆದ ಪ್ರಾದೇಶಿಕ ಶೃಂಗಸಭೆ ನಡೆಯುತ್ತಿದ್ದು ನಿನ್ನೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆಗಿನ ಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಹೆಡ್​ಫೋನ್ ಹಾಕಿಕೊಳ್ಳಲು ಬರದೇ ಪರದಾಡಿದ ಘಟನೆ ನಡೆದಿದೆ. ರಷ್ಯಾದ ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್ (Viral Video) ಆಗಿದ್ದು ಟ್ರೋಲ್ (Shehbaz Sharif Troll) ಮಾಡುತ್ತಾ ನಗುತ್ತಿದ್ದಾರೆ.

ಉಜ್ಬೇಕಿಸ್ತಾನ್‌ನ ಸಮರ್ಕಂಡ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೆಡ್‌ಫೋನ್‌ಧರಿಸಲು ತಿಣುಕಾಡಿದ್ದಾರೆ. ಅವರ ಸ್ಥಿತಿ ನೋಡಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ ಮುಖದಲ್ಲೂ ಕೊಂಚ ನಗು ಮೂಡಿದೆ.ಎಲ್ಲರೂ ಷೇರ್ ಮಾಡ್ತಿದ್ದಾರೆ
ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ RIA ಹಂಚಿಕೊಂಡ ವೀಡಿಯೊದಲ್ಲಿ ಶೆಹಬಾಜ್ ಹೆಡ್‌ಫೋನ್‌ ಧರಿಸಲು ತಿಣುಕುವಾಗ ವ್ಲಾದಿಮಿರ್ ಪುಟಿನ್ ನಗುತ್ತಿರುವುದನ್ನು ಕಾಣುತ್ತದೆ. ಈ ವಿಡಿಯೋವನ್ನು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಕೂಡ ಹಂಚಿಕೊಂಡಿದೆ.

ಇದೇ ಸಂದರ್ಭದಲ್ಲಿ ಮಾತನಾಡಿದ  ಶೆಹಬಾಜ್ ಷರೀಫ್, ಪಾಕಿಸ್ತಾನ ಯಾವುದೇ ಸಮ್ಮಿತ್ ಅತವಾ ಸಮಾವೇಶಕ್ಕೆ ಬಂದಲ್ಲಿ ಹಣ ಕೇಳಲು ಭಿಕ್ಷುಕರಂತೆ ಬಂದಿದ್ದೇವೆ ಎಂದೇ ಇತರ ದೇಶಗಳು ಭಾವಿಸುತ್ತವೆ ಎಂದಿದ್ದಾರೆ. ಅಲ್ಲದೇ ನಾವು ಇತರ ದೇಶಗಳ ಮುಖ್ಯಸ್ಥರಿಗೆ ಫೋನ್ ಕರೆ ಮಾಡಿದರೂ ಸಹ ಅವರು ಹೀಗೇ ಭಾವಿಸುವುದು ನನ್ನ ಅನುಭವಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.

ಸಮ್ಮಿತ್​ನಲ್ಲಿ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶಾಂಘೈ ಸಹಕಾರ ಸಂಸ್ಥೆಯ ವಾರ್ಷಿಕ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಪ್ರಭಾವಿ ಗುಂಪಿನ ಇತರ ಸದಸ್ಯ ರಾಷ್ಟ್ರಗಳ ನಾಯಕರೊಂದಿಗೆ ಭಾಗವಹಿಸಿದ್ದರು. ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟು ಉಲ್ಬಣಗೊಂಡ ನಂತರ ಕ್ಸಿ ಮತ್ತು ಮೋದಿ ಮುಖಾಮುಖಿಯಾಗಿರುವುದು ಇದೇ ಮೊದಲ ಬಾರಿಗೆ.
Published by:ಗುರುಗಣೇಶ ಡಬ್ಗುಳಿ
First published: