ಕಮಲನಾಥ್ ಕೈ ಬಿಟ್ಟು, ಇಂದು ಕಮಲ ಹಿಡಿಯಲಿರುವ ಜ್ಯೋತಿರಾಧಿತ್ಯ ಸಿಂದಿಯಾ; ಸಂಜೆ 7ಕ್ಕೆ ಬಿಜೆಪಿ ಶಾಸಕರ ಸಭೆ

2018ರಂದು 230 ಸದಸ್ಯಬಲ ಮಧ್ಯಪ್ರದೇಶ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 114 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಮಹತ್ವದ ಗೆಲುವಿನಲ್ಲಿ ಜ್ಯೋತಿರಾಧಿತ್ಯ ಸಿಂದಿಯಾ ಅವರ ಪಾತ್ರವೂ ಪ್ರಮುಖವಾಗಿತ್ತು. ಅಷ್ಟೇ ಅಲ್ಲದೇ, ರಾಹುಲ್ ಗಾಂಧಿಗೆ ಆಪ್ತರೂ ಆಗಿದ್ದ ಸಿಂದಿಯಾ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯೂ ಆಗಿದ್ದರು.

ಕಮಲನಾಥ್ ಮತ್ತು ಜ್ಯೋತಿರಾಧಿತ್ಯ ಸಿಂದಿಯಾ

ಕಮಲನಾಥ್ ಮತ್ತು ಜ್ಯೋತಿರಾಧಿತ್ಯ ಸಿಂದಿಯಾ

 • Share this:
  ಭೋಪಾಲ್: ಕರ್ನಾಟಕದಲ್ಲಿ ಕಾಂಗ್ರೆಸ್​-ಜೆಡಿಎಸ್​ ಶಾಸಕರು ಬಂಡಾಯವೆದ್ದು, ಮೈತ್ರಿ ಸರ್ಕಾರವನ್ನು ಪತನಗೊಳಿಸಿದ ಮಾದರಿಯಲ್ಲಿಯೇ ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಕಾಂಗ್ರೆಸ್​ನ 20 ರೆಬೆಲ್ ಶಾಸಕರು ಸಿಎಂ ಕಮಲನಾಥ್ ನಾಯಕತ್ವಕ್ಕೆ ಅಸಮಾಧಾನ ಹೊಂದಿ, ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಕಮಲನಾಥ್ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಸರ್ಕಾರ ಬೀಳುವ ಕಾಲ ಸನ್ನಿಹಿತವಾಗಿದೆ.

  ಮಧ್ಯಪ್ರದೇಶ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್​ನ ಹಿರಿಯ ನಾಯಕ, ರಾಜವಂಶಸ್ಥ ಜ್ಯೋತಿರಾಧಿತ್ಯ ಸಿಂದಿಯಾ ಅವರ ಆಪ್ತ ಬಳಗದ 20 ಶಾಸಕರು ರಾಜೀನಾಮೆ ನೀಡುವ ಮೂಲಕ ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿಂದಿಯಾ ಕೂಡ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣ ನೀಡಿ, ಸಿಂದಿಯಾ ಅವರನ್ನು ಪಕ್ಷ ಉಚ್ಚಾಟನೆ ಮಾಡಿದೆ. ಏತನ್ಮಧ್ಯೆ ದೆಹಲಿಯಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವ ಸಿಂದಿಯಾ ಇಂದು ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಮುಂಬರುವ ರಾಜ್ಯಸಭೆ ಚುನಾವಣೆಯಲ್ಲಿ ಸಿಂದಿಯಾ ಅವರಿಗೆ ಬಿಜೆಪಿ ಟಿಕೆಟ್ ನೀಡುವ ಭರವಸೆ ನೀಡಿದೆ.

  2018ರಂದು 230 ಸದಸ್ಯಬಲ ಮಧ್ಯಪ್ರದೇಶ ವಿಧಾನಸಭೆಗೆ ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ 114 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ಮಹತ್ವದ ಗೆಲುವಿನಲ್ಲಿ ಜ್ಯೋತಿರಾಧಿತ್ಯ ಸಿಂದಿಯಾ ಅವರ ಪಾತ್ರವೂ ಪ್ರಮುಖವಾಗಿತ್ತು. ಅಷ್ಟೇ ಅಲ್ಲದೇ, ರಾಹುಲ್ ಗಾಂಧಿಗೆ ಆಪ್ತರೂ ಆಗಿದ್ದ ಸಿಂದಿಯಾ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯೂ ಆಗಿದ್ದರು. ಆದರೆ, ಮುಖ್ಯಮಂತ್ರಿ ಪಟ್ಟವನ್ನು ಕಮಲನಾಥ್ ಅವರಿಗೆ ನೀಡಲಾಗಿತ್ತು. ಆಗಿನಿಂದಲೂ ಸಿಂದಿಯಾ ಮತ್ತು ಅವರ ಬೆಂಬಲಿಗ ಶಾಸಕರಲ್ಲಿ ಅಸಮಾಧಾನದ ಬೇಗುದಿ ಹೊಗೆಯಾಡುತ್ತಿತ್ತು. ಇದೀಗೆ ಸಿಂದಿಯಾ ಬೆಂಬಲಿಸಿ ರಾಜೀನಾಮೆ ನೀಡಿರುವ 20 ಶಾಸಕರಲ್ಲಿ ಆರು ಮಂದಿ ರಾಜ್ಯದರ್ಜೆಯ ಸಚಿವರು ಸೇರಿದ್ದು, ಅವರನ್ನು ತಮ್ಮ ಸಚಿವ ಸಂಪುಟದಿಂದ ಕಿತ್ತು ಹಾಕಿ ಸಿಎಂ ಕಮಲನಾಥ್ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

  ರಾಜೀನಾಮೆ ನೀಡಿರುವ ರೆಬೆಲ್ ಶಾಸಕರಲ್ಲಿ ಒಬ್ಬರಾಗಿರುವ ಬಿಸಹುಲಾಲ್​ ಸಿಂಗ್, ನಾನು ನನ್ನ ಇಚ್ಛೆಯಂತೆ ಬೆಂಗಳೂರಿಗೆ ತೆರಳಿದ್ದೇನೆ. ಬಿಜೆಪಿಯ ಯಾರೊಬ್ಬರು ಸಂಪರ್ಕಿಸಿಲ್ಲ. ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಜಾರಿಗೆ ತಂದಿದ್ದ ರೈತ ಪರ ಯೋಜನೆಗಳನ್ನು ಕಮಲನಾಥ್ ಅವರು ತೆಗೆದುಹಾಕಿದ್ದರು. ಕಮಲನಾಥ್ ಕಾರ್ಯವೈಖರಿ ಹಲವು ಜನರಿಗೆ ಅಸಮಾಧಾನ ತರಿಸಿದೆ. ನನಗೆ ಚೆನ್ನಾಗಿ ಇನ್ನು ಹಲವು ಶಾಸಕರು ಕಾಂಗ್ರೆಸ್​ನಿಂದ ಹೊರಬರಲಿದ್ದಾರೆ ಎಂದು ಹೇಳಿದ್ದಾರೆ.

  ಇದನ್ನು ಓದಿ: ಕಾಂಗ್ರೆಸ್​ಗೆ ಜ್ಯೋತಿರಾಧಿತ್ಯ ಸಿಂಧಿಯಾ ರಾಜೀನಾಮೆ, ಬಿಜೆಪಿ ಸೇರ್ಪಡೆ ಸಾಧ್ಯತೆ: ಪತನದತ್ತ ಮಧ್ಯಪ್ರದೇಶ ಕಾಂಗ್ರೆಸ್​ ಸರ್ಕಾರ

  ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಬಿಜೆಪಿ ಸರ್ಕಾರ ರಚನೆಗೆ ಕಸರತ್ತು ಆರಂಭಿಸಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶ ಬಿಜೆಪಿ ಉಪಾಧ್ಯಕ್ಷ ವಿನಯ್ ಸಹಸ್ರಬುದ್ದೆ, ಇಂದು ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದೆ. ಕಾಂಗ್ರೆಸ್ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಪರಿಸ್ಥಿತಿ ನೋಡಿಕೊಂಡು ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಹೇಳಿದ್ದಾರೆ.

   
  First published: