ವೈರಲ್ ನ್ಯೂಸ್​: ವಿಡಿಯೋ ಗೇಮ್ ಆಡುವ ಮೂಲಕ ವಿಜ್ಞಾನಿಗಳಿಗೆ ಅಚ್ಚರಿ ಮೂಡಿಸಿದ ಹಂದಿಗಳು..!

ಪ್ರತಿಯೊಂದು ಹಂದಿ ಕೂಡ ತನಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ನಿರ್ವಹಿಸಿವೆ. ಜಾಯ್‌ಸ್ಟಿಕ್‌ನ ಚಲನೆಯನ್ನು ಕಂಪ್ಯೂಟರ್ ಪರದೆಯಲ್ಲಿರುವ ಕರ್ಸರ್‌ನೊಂದಿಗೆ ಸಂಪರ್ಕಿಸಲಾಗಿದೆ ಎಂದು ಈ ಬುದ್ಧಿವಂತ ಪ್ರಾಣಿ ಸರಿಯಾಗಿ ಅರ್ಥಮಾಡಿಕೊಂಡಿದೆ. ಹೀಗಾಗಿ ಅದು ವಿಡಿಯೋ ಗೇಮ್ ಆಡುವ ತರಬೇತಿಯಲ್ಲಿ ಸಕ್ಸಸ್ ಆಗಿದೆ ಎಂದು ತಿಳಿದುಬಂದಿದೆ.

ವಿಡಿಯೋ ಗೇಮ್​​ ಆಡುತ್ತಿರುವ ಹಂದಿ

ವಿಡಿಯೋ ಗೇಮ್​​ ಆಡುತ್ತಿರುವ ಹಂದಿ

 • Share this:
  ಬುದ್ಧಿವಂತ ಪ್ರಾಣಿಗಳಲ್ಲಿ ಹಂದಿಗಳಿಗೂ ಮಹತ್ವದ ಸ್ಥಾನವಿದೆ. ಯಾವುದೇ ವಿಷಯವನ್ನು ಸರಿಯಾಗಿ ಗ್ರಹಿಸಿ ಅದರಂತೆ ನಡೆದುಕೊಳ್ಳುವ ಪ್ರಾಣಿ ಎಂದರೆ ಅದು ಹಂದಿ. ಯಾವುದೇ ಕೆಲಸವಾದರೂ ಸರಿ ಅದಕ್ಕೆ ಸರಿಯಾಗಿ ತರಬೇತಿ ನೀಡಿದ್ರೆ ಸಾಕು ನೆನಪಿಟ್ಟುಕೊಂಡು ಅದನ್ನು ಮಾಡುತ್ತೆ. ಹಂದಿ ಎಂದು ಮೂಗು ಮುರಿಯುವ ಬಹುತೇಕರಿಗೆ ಅದರ ಬುದ್ಧಿವಂತಿಕೆ ಬಗ್ಗೆ ತಿಳಿದಿಲ್ಲ. ಉತ್ತಮ ನೆನಪಿನ ಶಕ್ತಿಯ ಜೊತೆಗೆ ಗುರಿ ಶಕ್ತಿ ಕೂಡ ಹಂದಿಗಿದೆ. ಕೆಲವು ಸಾರಿ ಮನುಷ್ಯನಿಗೇ ಅದು ಸವಾಲು ಹಾಕುತ್ತದೆ. ಅದು ವಿಡಿಯೋ ಗೇಮ್ ಕೂಡ ಆಡುತ್ತೆ..!

  ಹೌದು, ವಿಜ್ಞಾನಿಗಳು ಹಂದಿಗಳಿಗೆ ವಿಡಿಯೋ ಗೇಮ್ ಆಡುವ ಬಗ್ಗೆ ತರಬೇತಿ ನೀಡಿದ್ದಾರೆ. ಆಶ್ಚರ್ಯವೆಂದರೆ ಹಂದಿಗಳು ಅದರಲ್ಲಿ ಸಕ್ಸಸ್ ಆಗಿ ಎಲ್ಲರನ್ನೂ ನಿಬ್ಬೆರಗಾಗಿಸುವಂತೆ ಮಾಡಿವೆ. ಯಾರ್ಕ್‌ಷೈರ್ ನ ಹಂದಿಗಳಾದ ಹ್ಯಾಮ್ಲೆಟ್, ಆಮ್ಲೆಟ್ ಮತ್ತು ಪ್ಯಾನೆಪಿಂಟೋ ಹಾಗೂ ಸೂಕ್ಷ್ಮ ಹಂದಿಗಳಾದ ಎಬೊನಿ ಮತ್ತು ಐವರಿ ಜಾತಿಯ ಹಂದಿಗಳು ವಿಡಿಯೋ ಗೇಮ್ ಆಡುವುದನ್ನು ಕಲಿಯಬಹುದೇ ಎಂದು ಪರೀಕ್ಷಿಸಲು ವಿಜ್ಞಾನಿಗಳು ಪ್ರಯೋಗವೊಂದನ್ನು ನಡೆಸಿದ್ದಾರೆ. ಈ ಪರೀಕ್ಷೆಯಲ್ಲಿ ಹಂದಿಗಳು ಸಕ್ಸಸ್ ಆಗಿದ್ದು, ಅವುಗಳ ಬುದ್ಧಿವಂತಿಕೆಗೆ ಮಾರುಹೋಗಿದ್ದಾರೆ.

  ವಿಮಾನ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ; ವಿಮಾನಯಾನ ಶುಲ್ಕ ಮಿತಿಗಳು ಶೇ. 30 ರವರೆಗೆ ಹೆಚ್ಚಳ

  ಪರ್ಡ್ಯೂ ಪ್ರಾಣಿಗಳ ನಡವಳಿಕೆ ತಜ್ಞರಾದ ಕ್ಯಾಂಡೇಸ್ ಕ್ರೋನಿ ಮತ್ತು ಚಿಂಪಾಂಜಿ ಅರವಳಿಕೆ ತಜ್ಞ ಸಾರಾ ಬಾಯ್ಸೆನ್ ಅವರು ನಡೆಸಿದ ಹಂದಿಗಳ ಕುರಿತು ಅಧ್ಯಯನ ನಡೆಸಿದ್ದು, ಈ ಬಗ್ಗೆ ಫ್ರಾಂಟಿಯರ್ಸ್ ಇನ್ ಸೈಕಾಲಜಿ ಜರ್ನಲ್ ನಲ್ಲಿ ವರದಿ ಪ್ರಕಟವಾಗಿದೆ. ಪ್ರಾಣಿಗಳ ನೆನಪಿನ ಶಕ್ತಿ, ಗಮನ ಮತ್ತು ಪರಿಕಲ್ಪನೆ ಕುರಿತು ನಡೆಸಿದ ಪ್ರಯೋಗವನ್ನು ಈ ಅಧ್ಯಯನ ವರದಿ ತಿಳಿಸುತ್ತದೆ.

  ಈ ಪ್ರಯೋಗವು ಮೊದಲ ಭಾಗವಾಗಿ ಹಂದಿಗಳಿಗೆ ಜಾಯ್‌ಸ್ಟಿಕ್ ಅನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಕಲಿಸಲಾಯಿತು. ನಂತರ ಮಾನಿಟರ್‌ನಲ್ಲಿ ವಿಡಿಯೋ ಗೇಮ್ ಆಡಲು ಜಾಯ್‌ಸ್ಟಿಕ್ ಅನ್ನು ಬಳಸಲು ಕಲಿಸಲಾಯಿತು. ಈ ತರಬೇತಿಯಲ್ಲಿ ಹಂದಿಗಳು ತುಂಬಾ ಆಸಕ್ತಿ ತೋರಿಸಿ ವಿಡಿಯೋ ಗೇಮ್ ಆಡುವುದನ್ನು ಕಲಿಯುವ ಸಾಮರ್ಥ್ಯವನ್ನು ಪ್ರದರ್ಶಿಸಿವೆ.

  ಪ್ರತಿಯೊಂದು ಹಂದಿ ಕೂಡ ತನಗೆ ಸಿಕ್ಕ ಅವಕಾಶವನ್ನು ಉತ್ತಮವಾಗಿ ನಿರ್ವಹಿಸಿವೆ. ಜಾಯ್‌ಸ್ಟಿಕ್‌ನ ಚಲನೆಯನ್ನು ಕಂಪ್ಯೂಟರ್ ಪರದೆಯಲ್ಲಿರುವ ಕರ್ಸರ್‌ನೊಂದಿಗೆ ಸಂಪರ್ಕಿಸಲಾಗಿದೆ ಎಂದು ಈ ಬುದ್ಧಿವಂತ ಪ್ರಾಣಿ ಸರಿಯಾಗಿ ಅರ್ಥಮಾಡಿಕೊಂಡಿದೆ. ಹೀಗಾಗಿ ಅದು ವಿಡಿಯೋ ಗೇಮ್ ಆಡುವ ತರಬೇತಿಯಲ್ಲಿ ಸಕ್ಸಸ್ ಆಗಿದೆ ಎಂದು ತಿಳಿದುಬಂದಿದೆ. ಸರಿಯಾಗಿ ಆಟವಾಡಿದ ಹಂದಿಗಳಿಗೆ ಆಹಾರವನ್ನು ಬಹುಮಾನವಾಗಿ ನೀಡಲಾಯಿತು. ಇದರಿಂದ ಮತ್ತಷ್ಟು ಖುಷಿಯಾದ ಹಂದಿಗಳು ಸರಿಯಾಗಿ ವಿಡಿಯೋ ಗೇಮ್ ಆಡುವ ಮೂಲಕ ವಿಜ್ಞಾನಿಗಳನ್ನೇ ಆಶ್ಚರ್ಯಚಕಿತರನ್ನಾಗಿಸಿವೆ.

  ಈ ಅಧ್ಯಯನವು ಹಂದಿಯ ಬುದ್ಧಿಮತ್ತೆಯ ತಿಳುವಳಿಕೆ ಮತ್ತು ಪ್ರಾಣಿಗಳ ಕಲಿಯುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಕಂಪ್ಯೂಟರ್‌ಗಳು ಮತ್ತು ಚಿಹ್ನೆಗಳನ್ನು ಹಂದಿಗಳೊಂದಿಗಿನ ಸಂವಹನಕ್ಕಾಗಿ ಬಳಸಬಹುದೇ ಎಂದು ತಿಳಿದುಕೊಳ್ಳಲು ಹೆಚ್ಚುವರಿ ಅಧ್ಯಯನ ನಡೆಸಲು ವಿಜ್ಞಾನಿಗಳು ಆಸಕ್ತಿ ಹೊಂದಿದ್ದಾರೆ. ಹಂದಿಗಳ ಜಾಣತನಕ್ಕೆ ಮಾರುಹೋಗಿರುವ ಸಂಶೋಧಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
  Published by:Latha CG
  First published: