Fish Skeleton: 380 ಮಿಲಿಯನ್‌ ವರ್ಷ ಹಳೆಯ ಮೀನಿನ ಹೃದಯದ ಪಳೆಯುಳಿಕೆ ಪತ್ತೆ

Fish Skeleton: ಆಸ್ಟ್ರೇಲಿಯಾದ ವಿಜ್ಞಾನಿಗಳು ಒಂದು ಮೀನಿನ ಹೃದಯದ ಪಳೆಯುಳಿಕೆಯನ್ನು ಕಂಡುಹಿಡಿದ್ದಾರೆ. ಆ ಮೀನಿನ ಹೃದಯದ ಪಳೆಯುಳಿಕೆ ಎಷ್ಟು ವರ್ಷ ಹಳೆಯದು ಎಂಬುದು ನಿಮಗೆ ಗೊತ್ತಾ?

ಮೀನಿನ ಹೃದಯದ ಪಳೆಯುಳಿಕೆ

ಮೀನಿನ ಹೃದಯದ ಪಳೆಯುಳಿಕೆ

  • Share this:
ಈ ಪ್ರಪಂಚದಲ್ಲಿ ದಿನಕ್ಕೊಂದು ಸಂಶೋಧನೆಗಳು (Research) ನಡೆಯುತ್ತಲೇ ಇರುತ್ತವೆ. ವಿಜ್ಞಾನ ಲೋಕವೇ ಹಾಗೆ ಅಲ್ಲವೇ? ವಿಜ್ಞಾನದಲ್ಲಿ ಎಷ್ಟು ಸಂಶೋಧನೆಗಳು ನಡೆದರೂ ಕಡಿಮೆಯೇ ಬಿಡಿ. ಏಕೆಂದರೆ ವಿಜ್ಞಾನ (Science)  ಎಂದರೆ ಹೊಸತು, ಆ ಹೊಸತಲ್ಲಿ ಮತ್ತೊಂದು ಹೊಸ ವಿಷಯ (Subject) ಹೀಗೆ ಸಾಗುತ್ತಲೇ ಇರುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಹಲವು ಹೊಸತರ ಆವಿಶ್ಕಾರ. ಈ ಸಂಶೋಧನೆಯ ಹೊಸ ಪಟ್ಟಿಗೆ ಈಗ ಆಸ್ಟ್ರೇಲಿಯಾದ (Australia)  ವಿಜ್ಞಾನಿಗಳು ಕೂಡ ಸೇರುತ್ತಿದ್ದಾರೆ. ಅದೇನು ಸಂಶೋಧನೆ? ಆ ಸಂಶೋಧನೆಯನ್ನು ಹೇಗೆ ಮಾಡಿದ್ದಾರೆ? ಹೀಗೆ ಇನ್ನಿತರ ವಿಷಯಗಳನ್ನು ಸವಿಸ್ತಾರವಾಗಿ ನಾವಿಂದು ಚರ್ಚಿಸೋಣ. ಹೆಚ್ಚಿನ ಮಾಹಿತಿಗೆ ಮುಂದೆ ಓದಿ.

ಆಸ್ಟ್ರೇಲಿಯಾದ ವಿಜ್ಞಾನಿಗಳು ಒಂದು ಮೀನಿನ ಹೃದಯದ ಪಳೆಯುಳಿಕೆಯನ್ನು ಕಂಡುಹಿಡಿದ್ದಾರೆ. ಆ ಮೀನಿನ ಹೃದಯದ ಪಳೆಯುಳಿಕೆ ಎಷ್ಟು ವರ್ಷ ಹಳೆಯದು ಎಂಬುದು ನಿಮಗೆ ಗೊತ್ತಾ? ಅದು ಬರೋಬ್ಬರಿ 380 ಮಿಲಿಯನ್ ವರ್ಷ ಹಳೆಯ ಪಳೆಯುಳಿಕೆ ಆಗಿದೆ. ಆ ಪಳೆಯುಳಿಕೆ ಹೃದಯದ್ದು ಎಂಬುದು ಮತ್ತಷ್ಟು ವಿಶೇಷ ಆಗಿದೆ. ಈ ಆವಿಷ್ಕಾರವನ್ನು ಮಾಡಿರುವ ಕರ್ಟಿನ್ ವಿಶ್ವವಿದ್ಯಾನಿಲಯದ ರೇಸಿಂಗ್‌ನ ಸಂಶೋಧಕರು ಮೀನಿನ ಹೃದಯವನ್ನು ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ.

ಈ ಪಳೆಯುಳಿಕೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಹೋದಾಗ ಇದು ಮಾನವರಿಗೆ ಇರುವಂತೆ ದವಡೆಯ ಕಶೇರುಕಗಳ ವಿಕಾಸದ ಬಗ್ಗೆ ಸುಳಿವುಗಳನ್ನು ನೀಡುತ್ತದೆ ಎಂದು CNET ಯ ವರದಿ ತಿಳಿಸಿದೆ. ಪಳೆಯುಳಿಕೆಯು ಹೊಟ್ಟೆ, ಕರುಳು ಮತ್ತು ಯಕೃತ್ತನ್ನು ಸಹ ಒಳಗೊಂಡಿದೆ, ಈ ಅಂಗಗಳು ಶಾರ್ಕ್‌ ಮೀನಿನ ಅಂಗರಚನಾಶಾಸ್ತ್ರವನ್ನು ಹೋಲುತ್ತವೆ. ಈ ಸಂಶೋಧನೆಯ ವಿವರಗಳನ್ನು ಸೈನ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ದವಡೆ ಹಲ್ಲು ಹೊಂದಿರುವ ಮೀನು

CNET ವರದಿಯು, ಇಲ್ಲಿ ಸಿಕ್ಕಿರುವ ಹೃದಯದ ಪಳೆಯುಳಿಕೆಯನ್ನು ಗಮನಿಸಿದಾಗ ತಿಳಿಯುವ ಮಾಹಿತಿ ಎಂದ್ರೆ 358 ಮಿಲಿಯನ್ ವರ್ಷಗಳ ಹಿಂದೆ ಅಳಿವಿನಂಚಿನಲ್ಲಿರುವ ಆರ್ತ್ರೋಡೈರ್ ಕುಟುಂಬದ ಮೀನುಗಳ ಪಳೆಯುಳಿಕೆಗೆ ಇದು ಸೇರಿದೆ ಎಂದು ಹೇಳಿದೆ. ಆದರೆ ಈಗ ಸಿಕ್ಕಿರುವ ಮಾದರಿಯು ಪ್ರಸ್ತುತ ದಾಖಲೆ ಹೊಂದಿರುವ ಪಳೆಯುಳಿಕೆಗಿಂತ ಹಳೆಯದಾದ ಪಳೆಯುಳಿಕೆ ಆಗಿದೆ. ಅದರಲ್ಲಿ ಮುಖ್ಯವಾಗಿ ಮೀನಿನಲ್ಲಿರುವ ದವಡೆಯ ವಿಕಾಸವು ವಿಭಿನ್ನವಾಗಿದೆ.

ಇದನ್ನೂ ಓದಿ: ಮೇಘಾಲಯದ ಈ ವಿಶ್ವವಿಖ್ಯಾತ ಏಕಶಿಲೆಗಳ ಇತಿಹಾಸ ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ

S ಆಕಾರದ ಹೃದಯ

ಈ ಮೀನಿನ ಹೃದಯವು ಎಸ್-ಆಕಾರದಲ್ಲಿದೆ ಮತ್ತು ಎರಡು ಹೃದಯದ ಕೋಣೆಗಳನ್ನು ಹೊಂದಿದೆ. ಇದು ಮೀನು ಮತ್ತು ಆಧುನಿಕ ಶಾರ್ಕ್‌ಗಳ ನಡುವೆ ಹೋಲಿಕೆಗಳನ್ನು ಕಂಡುಹಿಡಿಯಲು ಸಂಶೋಧಕರಿಗೆ ಒಂದು ನೇರ ಕಾರಣವಾಯಿತು. "ಈ ವಿಕಸನವನ್ನು ಸಾಮಾನ್ಯವಾಗಿ ಸಣ್ಣ ಹಂತಗಳ ಸರಣಿ ಎಂದು ಭಾವಿಸಲಾಗುತ್ತದೆ. ಆದರೆ ಈ ಪುರಾತನ ಪಳೆಯುಳಿಕೆಗಳು ದವಡೆಯಿಲ್ಲದ ಮತ್ತು ದವಡೆಯ ಕಶೇರುಕಗಳ ನಡುವೆ ದೊಡ್ಡ ಬದಲಾವಣೆಯನ್ನು ಸೂಚಿಸುತ್ತವೆ" ಎಂದು ಕರ್ಟಿನ್ ವಿಶ್ವವಿದ್ಯಾಲಯದ ಕಶೇರುಕ ಪ್ರಾಗ್ಜೀವಶಾಸ್ತ್ರಜ್ಞ ಮತ್ತು ಸಂಶೋಧನೆಗಳ ಅಧ್ಯಯನದ ಸಹ-ಲೇಖಕ, ಪ್ರೊಫೆಸರ್ ಕೇಟ್ ಟ್ರಿನಾಜ್ಸ್ಟಿಕ್ ಹೇಳಿದರು.

ಇದನ್ನೂ ಓದಿ: ಮತ್ಸ್ಯಕನ್ಯೆಯಾಗಿ ಗುರುತಿಸಿಕೊಂಡು ತಿಂಗಳಿಗೆ 6 ಲಕ್ಷ ರೂಪಾಯಿ ದುಡಿಯುತ್ತಿದ್ದಾಳೆ ಈಕೆ!

ಮೀನಿನ ಅಂಗ ರಚನೆ

"ಈ ಮೀನುಗಳು ಅಕ್ಷರಶಃ ತಮ್ಮ ಹೃದಯವನ್ನು ತಮ್ಮ ಬಾಯಿಯಲ್ಲಿ ಮತ್ತು ಕಿವಿರುಗಳ ಅಡಿಯಲ್ಲಿ ಹೊಂದಿವೆ. ಶಾರ್ಕ್‌ ಮೀನುಗಳು ಹೊಂದಿರುವ ಹಾಗೆಯೇ ಇದು ಕೂಡ ಅದೇ ಅಂಗರಚನೆಯನ್ನು ಹೊಂದಿದೆ" ಎಂದು ಪ್ರೋಪೆಸರ್‌ ಕೇಟ್‌ ಹೇಳಿದರು.ಇಂಡಿಪೆಂಡೆಂಟ್‌ ವೆಬ್‌ಸೈಟ್‌ನ ವರದಿಯ ಪ್ರಕಾರ, “ಪಶ್ಚಿಮ ಆಸ್ಟ್ರೇಲಿಯಾದ ಕಿಂಬರ್ಲಿ ಪ್ರದೇಶದಲ್ಲಿ ಗೊಗೊ ರಚನೆಯಲ್ಲಿ ಈ ಪಳೆಯುಳಿಕೆ ಕಂಡುಬಂದಿದೆ.

ಡೆವೊನಿಯನ್ ಅವಧಿಯ ಅಂತ್ಯದಿಂದ ಸಂರಕ್ಷಿಸಲ್ಪಟ್ಟ ವಿಶಿಷ್ಟ ಪ್ರಾಣಿ ಮತ್ತು ಸಸ್ಯವರ್ಗಕ್ಕೆ ಈ ಪ್ರದೇಶವು ಹೆಸರುವಾಸಿಯಾಗಿದೆ. ಈ ಅಧ್ಯಯನವು ನಿಜವಾಗಿಯೂ ಪ್ಯಾಲಿಯಂಟಾಲಜಿಸ್ಟ್‌ನ ಕನಸುಗಳ ವಿಷಯ” ಎಂದು ಫ್ಲಿಂಡರ್ಸ್ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಮತ್ತು ಅಧ್ಯಯನದ ಸಹ ಲೇಖಕ ಜಾನ್ ಲಾಂಗ್ ಈ ಆವಿಷ್ಕಾರವನ್ನು ವಿವರಿಸಿದ್ದಾರೆ.
First published: