HOME » NEWS » National-international » SCIENTISTS FIND LIFE UNDER 2860 FEET OF AN ICE SHELF AT ANTARCTICA SNVS

ಅಂಟಾರ್ಟಿಕಾ ಹಿಮಗಡ್ಡೆಯ 3000 ಅಡಿ ಕೆಳಗೆ ಜೀವಿಗಳು ಪತ್ತೆ; ಶಾಕ್ ಆದ ವಿಜ್ಞಾನಿಗಳು

ಅಂಟಾರ್ಟಿಕಾ ಖಂಡದ ಬೃಹತ್ ಹಿಮಗಡ್ಡೆಯ 2,860 ಅಡಿ ಕೆಳಗೆ ಸಣ್ಣ ಬಂಡೆಯೊಂದರಲ್ಲಿ ಅಂಟಿಕೊಂಡಿದ್ದ ಎರಡು ವಿಧದ ಜೀವಿಗಳು ವಿಜ್ಞಾನಿಗಳ ಕಣ್ಣಿಗೆ ಬಿದ್ದಿದೆ. ಜೀವಿಗಳಿರಲು ಸಾಧ್ಯವೇ ಇಲ್ಲ ಎನ್ನುವಂಥ ವಾತಾವರಣದಲ್ಲಿ ಇವು ಹೇಗೆ ಬದುಕಿವೆ ಎಂಬಿತ್ಯಾದಿ ಪ್ರಶ್ನೆಗಳು ವಿಜ್ಞಾನಿಗಳನ್ನ ಕಾಡುತ್ತಿವೆ.

news18
Updated:February 17, 2021, 1:14 PM IST
ಅಂಟಾರ್ಟಿಕಾ ಹಿಮಗಡ್ಡೆಯ 3000 ಅಡಿ ಕೆಳಗೆ ಜೀವಿಗಳು ಪತ್ತೆ; ಶಾಕ್ ಆದ ವಿಜ್ಞಾನಿಗಳು
ಅಂಟಾರ್ಟಿಕಾದಲ್ಲಿ ಪತ್ತೆಯಾದ ಜೀವಿಗಳು
  • News18
  • Last Updated: February 17, 2021, 1:14 PM IST
  • Share this:
ಭೂಮಿಯ ಆರು ಖಂಡಗಳಲ್ಲಿ ಒಂದಾದ ಅಂಟಾರ್ಟಿಕಾದಲ್ಲಿ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳೂ ವಾಸ ಮಾಡಲು ಬಹಳ ಕ್ಲಿಷ್ಟಕರ ವಾತಾವರಣ ಇದೆ. ಸಂಪೂರ್ಣ ಮಂಜುಗಡ್ಡೆಗಳಿಂದ ಆವೃತವಾಗಿರುವ ಇಲ್ಲಿ ಮೈಮರಗಟ್ಟಿಸುವ ಚಳಿ, ಬೆಳಕು ಮತ್ತು ಆಹಾರದ ಕೊರತೆಯಿಂದ ಜೀವಿಗಳು ಬದುಕಲು ಆಗುವುದೇ ಇಲ್ಲ ಎಂದು ತಿಳಿಯಲಾಗಿದೆ. ಅಲ್ಲಿ ಸರಿಯಾಗಿ ಅನ್ವೇಷಣೆ ಮಾಡುವ ಗೊಡವೆಗೇ ಮಾನವ ಹೋಗಿಲ್ಲ. ಈ ಖಂಡದಲ್ಲಿರುವ ಹಿಮಗಡ್ಡೆಗಳ ಮೇಲೆಯೇ ಜೀವಿಗಳು ಬದಕಲು ಅಸಾಧ್ಯ ಇರುವಾಗ ಮಂಜಿನ ಕೆಳಗೆ ಜೀವ ಇರಲು ಸಾಧ್ಯವಾ? ಅದರಲ್ಲೂ ಸಾವಿರಾರು ಅಡಿ ಕೆಳಗೆ ಜೀವ ಹೇಗೆ ಸಾಧ್ಯ? ಸಾಧ್ಯವೇ ಇಲ್ಲ ಎಂತಿದ್ದವರಿಗೆ ವಿಜ್ಞಾನಿಗಳಿಗೆ ಈಗ ಅಚ್ಚರಿಯ ಶಾಕ್ ಸಿಕ್ಕಿದೆ. ಅಂಟಾರ್ಟಿಕಾದ ಬೃಹತ್ ಮಂಜುಗಡ್ಡೆಯೊಂದರ 3000 ಅಡಿ ಕೆಳಗೆ ಜೀವಿಗಳಿರುವುದು ವಿಜ್ಞಾನಿಗಳಿಗೆ ಆಕಸ್ಮಿಕವಾಗಿ ಪತ್ತೆಯಾಗಿದೆ.

ಅಂಟಾರ್ಟಿಕಾ ಖಂಡದಲ್ಲಿ ಹಲವು ಬೃಹತ್ ಹಿಮಗಡ್ಡೆಗಳಿವೆ. ಫಿಲ್​ಶ್ನರ್-ರೋನ್ನೆ (Filchner-Ronne) ಎಂದು ಹೆಸರಿಸಲಾಗಿರುವ ಹಿಮಗಡ್ಡೆ(Ice Shelves) ಎರಡನೇ ಅತಿದೊಡ್ಡದು. ಇದೊಂದೇ 15 ಲಕ್ಷ ಚದರ ಅಡಿ ವಿಸ್ತಾರ ಇದೆ. ಅಂದರೆ ಭಾರತ ದೇಶದ ಅರ್ಧಭಾಗದಷ್ಟು ವಿಸ್ತೀರ್ಣ ಹೊಂದಿದೆ. ಈ ಹಿಮಗಡ್ಡೆಯ ಕೆಳಗೆ ಈಗ ಜೀವಿಗಳು ಪತ್ತೆಯಾಗಿವೆ. ಬ್ರಿಟಿಷ್ ಅಂಟಾರ್ಟಿಕ್ ಸರ್ವೇ ಸಂಸ್ಥೆಯ ತಜ್ಞರು ಅಧ್ಯಯನದ ಉದ್ದೇಶದಿಂದ ಈ ಹಿಮಗಡ್ಡೆಯ ತಳದಲ್ಲಿ ಸ್ಯಾಂಪಲ್ ಕಲೆಹಾಕಲು ತಳದವರೆಗೆ ಡ್ರಿಲ್ ಮಾಡಿ ಶೋಧಿಸಿದ್ದಾರೆ. ಈ ಜಾಗವು ಬಹಿರಂಗ ಸಮುದ್ರದಿಂದ 580 ಕಿಮೀ ದೂರದಲ್ಲಿದೆ. ಈ ಜಾಗದಲ್ಲಿ ಡ್ರಿಲ್ ಮಾಡುವ ವೇಳೆ 2,860 ಅಡಿ ಕೆಳಗೆ ಒಂದು ಸಣ್ಣ ಬಂಡೆ ಸಿಕ್ಕಿದೆ. ಅದನ್ನ ಪರಿಶೀಲಿಸಿದಾಗ ಆ ಬಂಡೆಗೆ ಅಂಟಿಕೊಂಡಿದ್ದ ಜೀವಿಗಳಿರುವುದು ಕಣ್ಣಿಗೆ ಬಿದ್ದಿದೆ. ಎರಡು ವಿಧದ ಜೀವಿಗಳು ಇಲ್ಲಿ ಕಾಣಸಿಕ್ಕಿವೆ. ಇವು ನೋಡಲು ಸ್ಪಾಂಜ್​ಗಳ ರೀತಿ ಇವೆ.

ಇದನ್ನೂ ಓದಿ: ವೈದ್ಯಲೋಕಕ್ಕೆ ಸಲಾಂ: ಮೆಟ್ರೋ ರೈಲಿನಲ್ಲಿ ಹೃದಯ ಸಾಗಿಸಿ ಕಸಿ ಮಾಡಿದ್ದ ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆ!

ಕೆಂಪು ಬಣ್ಣದ ಒಂದು ವಿಧದ ಜೀವಿ ಕಡ್ಡಿಯಂತೆ ಚಾಚಿದೆ. ಮತ್ತೊಂದು ಜೀವಿ ದುಂಡನೆಯ ಸ್ಪಾಂಜ್​ನಂತೆ ಇದೆ. ಇವು ಬಂಡೆಗೆ ಅಂಟಿಕೊಂಡು ನಿಶ್ಚಲವಾಗಿದ್ದಂತೆ ಕಂಡುಬಂದಿದೆ. ಈ ಜೀವಿಗಳು ಅಲ್ಲಿ ಹೇಗೆ ಇವೆ? ಆಹಾರಕ್ಕಾಗಿ ಏನು ಮಾಡುತ್ತವೆ? ಎಷ್ಟು ಕಾಲದಿಂದ ಅಲ್ಲಿ ಇವೆ ಎಂಬಿತ್ಯಾದಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ವಿಜ್ಞಾನಿಗಳನ್ನ ಕಾಡುತ್ತಿದೆ. ಇಲ್ಲಿ ಇನ್ನಷ್ಟು ಸಂಶೋಧನೆಯ ಅಗತ್ಯ ಇದೆ ಎಂದು ವಿಜ್ಞಾನಿಗಳು ನಿರ್ಧರಿಸಿದ್ದು, ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಹೆಚ್ಚಿನ ಬೆಳಕು ಮತ್ತು ಉತ್ತರ ಸಿಗಬಹುದು.

ಹಾಗೆಯೇ, ಮಂಜಿನಿಂದಲೇ ಆವೃತವಾದ ಭೂಮಿಯೇತರ ಗ್ರಹಗಳಲ್ಲಿ ಜೀವಿಗಳಿರುವ ಸಾಧ್ಯತೆ ಇರಬಹುದು ಎಂಬ ಕುತೂಹಲವನ್ನೂ ಇದು ಹುಟ್ಟುಹಾಕಿದೆ.
Published by: Vijayasarthy SN
First published: February 17, 2021, 1:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories