ಹತ್ತಾರು ವಿಜ್ಞಾನಿಗಳು ಮತ್ತು ಸಂಶೋಧಕರ ತಂಡವು ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲ ವಿಜ್ಞಾನಿಗಳನ್ನು ಕುತೂಹಲ ಕೆರಳಿಸಿದ್ದ ಬೋಫಿನ್ ಎಂಬ ಮೀನಿಗಾಗಿ 'ಕ್ರೋಮೋಸೋಮ್-ಲೆವೆಲ್ ಜೀನೋಮ್ ಅಸೆಂಬ್ಲಿ'ಯನ್ನು ಡಿಕೋಡ್ ಮಾಡಿ ಅಭಿವೃದ್ಧಿಪಡಿಸಿದೆ. ಏಕೆಂದರೆ ಬೋಫಿನ್‌ನಲ್ಲಿ ಪೂರ್ವಜರ ಲಕ್ಷಣಗಳ ಸಮೃದ್ಧಿ ಇದ್ದು, ಇದು ವಿಕಾಸದ ಆರಂಭಿಕ ಹಂತಗಳಲ್ಲಿ ಮಾನವರೊಂದಿಗೆ ಹೊಂದಿಕೆಯಾಗುತ್ತದೆ ಎನ್ನಲಾಗಿದೆ. ಉದಾಹರಣೆಗೆ ದೃಢವಾದ ಫಿನ್-ಅಸ್ಥಿಪಂಜರ, ಕಡಿಮೆ ಬಾಲ ಮತ್ತು ಶ್ವಾಸಕೋಶದಂತೆ ಗಾಳಿಯ ಮೂಲಕ ಉಸಿರಾಟದ ಪ್ರಕ್ರಿಯೆಯನ್ನು ಈ ಮೀನು ಹೊಂದಿದೆ. ಸ್ಪಾರ್ತನ್ಸ್ ಎಂದು ಕರೆಯಲ್ಪಡುವ ಈ ಸಂಶೋಧಕರ ತಂಡವು ಸಾಧಿಸಿದ ಸಾಧನೆಯು ಅಪಾರ ಪ್ರಾಮುಖ್ಯತೆ ಹೊಂದಿದೆ. ಏಕೆಂದರೆ ಬೋಫಿನ್ ಅಪರೂಪದ ಮೀನು ಮತ್ತು ಎಲುಬಿನ ರಚನೆಯಿಂದ ಬೆಂಬಲಿತವಾದ ಚರ್ಮದ ವೆಬ್‌ನಿಂದ ಮಾಡಿದ ರೆಕ್ಕೆಗಳನ್ನು ಹೊಂದಿದೆ. ಇದನ್ನು ಆ್ಯಕ್ಟಿನೊಪೆಟರಿಜಿ ಎಂಬ ತಂಡದಲ್ಲಿ ಉಳಿದಿರುವ ಏಕೈಕ ಪ್ರಭೇದದ ಮೀನು ಎಂದು ಹೇಳಲಾಗಿದೆ.
ಇನ್ನು, ಈ ಸಂಶೋಧನೆಯ ಪ್ರಯೋಜನಗಳನ್ನು ಸಂಶೋಧಕರು ಹೇಳಿರುವುದು ಹೀಗೆ..
"ನೀವು ಜೀನೋಮ್ ಅನ್ನು ಪುಸ್ತಕವೆಂದು ಭಾವಿಸಿದರೆ, ಈ ಸಂಶೋಧನೆಯು ಏನು ಮಾಡಿದೆ ಎಂದರೆ ಕಿತ್ತುಹೋಗಿರುವ ಮತ್ತು ಕಾಣೆಯಾದ ಎಲ್ಲಾ ಪುಟಗಳನ್ನು ಮರಳಿ ಸೇರಿಸಲಾಗಿದೆ'' ಎಂದು ಮಿಚಿಗನ್‌ನ ಇಬ್ಬರು ಪ್ರಮುಖ ಸಂಶೋಧಕರಲ್ಲಿ ಒಬ್ಬರಾದ ಡಾ. ಇಂಗೋ ಬ್ರಾಷ್ ಸೈನ್ಸ್ ಡೈಲಿಗೆ ತಿಳಿಸಿದರು.
ಬೋಫಿನ್ ಒಂದು ಆಸಕ್ತಿಕರ ವಸ್ತುವಾಗಿದ್ದು, ಇದು ಡಾರ್ವಿನ್ 'ಆನ್ ದಿ ಒರಿಜಿನ್ ಆಫ್ ಸ್ಪೀಶೀಸ್' ಎಂಬ ಪುಸ್ತಕದಲ್ಲಿ ರಚಿತವಾಗಿರುವ 'ಜೀವಂತ ಪಳೆಯುಳಿಕೆ' ಎಂಬ ಪದಕ್ಕೆ ಒಂದು ಉದಾಹರಣೆಯಾಗಿದೆ. ಜೀವಂತ ಪಳೆಯುಳಿಕೆಗಳು ತಮ್ಮ ಕೊನೆಯ ಜೀವಂತ ಪೂರ್ವಜರಿಗೆ ಹತ್ತಿರವಾಗಿರುವ ಮತ್ತು ಈಗಲೂ ಜೀವಂತವಾಗಿರುವ ಪ್ರಭೇದಗಳಾಗಿವೆ.
"ಇದರರ್ಥ ಬೋಫಿನ್‌ಗೆ ಮೀನುಗಳು ಮತ್ತು ಮನುಷ್ಯರು ಹಂಚಿಕೊಂಡ ಕೊನೆಯ ಪೂರ್ವಜರೊಂದಿಗೆ ಬಹಳಷ್ಟು ಸಾಮ್ಯತೆ ಇದೆ. ಈ ಮೀನು ಅಂದಿನಿಂದ ವಿಕಸನಗೊಂಡಿಲ್ಲ ಎಂದು ಇದರ ಅರ್ಥವಲ್ಲ, ಆದರೆ ಇತರ ಮೀನುಗಳಿಗಿಂತ ಕಡಿಮೆ ವೇಗದಲ್ಲಿ ವಿಕಸನಗೊಂಡಿದೆ ಎಂದು. ಜೀಬ್ರಾಫಿಶ್ ಎಂದು ಹೇಳಿ" ಎಂದು ಡಾ. ಬ್ರಾಸ್ಚ್ ಹೇಳುತ್ತಾರೆ.
ಜೀಬ್ರಾಫಿಶ್ ಪರೀಕ್ಷೆಗಳನ್ನು ನಡೆಸಲು ಮತ್ತು ಅವುಗಳ ಸುತ್ತ ಮಾನವ ಆರೋಗ್ಯದ ಬಗ್ಗೆ ಸಿದ್ಧಾಂತಗಳನ್ನು ನಿರ್ಮಿಸಲು ವ್ಯಾಪಕವಾಗಿ ಬಳಸಲಾಗುವ ಮಾದರಿಯಾಗಿದೆ. ಇಲಿಗಳು ಅಥವಾ ಜೀಬ್ರಾಫಿಶ್‌ನಂತಹ ಮೀನುಗಳನ್ನು ಮನುಷ್ಯ-ಸಂಬಂಧಿತ ರೋಗಗಳು ಮತ್ತು ಆರೋಗ್ಯದ ಬಗ್ಗೆ ಸಂಶೋಧನೆ ಮಾಡಲು ಬಳಸುವುದು ಸಾಮಾನ್ಯ ಅಭ್ಯಾಸವಾಗಿದೆ.
'ನೇಚರ್ ಜೆನೆಟಿಕ್ಸ್' ನಲ್ಲಿ ಪ್ರಕಟವಾದ ಅಧ್ಯಯನವು, ಬೋಫಿನ್‌ನ ಗ್ಯಾಸ್ ಬ್ಲ್ಯಾಡರ್‌ನ ಬೆಳವಣಿಗೆಯು ಮಾನವನ ಶ್ವಾಸಕೋಶದ ಬೆಳವಣಿಗೆಗೆ ಹೋಲುತ್ತದೆ ಎಂದು ಬಹಿರಂಗಪಡಿಸುತ್ತದೆ. "ವಿಕಾಸದ ಹೆಚ್ಚಿನ ದರಗಳಿಂದಾಗಿ, ಜೀಬ್ರಾಫಿಶ್‌ನಲ್ಲಿ ಅಂಗಗಳ ಬೆಳವಣಿಗೆಯ ಇಂತಹ ಆನುವಂಶಿಕ ಅಂಶಗಳು ಕಾಣೆಯಾಗಿವೆ" ಎಂದು ಸಂಶೋಧನೆಯ ಎರಡನೇ ಪ್ರಮುಖ ಡಾ. ಆಂಡ್ರ್ಯೂ ಥಾಂಪ್ಸನ್ ಹೇಳಿದರು.
ಈ ಅಧ್ಯಯನವು ನೀಡಿದ ಪುರಾವೆಗಳೊಂದಿಗೆ, ವರ್ಟಿಬ್ರೇಟ್ಸ್‌ನ ವಿಕಸನೀಯ ಪ್ರಯಾಣದ ಹಾದಿಯನ್ನು ಕಂಡುಕೊಳ್ಳುವುದು ಸುಲಭವಾಗುತ್ತದೆ ಎಂದು ವಿಜ್ಞಾನಿಗಳು ನಂಬುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ