ಎಸ್​ಸಿ ಎಸ್​ಟಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ಮಧ್ಯಪ್ರದೇಶದಲ್ಲಿ ಭಾರತ್​ ಬಂದ್​

news18
Updated:September 6, 2018, 11:23 AM IST
ಎಸ್​ಸಿ ಎಸ್​ಟಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ಮಧ್ಯಪ್ರದೇಶದಲ್ಲಿ ಭಾರತ್​ ಬಂದ್​
news18
Updated: September 6, 2018, 11:23 AM IST
ನ್ಯೂಸ್​18 ಕನ್ನಡ

ಭೋಪಾಲ್​ (ಸೆ. 6): ಎಸ್​ಸಿ ಮತ್ತು ಎಸ್​ಟಿ ದೌರ್ಜನ್ಯ ಕಾಯ್ದೆಯಲ್ಲಿ ತಿದ್ದುಪಡಿ ತರಲು ಉದ್ದೇಶಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಮೇಲ್ವರ್ಗದ ಸಂಘಟನೆಗಳು ಮತ್ತು ಅಲ್ಪಸಂಖ್ಯಾತ ಸಂಘಟನೆಗಳು ಇಂದು ಭಾರತ್​ ಬಂದ್​ ಘೋಷಿಸಿವೆ. ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ 4 ಜಿಲ್ಲೆಗಳಲ್ಲಿ ಸೆಕ್ಷನ್​ 144 ಜಾರಿಗೊಳಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಬಂದ್​ಗೆ ಕರೆನೀಡಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬಹುತೇಕ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಧ್ಯಪ್ರದೇಶದಲ್ಲಿ ಪೊಲೀಸ್​ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿದೆ. ಸಂಜೆ 4ರವರೆಗೆ ಪೆಟ್ರೋಲ್ ಬಂಕ್​ಗಳನ್ನು ಕೂಡ ಮುಚ್ಚಲಾಗಿದೆ. ಇಲ್ಲಿನ ಸೂಕ್ಷ್ಮ ಪ್ರದೇಶವಾದ ಗ್ವಾಲಿಯರ್​-ಚಂಬಲ್​ ಭಾಗದ ಮೊರೆನಾ, ಶಿವಪುರಿ, ಭಿಂದ್​ ಮತ್ತು ಅಶೋಕನಗರ್​ ಜಿಲ್ಲೆಗಳಲ್ಲಿ ಸೆಕ್ಷನ್​ 144 ಜಾರಿಗೊಳಿಸಲಾಗಿದೆ. ಗುಂಪುಘರ್ಷಣೆ ಸಂಭವಿಸುವ ಸಾಧ್ಯತೆ ಇರುವುದರಿಂದ 34 ಸಶಸ್ತ್ರ ಸೇನಾಪಡೆಯನ್ನು ನೇಮಕ ಮಾಡಲಾಗಿದೆ.

ಎಸ್​ಸಿ ಎಸ್​ಟಿ ದೌರ್ಜನ್ಯ ತಡೆ ಕಾಯ್ದೆಯನ್ವಯ ಯಾರಾದರೂ ತಮ್ಮ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ದೂರು ನೀಡಿದರೆ ಆರೋಪಿಯನ್ನು ಯಾವುದೇ ವಿಚಾರಣೆಯಿಲ್ಲದೆ ಬಂಧಿಸಬಹುದು. ಇದನ್ನು ದುರುಪಯೋಗಪಡಿಸಿಕೊಂಡು ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇರುವುದರಿಂದ ತಿದ್ದುಪಡಿ ತರಬೇಕೆಂದು ಆಗ್ರಹಿಸಿ ಇಂದು ಬಂದ್​ ಆಚರಿಸಲಾಗುತ್ತಿದೆ.

ಮಧ್ಯಪ್ರದೇಶದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಶಾಂತಿ ಕಾಪಾಡುವಂತೆ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ. ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಎಸ್​ಪಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಡದಂತೆ ಎಚ್ಚರ ವಹಿಸಲು ಸೂಚನೆ ನೀಡಿದ್ದಾರೆ.

ಇದರೊಂದಿಗೆ ಬಿಹಾರ ರಾಜ್ಯದಲ್ಲಿ ಕೂಡ ಮೇಲ್ವರ್ಗದ ಸಂಘಟನೆಗಳಿಂದ ಭಾರತ್​ ಬಂದ್​ಗೆ ಕರೆ ನೀಡಲಾಗಿದೆ. ಆದರೆ, ಅಲ್ಲಿ ಮಧ್ಯಪ್ರದೇಶದಷ್ಟು ತೀವ್ರ ಪ್ರತಿಭಟನೆ ನಡೆಯುತ್ತಿಲ್ಲ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ