ಉತ್ತರ ಪ್ರದೇಶದಲ್ಲಿ ಭಾರೀ ಮಳೆ, ಚಳಿ: ಲಕ್ನೋ, ಕಾನ್ಪುರದಲ್ಲಿ ಶಾಲೆಗಳಿಗೆ ರಜೆ

ಇಂದು ಬಿಜ್ನೋರ್, ಸಹರನ್ಪುರ, ಮುಜಾಫರ್​ನಗರ, ಮೊರದಾಬಾದ್​, ರಾಮ್ಪುರ, ಬರೇಲಿ, ಮೀರತ್, ಬುಲಂದ್​ಶಹರ್​, ಶಹಜನಪುರ, ಫಿರೋಜಾಬಾದ್, ಆಲಿಘರ್ ಮತ್ತು ಹಮೀರ್​ಪುರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈ ಮೆಟ್​ ಹೇಳಿದೆ.

news18-kannada
Updated:January 16, 2020, 12:16 PM IST
ಉತ್ತರ ಪ್ರದೇಶದಲ್ಲಿ ಭಾರೀ ಮಳೆ, ಚಳಿ: ಲಕ್ನೋ, ಕಾನ್ಪುರದಲ್ಲಿ ಶಾಲೆಗಳಿಗೆ ರಜೆ
ಸಾಂದರ್ಭಿಕ ಚಿತ್ರ
  • Share this:
ಲಕ್ನೋ(ಜ.16): ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದಲ್ಲಿ ಧಾರಾಕಾರ ಮಳೆ ಜೊತೆಗೆ ಚಳಿಯ ಪ್ರಮಾಣವೂ ಹೆಚ್ಚಾಗಿದೆ. ಇದರಿಂದಾಗಿ ಉತ್ತರ ಪ್ರದೇಶದ ಜನರು ಚಳಿ-ಮಳೆಗೆ ತತ್ತರಿಸಿ ಹೋಗಿದ್ದಾರೆ. ಇಂದು ಲಕ್ನೋ ಮತ್ತು ಕಾನ್ಪುರದಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. 

ನಿರಂತರ ಮಳೆಯ ಜೊತೆಗೆ ಚಳಿಯ ತೀವ್ರತೆ ಕೂಡ ಹೆಚ್ಚಾಗಿದ್ದು, ಶೀತಗಾಳಿಗೆ ಜನರು ಮನೆಯಿಂದ ಹೊರಬರದಂತೆ ಆಗಿದೆ. ಇಂದು ಲಕ್ನೋ ಮತ್ತು ಕಾನ್ಪುರದಲ್ಲಿ ಚಳಿ ಹೆಚ್ಚಾಗಿ ಮಂಜು ಕವಿದಿದ್ದರಿಂದ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

"ಗುಡ್ಡಗಾಡು ಪ್ರದೇಶಗಳಲ್ಲಿ ಶೀತಗಾಳಿ ಹೆಚ್ಚಾಗಿ ಬೀಸುತ್ತಿದೆ. ಮುಂದಿನ ನಾಲ್ಕು ದಿನಗಳ ಕಾಲ ಇದೇ ರೀತಿಯಾದ ವಾಯುಗುಣ ಇರುತ್ತದೆ. ಉತ್ತರ ಪ್ರದೇಶದ ಪಶ್ಚಿಮ ಭಾಗ ಹಾಗೂ ಮತ್ತಿತರ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ," ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಷೇರುಪೇಟೆ ಝಗಮಗ; ಹೊಸ ದಾಖಲೆ ಮಟ್ಟಕ್ಕೆ ಏರಿದ ಸೆನ್ಸೆಕ್ಸ್, ನಿಫ್ಟಿ

ಕಳೆದ ಶನಿವಾರದಿಂದ ಮಳೆಯ ಪ್ರಮಾಣ ಕಡಿಮೆಯಾದಂತೆ ಚಳಿ ಹೆಚ್ಚಾಗಿ ಮಂಜು ಕವಿಯುತ್ತಿದೆ. ಜನವರಿ 20ರವರೆಗೆ ತಾಪಮಾನ ಕುಸಿಯುವ ನಿರೀಕ್ಷೆ ಇದೆ. ಗರಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇಂದು ಬಿಜ್ನೋರ್, ಸಹರನ್ಪುರ, ಮುಜಾಫರ್​ನಗರ, ಮೊರದಾಬಾದ್​, ರಾಮ್ಪುರ, ಬರೇಲಿ, ಮೀರತ್, ಬುಲಂದ್​ಶಹರ್​, ಶಹಜನಪುರ, ಫಿರೋಜಾಬಾದ್, ಆಲಿಘರ್ ಮತ್ತು ಹಮೀರ್​ಪುರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಸ್ಕೈ ಮೆಟ್​ ಹೇಳಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ: ನಳಿನ್​​ ಕುಮಾರ್​​ ಕಟೀಲ್​​ ಔಪಚಾರಿಕ ಆಯ್ಕೆ
Published by: Latha CG
First published: January 16, 2020, 12:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading