ಶಾಲಾ ಮಕ್ಕಳ ಪ್ರವೇಶಕ್ಕೆ ಆಧಾರ್​ ಕಡ್ಡಾಯವಲ್ಲ; ಇತರೆ ಗುರುತಿನ ಚೀಟಿಗಳನ್ನು ಪರಿಗಣಿಸಿ ಸೌಲಭ್ಯ ನೀಡಲು ಯುಐಡಿಎಐ ಸೂಚನೆ

news18
Updated:September 6, 2018, 7:51 AM IST
ಶಾಲಾ ಮಕ್ಕಳ ಪ್ರವೇಶಕ್ಕೆ ಆಧಾರ್​ ಕಡ್ಡಾಯವಲ್ಲ; ಇತರೆ ಗುರುತಿನ ಚೀಟಿಗಳನ್ನು ಪರಿಗಣಿಸಿ ಸೌಲಭ್ಯ ನೀಡಲು ಯುಐಡಿಎಐ ಸೂಚನೆ
news18
Updated: September 6, 2018, 7:51 AM IST
ನ್ಯೂಸ್​18 ಕನ್ನಡ

ನವದೆಹಲಿ (ಸೆ.6): ಆಧಾರ್ ಕಾರ್ಡ್ ನೋಂದಣಿಯಾಗಿಲ್ಲ ಎಂದು ಇನ್ನು ಮುಂದೆ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ನಿರಾಕರಿಸುವಂತಿಲ್ಲ. ಹೀಗೆ ಪ್ರವೇಶ ನಿರಾಕರಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ (ಯುಐಡಿಎಐ) ಸ್ಪಷ್ಟಪಡಿಸಿದೆ.

ಆಧಾರ್​ ನೋಂದಣಿ ಆಗಿಲ್ಲ ಎಂಬ ಕಾರಣಕ್ಕೆ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶಾತಿ ನಿರಾಕರಿಸಿದ ಘಟನೆಗಳು ನಡೆದಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುತ್ತೋಲೆ ಕಳುಹಿಸಿರುವ ಯುಐಎಡಿಐ, ಆಧಾರ್ ಹೆಸರಿನಲ್ಲಿ ಮಕ್ಕಳ ವಿದ್ಯಾಭ್ಯಾಸ ತಡೆಯುವುದಾಗಲಿ, ಪ್ರವೇಶ ನಿರಾಕರಿಸುವುದು ಕಾನೂನುಬಾಹಿರ ಎಂದು ತಿಳಿಸಿದೆ.

ಯಾರು ಈವರೆಗೂ ಆಧಾರ್ ನಂಬರ್ ಪಡೆದಿಲ್ಲವೋ ಅಥವಾ ಬಯೋಮೆಟ್ರಿಕ್ ನಲ್ಲಿ ಅಪ್ ಡೇಟ್ ಆಗಿಲ್ಲವೋ ಇದಕ್ಕೆ ಶಾಲಾ ಆಡಳಿತ ಮಂಡಳಿಯೇ ಹೊಣೆ ಎಂದು ಆಧಾರ್ ಸಂಸ್ಥೆ ಹೇಳಿದೆ. ಇಂತಹ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಅಪ್ ಡೇಟ್ ಹಾಗೂ ಆಧಾರ್ ಮಾಡಿಸಿಕೊಳ್ಳಲು ಶಾಲೆಯೇ ಅನುಕೂಲ ಮಾಡಿಕೊಡಬೇಕು ಎಂದು ತಿಳಿಸಿದೆ. ಸ್ಥಳೀಯ ಬ್ಯಾಂಕುಗಳು, ಅಂಚೆ ಕಚೇರಿಗಳು, ಶಿಕ್ಷಣ ಇಲಾಖೆ, ಜಿಲ್ಲಾ ಆಡಳಿತದ ಸಹಕಾರದೊಂದಿಗೆ ಶಾಲಾ ಆವರಣದಲ್ಲಿ ಆಧಾರ್​ ನೋಂದಣಿಗೆ ಶಿಬಿರ ಆಯೋಜಿಸಬೇಕು. ಆಧಾರ್​ ನೋಂದಣಿ ಆಗುವವರೆಗೂ ಶಾಲೆಗಳಲ್ಲಿ ಮಕ್ಕಳಿಗೆ ಇತರೆ ಗುರುತಿನ ಚೀಟಿಗಳ ಆಧಾರದಲ್ಲಿ ಸೌಲಭ್ಯಗಳನ್ನು ನೀಡಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

 
First published:September 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ