ಶುಲ್ಕ ಪಾವತಿಸದಿದ್ದರೆ ಶಾಲಾ ಆಡಳಿತ ಮಂಡಳಿ ಕಾನೂನು ಕ್ರಮ ಕೈಗೊಳ್ಳಬಹುದು: ಸುಪ್ರೀಂ ಕೋರ್ಟ್

Schools can take legal action: ಶುಲ್ಕವನ್ನು ಪಾವತಿಸಲು ಸಂಬಂಧಿತ ವಿದ್ಯಾರ್ಥಿಗಳ ಪೋಷಕರು ಹಾಗೂ ವಾರ್ಡ್‌ಗೆ ಸಮಯಾವಕಾಶ ನೀಡಲಾಗುವುದು ಹಾಗೂ ನಿರ್ದಿಷ್ಟಪಡಿಸಿದ ಮೊತ್ತವನ್ನು ಪಾವತಿಸುವುದರಿಂದ ಪೋಷಕರು/ವಾರ್ಡ್‌ಗೆ ಯಾವುದೇ ವಿನಾಯಿತಿಯನ್ನು ನೀಡುವುದಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  School fee: ಶಾಲಾ ವಿದ್ಯಾರ್ಥಿಗಳು ಸರಿಯದ ಸಮಯಕ್ಕೆ ಶುಲ್ಕವನ್ನು ಹಾಗೂ ಶುಲ್ಕದ ಕಂತುಗಳನ್ನು ಪಾವತಿಸದೇ ಇದ್ದಲ್ಲಿ ಶಾಲಾ ಆಡಳಿತ ಮಂಡಳಿಯು ಕಾನೂನು ಕ್ರಮ(legal action)ವನ್ನು ಕೈಗೊಳ್ಳಬಹುದೆಂದು ಸುಪ್ರೀಂ ಕೋರ್ಟ್ (Supreme Court) ಸ್ಪಷ್ಟಪಡಿಸಿದೆ. ವಿಶೇಷವಾಗಿ ಸಾಂಕ್ರಾಮಿಕ ರೋಗದ ಹೆಸರಿನಲ್ಲಿ ಖಾಸಗಿ ಅನುದಾನರಹಿತ ಶಾಲೆಗಳ ಸ್ವಾಯತ್ತತೆಯನ್ನು ಪೋಷಕರಿಗೆ "ಕೇವಲ" ಮತ್ತು "ಅಂಗೀಕಾರಾರ್ಹ" ಶಾಲಾ ಶುಲ್ಕವನ್ನು ನಿಗದಿಪಡಿಸಲು ಮತ್ತು ಸಂಗ್ರಹಿಸುವಂತೆ ರಾಜ್ಯಗಳು ನಿರ್ಬಂಧಿಸುವಂತಿಲ್ಲವೆಂದು ಮೇ 3 ರಂದು ನ್ಯಾಯಾಲಯವು ತಿಳಿಸಿತ್ತು. ಮಾರ್ಚ್ 2020 ರಿಂದ ಸಾಂಕ್ರಾಮಿಕ (ಲಾಕ್‌ಡೌನ್) ಪರಿಣಾಮದಿಂದಾಗಿ ಶಾಲಾ ಶುಲ್ಕವನ್ನು ಮುಂದೂಡಲು/ಕಡಿಮೆ ಮಾಡಲು ಸರ್ಕಾರದ ಅಧಿಸೂಚನೆಗಳ ವಿರುದ್ಧ ರಾಜಸ್ಥಾನದ ಖಾಸಗಿ ಅನುದಾನರಹಿತ ಶಾಲೆಗಳು ಸಲ್ಲಿಸಿದ ಮೇಲ್ಮನವಿಗಳ ಸರಣಿಯಲ್ಲಿ ಮೇ ತೀರ್ಪು ಹೊರಬಂದಿತ್ತು.

  ತೀರ್ಪು ಹೊರಬಿದ್ದು ಸುಮಾರು ಐದು ತಿಂಗಳ ನಂತರ ಕೂಡ ಪೋಷಕರು ಶಾಲಾ ಶುಲ್ಕ ಪಾವತಿಸಲು ನಿರಾಕರಿಸಿದ್ದರು. ವಕೀಲ ರೋಮಿ ಚಾಕೊ ನೇತೃತ್ವದಲ್ಲಿ ಶಾಲಾ ಆಡಳಿತ ಮಂಡಳಿಯು ಸುಪ್ರೀಂ ಕೋರ್ಟ್‌ನ ಮೊರೆಹೋಗಿತ್ತು. ಇದಕ್ಕೆ ಸ್ಪಷ್ಟೀಕರಣ ನೀಡಿದ್ದ ನ್ಯಾಯಮೂರ್ತಿ ಎ.ಎಂ ನೇತೃತ್ವದ ಪೀಠ ಖಾನ್ವಿಲ್ಕರ್ ಮೇಯಲ್ಲಿ ನೀಡಿದ್ದ ತೀರ್ಪಿನ ಅನುಸಾರವಾಗಿ ಶಾಲಾ ಶುಲ್ಕದ ಕಂತುಗಳನ್ನು ಪಾವತಿಸಲು ವಿಫಲವಾದ ವಿದ್ಯಾರ್ಥಿಗಳ ವಿರುದ್ಧ ಶಾಲೆಗಳು ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಹುದೆಂದು ತೀರ್ಪಿತ್ತಿದೆ.


  ಪೋಷಕರಿ‌ಗೆ ಯಾವುದೇ ವಿನಾಯಿತಿಯನ್ನು ನೀಡುವುದಿಲ್ಲ

  ತೀರ್ಪಿನಲ್ಲಿ ನೀಡಿರುವ ನಿರ್ದೇಶನಗಳ ಪ್ರಕಾರ ಕಂತುಗಳು ಒಳಗೊಂಡಂತೆ ಶುಲ್ಕವನ್ನು ಪಾವತಿಸಲು ಸಂಬಂಧಿತ ವಿದ್ಯಾರ್ಥಿಗಳ ಪೋಷಕರು ಹಾಗೂ ವಾರ್ಡ್‌ಗೆ ಸಮಯಾವಕಾಶ ನೀಡಲಾಗುವುದು ಹಾಗೂ ನಿರ್ದಿಷ್ಟಪಡಿಸಿದ ಮೊತ್ತವನ್ನು ಪಾವತಿಸುವುದರಿಂದ ಪೋಷಕರು/ವಾರ್ಡ್‌ಗೆ ಯಾವುದೇ ವಿನಾಯಿತಿಯನ್ನು ನೀಡುವುದಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.


  ನೀಡಲಾದ ತೀರ್ಪಿನಲ್ಲಿ ಉಲ್ಲೇಖಿಸಲಾದ ಕಂತುಗಳನ್ನು ಪಾವತಿಸುವ ಕೊನೆಯ ದಿನಾಂಕವು ಬಹಳ ಹಿಂದೆಯೇ ಮುಗಿದಿದೆ ಎಂಬ ಅಂಶವನ್ನು ಆಡಳಿತ ಮಂಡಳಿ ಅಂಗೀಕರಿಸಿದೆ. ಅದರ ಹೊರತಾಗಿಯೂ ಪಾವತಿ ಬಾಕಿ ಇರುವ ಹಾಗೂ ಪಾವತಿ ಮಾಡದೇ ಇರುವ ಪೋಷಕರು/ವಾರ್ಡ್‌ಗಳು ಇವೆ ಎಂಬುದನ್ನು ಶಾಲಾ ಆಡಳಿತ ಮಂಡಳಿ ಉಲ್ಲೇಖಿಸಿದೆ. ಈ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿಗೆ ಬಾಕಿ ವಸೂಲಿಯನ್ನು ಮಾಡುವುದಕ್ಕಾಗಿ ತೀರ್ಪಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದು ನ್ಯಾಯಾಲಯ ತಿಳಿಸಿದೆ.


  ಮೇಲ್ಮನವಿ ಸಲ್ಲಿಸಲು ಅವಕಾಶ 

  "03.05.2021 ದಿನಾಂಕದ ತೀರ್ಪಿನ ಪ್ರಕಾರ ಶಾಲಾ ಶುಲ್ಕವು ಮಿತಿಮೀರಿದ್ದರೆ ಹಾಗೂ ಅನುಮತಿಸುವ ಮೊತ್ತವನ್ನು ಮೀರಿದ್ದಲ್ಲಿ ಶಾಲಾ ಆಡಳಿತ ಮಂಡಳಿಯ ಅಂತಿಮ ನಿರ್ಧಾರದ ವಿರುದ್ಧ ಪೋಷಕರು/ವಾರ್ಡ್ ಮೇಲ್ಮನವಿ ಸಲ್ಲಿಸಬಹುದು" ಎಂದು ನ್ಯಾಯಾಲಯ ತಿಳಿಸಿದೆ. ಶುಲ್ಕ ಪಾವತಿಯಲ್ಲಿ ಇಚ್ಛಾಪೂರ್ವಕ ಪಾವತಿಸದೇ ಇರುವುದಕ್ಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಶಾಲೆಗಳಿಗೆ ಸಂಬಂಧಿಸಿದ ಕಾರ್ಯವಾಗಿದೆ ಎಂಬುದನ್ನು ಸೂಚಿಸಿದ ನ್ಯಾಯಾಲಯವು ಸರಿಯಾದ ಕಾರಣಗಳ ಮೂಲಕ ಪೋಷಕರಿಗೆ ಸರಿಯಾದ ಭರವಸೆಯನ್ನು ನೀಡಬೇಕು ಎಂದು ತಿಳಿಸಿದೆ.


  ಇದನ್ನೂ ಓದಿ: Midday Meal: ಶಾಲಾ ಮಕ್ಕಳಿಗೆ ಗುಡ್ ನ್ಯೂಸ್, ದಸರಾ ಬಳಿಕ ಶಾಲಾ ಮಕ್ಕಳಿಗೆ ಮತ್ತೆ ಮಧ್ಯಾಹ್ನದ ಬಿಸಿಯೂಟ!

  ತೀರ್ಪಿನ ಪ್ರಕಾರ ಶೈಕ್ಷಣಿಕ ವರ್ಷ 2020-21 ಕ್ಕಾಗಿ ವಾರ್ಷಿಕ ಶುಲ್ಕಗಳನ್ನು ಪಾವತಿಸಲು ಪೋಕರು/ವಾರ್ಡ್‌ಗೆ ಕಷ್ಟಕರವಾಗಿದ್ದು ವೈಯಕ್ತಿಕ ವಿನಂತಿಯನ್ನು ಮಾಡಿದ್ದಲ್ಲಿ ವಿನಂತಿಯನ್ನು ಪರಿಶೀಲಿಸಿ ಸಹಾನುಭೂತಿಯ ಮೇರೆಗೆ ಶಾಲಾ ಆಡಳಿತ ಮಂಡಳಿಯು ಅಂತಹ ವಿನಂತಿಗೆ ಮಾನ್ಯತೆ ನೀಡಬೇಕು ಎಂಬುದಾಗಿ ನ್ಯಾಯಾಲಯ ಪುನರುಚ್ಛರಿಸಿದೆ.

  Published by:Kavya V
  First published: