POCSO: ಅಪ್ರಾಪ್ತ ಬಾಲಕಿಯನ್ನು ಹಿಡಿದುಕೊಂಡು ಮುಖಕ್ಕೆ ಕೇಕ್‌ ಮೆತ್ತಿದ್ದಕ್ಕೆ ಶಾಲಾ ಶಿಕ್ಷಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲು

Teacher Booked Under POCSO : ಉತ್ತರ ಪ್ರದೇಶದ ರಾಂಪುರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಆರೋಪಿ ಶಿಕ್ಷಕ ನಡೆಸುವ ಕೋಚಿಂಗ್ ಸೆಂಟರ್‌ನಲ್ಲಿ ಶಿಕ್ಷಕರ ದಿನ ಆಚರಿಸುವ ವೇಳೆ ಈ ಘಟನೆ ನಡೆದಿದೆ.ಈ ಘಟನೆ ಶಾಲೆಯಲ್ಲಿ ನಡೆಯದಿದ್ದರೂ, ಶಾಲಾ ಆಡಳಿತ ಮಂಡಳಿ ಆರೋಪಿ ಶಿಕ್ಷಕನನ್ನು ಅಮಾನತು ಮಾಡಲಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಉತ್ತರ ಪ್ರದೇಶದ(Uttara Pradesh) ರಾಂಪುರದ ಪ್ರತಿಷ್ಠಿತ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಅಪ್ರಾಪ್ತ ಬಾಲಕಿಯನ್ನು ಹಿಡಿದುಕೊಂಡು ಬಲವಂತವಾಗಿ ಆಕೆಯ ಮುಖಕ್ಕೆ ಕೇಕ್ ಮೆತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌(Viral Video) ಆಗಿದೆ. ಈ ಹಿನ್ನೆಲೆ ಆ ಶಿಕ್ಷಕನ ವಿರುದ್ಧ ಪೋಕ್ಸೋ(POCSO) ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡ ಘಟನೆಯ ವಿಡಿಯೋ ಕ್ಲಿಪ್‌ ಪೊಲೀಸರ ಗಮನಕ್ಕೆ ಬಂದಿದ್ದು, ನಂತರ ಅಪ್ರಾಪ್ತ ಬಾಲಕಿಯ ತಂದೆ ಸಲ್ಲಿಸಿದ್ದ ದೂರಿನಡಿ ಆ ಶಿಕ್ಷನ ವಿರುದ್ಧ ಕೇಸ್‌ ದಾಖಲಿಸಿದರು. ಆರೋಪಿ ಶಿಕ್ಷಕನನ್ನು ಅಲೋಕ್ ಸಕ್ಸೇನಾ (57) ಎಂದು ಗುರುತಿಸಲಾಗಿರುವ ವ್ಯಕ್ತಿಯನ್ನು ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಮತ್ತು ಸೆಕ್ಷನ್ 354 ರ ಅಡಿಯಲ್ಲಿ ಕೇಸ್‌ ದಾಖಲಿಸಲಾಗಿದೆ.


"ಸಂತ್ರಸ್ತ ಮಹಿಳೆ ಸಿವಿಲ್ ಲೈನ್ಸ್ ಪೊಲೀಸ್ ಠಾಣಾ ವ್ಯಾಪ್ತಿಯ ದೂರುದಾರರ ಮಗಳಾಗಿದ್ದು, ಆರೋಪಿ ಅಲೋಕ್ ಸಕ್ಸೇನಾ ತನ್ನ ಮಗಳ ಒಪ್ಪಿಗೆಯಿಲ್ಲದೆ ಬಲವಂತವಾಗಿ ಆಕೆಯ ಮುಖಕ್ಕೆ ಕೇಕ್ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಭಾರತೀಯ ದಂಡ ಸಂಹಿತೆ (ಐಪಿಸಿ) ಯ ಸೆಕ್ಷನ್ 354 ಮತ್ತು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಈ ಸಂಬಂಧ ವಿಚಾರಣೆ ಮುಂದುವರಿದಿದೆ'' ಎಂದು ಉತ್ತರ ಪ್ರದೇಶದ ರಾಂಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಸಾರ್ ಸಿಂಗ್ ಹೇಳಿದರು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.


ಇನ್ನು, ಉತ್ತರ ಪ್ರದೇಶದ ರಾಂಪುರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಆರೋಪಿ ಶಿಕ್ಷಕ ನಡೆಸುವ ಕೋಚಿಂಗ್ ಸೆಂಟರ್‌ನಲ್ಲಿ ಶಿಕ್ಷಕರ ದಿನ ಆಚರಿಸುವ ವೇಳೆ ಈ ಘಟನೆ ನಡೆದಿದೆ.ಈ ಘಟನೆ ಶಾಲೆಯಲ್ಲಿ ನಡೆಯದಿದ್ದರೂ, ಶಾಲಾ ಆಡಳಿತ ಮಂಡಳಿ ಆರೋಪಿ ಶಿಕ್ಷಕನನ್ನು ಅಮಾನತು ಮಾಡಲಾಗಿದೆ ಮತ್ತು ಇತ್ತೀಚೆಗೆ ಬಂಧಿಸಿ ಜೈಲಿಗೆ ಹಾಕಲಾಗಿದೆ ಎಂದೂ ತಿಳಿದುಬಂದಿದೆ.


ಇದನ್ನೂ ಓದಿ: ಬೆಂಗಳೂರಿನ ಸ್ಯಾಂಕಿ ರಸ್ತೆಯ ಬಳಿ ಯುವಕ - ಯುವತಿಯರ ಜಾಲಿ ರೈಡ್‌ ವಿಡಿಯೋ ವೈರಲ್‌: ಪ್ರಕರಣ ದಾಖಲಿಸಿದ ಪೊಲೀಸರು

ವೈರಲ್ ವಿಡಿಯೋ ಕ್ಲಿಪ್ ಹೇಳುವಂತೆ ಶಿಕ್ಷಕಿಯು ಬಾಲಕಿಯನ್ನು ಹಿಡಿದಿಟ್ಟುಕೊಳ್ಳುತ್ತಾನೆ ಮತ್ತು ನಂತರ ಆಕೆ ಶಿಕ್ಷಕನ ಹಿಡಿತದಿಂದ ತನ್ನನ್ನು ಮುಕ್ತಗೊಳಿಸಲು ಪ್ರಯತ್ನಿಸಿದರೂ ಆಕೆಯ ಮುಖದ ಮೇಲೆ ಆರೋಪಿ ಶಿಕ್ಷಕ ಬಲವಂತವಾಗಿ ಕೇಕ್ ಮೆತ್ತಿದ್ದಾರೆ. ಅಲ್ಲದೆ, ''ಯಾರು ನಿನ್ನನ್ನು ಉಳಿಸುತ್ತಾರೆ..? ಯಾರಾದರೂ ಬಂದಿದ್ದಾರೆಯೇ..?'' ("ಕೌನ್ ಬಚಾಯೇಗಾ? ಆಯಾ ಕೋಯಿ..?) ಎಂದು ಹಿಂದಿಯಲ್ಲಿ ಮಾತನಾಡಿರುವುದನ್ನು ಈ ವೈರಲ್‌ ವಿಡಿಯೋದಲ್ಲಿ ಕೇಳಬಹುದು ಎಂದು ಟೈಮ್ಸ್ ಆಫ್‌ ಇಂಡಿಯಾ ವೈರಲ್‌ ವಿಡಿಯೋ ಬಗ್ಗೆ ವರದಿ ಮಾಡಿದೆ.


9 ವರ್ಷದ ಬಾಲಕಿ ಮೇಲೆ ರೇಪ್
ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು 4ನೇ ತರಗತಿಯ ವಿದ್ಯಾರ್ಥಿನಿಗೆ ಅಶ್ಲೀಲ ವಿಡಿಯೋ ಕ್ಲಿಪ್ ತೋರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಪ್ರಾಪ್ತ ಬಾಲಕಿಯ ತಂದೆಯ ದೂರಿನ ಮೇರೆಗೆ, ಪೊಲೀಸರು ಮುಖ್ಯೋಪಾಧ್ಯಾಯರ ವಿರುದ್ಧ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿದ್ದಾರೆ.


ಇದನ್ನೂ ಓದಿ: ಸ್ಕ್ಯಾನ್​ಗೆ ಬಂದ ಯುವತಿಯ ಖಾಸಗಿ ಭಾಗಗಳನ್ನು ಮುಟ್ಟಿದ ಎಕ್ಸ್-ರೇ ಕ್ಲಿನಿಕ್ ಮಾಲೀಕನ ಬಂಧನ

ಸೀತಾಪುರದ ಗೊಂಡಲಮಾವು ಬ್ಲಾಕ್‌ನಲ್ಲಿರುವ ಶಾಲೆಗೆ 9 ವರ್ಷದ ಬಾಲಕಿ ಹಾಗೂ 4ನೇ ತರಗತಿಯ ವಿದ್ಯಾರ್ಥಿನಿ ಹೋದಾಗ ಈ ಘಟನೆ ಸಂಭವಿಸಿದೆ ಎಂದು ದೂರುದಾರರು ತಿಳಿಸಿದ್ದಾರೆ. ಮುಖ್ಯಶಿಕ್ಷಕರು ಅಪ್ರಾಪ್ತ ವಯಸ್ಕಳನ್ನು ಶಾಲೆಯ ಆವರಣದಲ್ಲಿರುವ ಕೋಣೆಗೆ ಕರೆಸಿಕೊಂಡರು. ಅಲ್ಲಿ ಅವರು ಆಕೆಗೆ ಅಸಭ್ಯ ವಿಡಿಯೋವನ್ನು ತೋರಿಸಿದರು. ಹುಡುಗಿ ಅಳುತ್ತಾ ಪ್ರತಿರೋಧ ವ್ಯಕ್ತಪಡಿಸಿದಾಗ ಆತ ಕೊಠಡಿಯನ್ನು ಒಳಗಿನಿಂದ ಲಾಕ್ ಮಾಡಿದರು. ನಂತರ, ಕಾಮುಕನಂತೆ ಬಾಲಕಿಯ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ ಎಂದು ದೂರಿನಲ್ಲಿ ತಿಳಿಸಲಾಗಿದೆ.


First published: