Students Gang War: ಶಾಕಿಂಗ್; ಶಾಲಾ ಮಕ್ಕಳ ಗ್ಯಾಂಗ್ ವಾರ್​​ನಲ್ಲಿ ಬಾಂಬ್​ಗಳ ಎಸೆತ! ಬಾಂಬ್​ ಅನ್ನೂ ಅವರೇ ತಯಾರಿಸಿದ್ದರು

ವಿದ್ಯಾರ್ಥಿಗಳು ಆನ್‌ಲೈನ್ ವೀಡಿಯೊಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಬಾಂಬ್ ತಯಾರಿಕೆಯನ್ನು ಕಲಿತಿದ್ದಾರಂತೆ. ತಮ್ಮ ಗುಂಪಿನ ಪ್ರಾಬಲ್ಯವನ್ನು ಸಾಬೀತುಪಡಿಸಲು ಅವರು ಮೂರು ಪ್ರಮುಖ ಕಾನ್ವೆಂಟ್ ಶಾಲೆಗಳ ಗೇಟ್‌ಗಳ ಹೊರಗೆ ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಲಖನೌ: ವಿದ್ಯಾರ್ಥಿಗಳ ಗ್ಯಾಂಗ್​ ವಾರ್​ (Students Gang War) ಹೊಸದೇನು ಅಲ್ಲ. ಕಾಲೇಜುಗಳಲ್ಲಿ 2 ಗುಂಪುಗಳ ಮಧ್ಯೆ ಗಲಾಟೆಗಳಾಗುವುದನ್ನೂ ನೋಡಿದ್ದೇವೆ. ಆದರೆ ಶಾಲಾ ಮಟ್ಟದಲ್ಲಿ ಹುಡುಗರ ಗ್ಯಾಂಗ್ ವಾರ್​ ನಡೆಯುತ್ತೆ ಎಂದರೆ ನಿಜಕ್ಕೂ ನಂಬಲು ಅಸಾಧ್ಯ. ಆದರೆ ಇದು ಸತ್ಯವಾಗಿದೆ. ಶಾಲಾ ಹುಡುಗರ ಗುಂಪುಗಳ (School Students Gangs) ಮಧ್ಯೆ ನಡೆದ ಗಲಾಟೆಯಲ್ಲಿ ಬಾಂಬ್​ (Bombs) ಅನ್ನು ಸಹ ಬಳಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸ್ಕೂಲ್​ ಮಕ್ಕಳ ಗ್ಯಾಂಗ್​ ವಾರ್​ ನಡೆದಿರೋದು ಉತ್ತರ ಪ್ರದೇಶದಲ್ಲಿ.  ಐದು ಪ್ರತಿಷ್ಠಿತ ಶಾಲೆಗಳ ಸುಮಾರು 200 ವಿದ್ಯಾರ್ಥಿಗಳು ನಗರದಲ್ಲಿ ಮೂರು ಗುಂಪುಗಳನ್ನು ರಚಿಸಿಕೊಂಡು ಗಲಾಟೆ ಮಾಡಿಕೊಂಡಿದ್ದಾರೆ. ಕಳೆದ ಕೆಲವು ತಿಂಗಳುಗಳಲ್ಲಿ ಆರು ಕಚ್ಚಾ ಬಾಂಬ್ ಸ್ಫೋಟಗನ್ನೂ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳ ವಾಟ್ಸಾಪ್ ಗುಂಪುಗಳು ಮತ್ತು ಗ್ಯಾಂಗ್‌ಗಳು ತಾಂಡವ್, ಜಾಗ್ವಾರ್, ಟೈಗರ್, ಇಮ್ಮಾರ್ಟಲ್ ಮತ್ತು ರಂಗಬಾಜ್ ಮುಂತಾದ ಹೆಸರುಗಳನ್ನು ಹೊಂದಿವೆ.

ವಿಡಿಯೋ ನೋಡಿ ಬಾಂಬ್​ ಮಾಡೋದನ್ನು ಕಲಿತಿದ್ದರು!

ವಿದ್ಯಾರ್ಥಿಗಳು ಆನ್‌ಲೈನ್ ವೀಡಿಯೊಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಬಾಂಬ್ ತಯಾರಿಕೆಯನ್ನು ಕಲಿತಿದ್ದಾರಂತೆ. ತಮ್ಮ ಗುಂಪಿನ ಪ್ರಾಬಲ್ಯವನ್ನು ಸಾಬೀತುಪಡಿಸಲು ಅವರು ಮೂರು ಪ್ರಮುಖ ಕಾನ್ವೆಂಟ್ ಶಾಲೆಗಳ ಗೇಟ್‌ಗಳ ಹೊರಗೆ ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದಾರೆ. ಇಷ್ಟೇ ಅಲ್ಲದೆ ಸೋಷಿಯಲ್​ ಮೀಡಿಯಾದಲ್ಲಿ ಕೃತ್ಯದ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ.

11 ವಿದ್ಯಾರ್ಥಿಗಳು ಪೊಲೀಸರ ವಶಕ್ಕೆ

ಈ ಪೈಕಿ 10 ಅಪ್ರಾಪ್ತರು ಸೇರಿದಂತೆ 11 ವಿದ್ಯಾರ್ಥಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಅವರು ಕಚ್ಚಾ ಬಾಂಬ್‌ಗಳನ್ನು ಎಸೆಯುವ ಮತ್ತು ದೈಹಿಕ ಹಲ್ಲೆ ಘಟನೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ವಿದ್ಯಾರ್ಥಿಗಳಿಂದ ಪೊಲೀಸರು ಹಲವಾರು ಮೋಟಾರ್ ಸೈಕಲ್‌ಗಳು, ಒಂದು ಡಜನ್ ಸೆಲ್‌ಫೋನ್‌ಗಳು ಮತ್ತು ಕೆಲವು ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ಎಲ್ಲಾ ಸಮಯದಲ್ಲೂ ತಮ್ಮ ಮುಖವನ್ನು ಮುಚ್ಚಿಕೊಳ್ಳುತ್ತಿದ್ದರು ಎಂದು ಪ್ರಯಾಗರಾಜ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸೈಲೇಶ್ ಪಾಂಡೆ ಹೇಳಿದ್ದಾರೆ. ಜುಲೈ 15, 16 ರಂದು ನಗರದ 22 ಕಡೆ ನಡೆದ ಕಚ್ಚಾ ಬಾಂಬ್ ಸ್ಫೋಟದ ಘಟನೆಗಳಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ ಎಂದು ಪಾಂಡೆ ಹೇಳಿದ್ದಾರೆ.

ಇದನ್ನೂ ಓದಿ: Dangerous Prisons: ಜಗತ್ತಿನ ಅತಿ ಭಯಾನಕ ಜೈಲುಗಳಿವು!

ಮೊಬೈಲ್ ಕಣ್ಗಾವಲು ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದೆ

ಪೊಲೀಸರು ಆರಂಭದಲ್ಲಿ ಕಚ್ಚಾ ಬಾಂಬ್ ಸ್ಫೋಟಗಳಲ್ಲಿ ಕ್ರಿಮಿನಲ್ ಗ್ಯಾಂಗ್‌ಗಳ ಪಾಲ್ಗೊಳ್ಳುವಿಕೆಯನ್ನು ಶಂಕಿಸಿದ್ದರು. ಆದರೆ ಮೊಬೈಲ್ ಫೋನ್ ಕಣ್ಗಾವಲು ಮತ್ತು ತಾಂತ್ರಿಕ ಘಟಕಗಳ ಸಹಾಯದಿಂದ ಒಂದು ತಿಂಗಳ ಅವಧಿಯ ತನಿಖೆಯ ನಂತರ ಶಾಲಾ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಯಿತು.

ಪೊಲೀಸರು ಪೋಷಕರನ್ನು ಸಂಪರ್ಕಿಸಿದ್ದರು

ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡುವಂತೆ ಒತ್ತಾಯಿಸಿ ಶಾಲಾ ಆಡಳಿತದ ಮೂಲಕ ಪೋಷಕರನ್ನು ತಲುಪಲು ನಿರ್ಧರಿಸಿದ್ದೇವೆ. ಇದರಿಂದಾಗಿ ಅವರು ಅಪರಾಧದ ಜಗತ್ತಿಗೆ ಪ್ರವೇಶಿಸದಂತೆ ತಡೆಯಬಹುದು ಎಂದು ಎಸ್‌ಎಸ್‌ಪಿ ಹೇಳಿದರು.

1971ರಲ್ಲಿ ತಲೆಮರೆಸಿಕೊಂಡಿದ್ದ ನಕ್ಸಲೀಯನೊಬ್ಬ ಸ್ಥಳೀಯರಿಗೆ ಕಚ್ಚಾ ಬಾಂಬ್ ತಯಾರಿಸುವುದನ್ನು ಕಲಿಸಿದ್ದ. ಇದ ನಂತರ ನಗರದಲ್ಲಿ ಕಚ್ಚಾ ಬಾಂಬ್‌ಗಳ ಹರಡುವಿಕೆ ಪ್ರಾರಂಭವಾಯಿತು ಎಂದು ಪ್ರಯಾಗರಾಜ್ ಮೂಲದ ಸಾಮಾಜಿಕ ಕಾರ್ಯಕರ್ತ ಬಾಬಾ ಅಭಯ್ ಅವಸ್ತಿ ಹೇಳಿದ್ದಾರೆ. ವಿಶೇಷವಾಗಿ ಯುವಕರಿಂದ ಕಚ್ಚಾ ಬಾಂಬ್‌ಗಳ ಬಳಕೆಯು ಸುಮಾರು ಮೂರು ದಶಕಗಳಿಂದ ನಗರದಲ್ಲಿ ಪ್ರಚಲಿತವಾಗಿದೆ ಎಂದು ಅವಸ್ತಿ ಹೇಳಿದರು. ಕಚ್ಚಾ ಬಾಂಬ್ ತಯಾರಿಸಲು ಬಳಸುವ ವಸ್ತುಗಳ ಸುಲಭ ಲಭ್ಯತೆಯಿಂದಾಗಿ ಈ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗಿದೆ.
Published by:Kavya V
First published: