School Kids: ಶಾಲಾ ಮಕ್ಕಳಿಂದ ಹಿಂದೂ ರಾಷ್ಟ್ರನಿರ್ಮಾಣದ ಪ್ರತಿಜ್ಞೆ, ಭಾರೀ ಚರ್ಚೆ... ವಿಡಿಯೋ ನೋಡಿ

ವಿಡಿಯೋಗಳಲ್ಲಿ ಅಲ್ಪಸಂಖ್ಯಾತರನ್ನು ಕೊಲ್ಲುವಂತೆ ಸಭೆಯಲ್ಲಿ ಭಾಗಿಯಾಗಿದ್ದವರನ್ನು ಪ್ರಚೋದಿಸಿರುವುದು, ಅವರ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸಲು ಕರೆ ಕೊಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ (Hindu Nation) ಹಲವಾರು ಸಂಕಲ್ಪ ಪ್ರಕರಣಗಳು ದೇಶಾದ್ಯಂತ(Country) ವರದಿಯಾಗತೊಡಗಿದ್ದು, ಈ ಕುರಿತ ವಿಡಿಯೋಗಳು ಸುದರ್ಶನ ನ್ಯೂಸ್ ವಾಹಿನಿ (Sudarshan News Channel ) ಹಾಗೂ ಅದರ ಮುಖ್ಯ ಸಂಪಾದಕ ಸುರೇಶ್ ಚವ್ಹಾಂಕೆ ಅವರ ಅಧಿಕೃತ ಟ್ವಿಟರ್ (Twitter) ಖಾತೆಯಲ್ಲಿ ಕಾಣಿಸಿಕೊಂಡಿವೆ.ಡಿಸೆಂಬರ್ 29, ಬುಧವಾರ ಪೋಸ್ಟ್ ಹಾಕಿರುವ ಚವ್ಹಾಂಕೆ(Suresh Chavhanke), ಅನಾಮಿಕ ವ್ಯಕ್ತಿಯೊಬ್ಬ ಉತ್ತರ ಪ್ರದೇಶದಲ್ಲಿನ ಸೋನ್‌ಭದ್ರ ಶಾಲೆಯೊಂದರಲ್ಲಿ "ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸಲು ಹೋರಾಡಿ, ಮಡಿಯಿರಿ, ಅಗತ್ಯ ಬಿದ್ದರೆ ಕೊಲ್ಲಿ" ಎಂದು ವಿದ್ಯಾರ್ಥಿಗಳಿಗೆ ( Students) ಪ್ರಮಾಣ ವಚನ ಬೋಧಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಹಿಂದೂ ಯುವ ವಾಹಿನಿ ಸಮಾರಂಭ
ಇದಕ್ಕೂ ಮುನ್ನ ಡಿಸೆಂಬರ್ 28, ಮಂಗಳವಾರದಂದು ಸುದರ್ಶನ್ ನ್ಯೂಸ್ ವಾಹಿನಿ ಉತ್ತರಪ್ರದೇಶದಲ್ಲಿನ ರುಪೈದಿಹಾ ಹಾಗೂ ನಾಗಪುರದಲ್ಲಿ ಆಯೋಜನೆಗೊಂಡಿದ್ದ ಇದೇ ಬಗೆಯ ಸಂಕಲ್ಪ ಸಭೆಗಳ ಎರಡು ವಿಡಿಯೋ ಪ್ರಸಾರ ಮಾಡಿತ್ತು. ಈ ಎರಡು ವಿಡಿಯೋಗಳು ಡಿಸೆಂಬರ್ 19ರಂದು ದೆಹಲಿಯಲ್ಲಿ ಆಯೋಜನೆಗೊಂಡಿದ್ದ ಹಿಂದೂ ಯುವ ವಾಹಿನಿ ಸಮಾರಂಭದಲ್ಲಿ ಸ್ವತಃ ಚವ್ಹಾಂಕೆ ಇದೇ ಬಗೆಯ ಪ್ರಮಾಣ ವಚನ ಬೋಧಿಸಿದ ಕೆಲವೇ ದಿನಗಳ ಅಂತರದಲ್ಲಿ ಪ್ರಸಾರಗೊಂಡಿವೆ. ಈ ಸಮಾರಂಭದ ವಿಡಿಯೋ ಡಿಸೆಂಬರ್ 22ರಂದು ಸಾಮಾಜಿಕ ಜಾಲತಾಣಗಳಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು.

ಇದನ್ನೂ ಓದಿ: Bhagavad Gita: ಅರಬ್ ರಾಷ್ಟ್ರಗಳಲ್ಲಿ ಮಾರಾಟವಾಯಿತು 15 ಕೋಟಿ ಭಗವದ್ಗೀತೆ ಪ್ರತಿ

ವಿಡಿಯೋ ನೋಡಿ:

"ಜೈ ಹಿಂದ್" ಘೋಷಣೆ
ಉತ್ತರಪ್ರದೇಶದ ಸೋನ್‌ಭದ್ರಾದಲ್ಲಿನ ನೆಹರೂ ಉದ್ಯಾನವನದಲ್ಲಿ ಶಾಲಾಮಕ್ಕಳಿಗೆ ಪ್ರಮಾಣ ವಚನ ಬೋಧಿಸಲಾಗಿತ್ತು ಹಾಗೂ ಈ ದೃಶ್ಯವನ್ನು ಸುದರ್ಶನ್ ಟಿವಿಯ ವರದಿಗಾರ ರಾಜೇಶ್ ಸಿಂಗ್ ಚಿತ್ರೀಕರಿಸಿಕೊಂಡಿದ್ದರು. ಈ ಪ್ರಮಾಣ ವಚನವು "ಭಾರತ್ ಮಾತಾ ಕಿ ಜೈ", " ವಂದೇ ಮಾತರಂ " ಹಾಗೂ "ಜೈ ಹಿಂದ್" ಘೋಷಣೆಗಳೊಂದಿಗೆ ಕೊನೆಗೊಂಡಿತ್ತು. ಶಾಲಾ ಸಮಯ ಮುಗಿದ ನಂತರ ಶಾಲಾ ವಿದ್ಯಾರ್ಥಿಗಳು ತಮ್ಮ ಶಾಲಾ ಸಮವಸ್ತ್ರಗಳೊಂದಿಗೆ ಪ್ರಮಾಣ ವಚನ ಸಭೆಯಲ್ಲಿ ಭಾಗಿಯಾಗಿದ್ದರು. ತಮ್ಮ ಪೋಷಕರೊಂದಿಗೆ ಉದ್ಯಾನವನಕ್ಕೆ ಭೇಟಿ ನೀಡಿದ್ದ ಕೆಲ ಮಕ್ಕಳೂ ಈ ಪ್ರಮಾಣ ವಚನ ಸಭೆಯಲ್ಲಿ ಭಾಗಿಯಾದರು.

ತನಿಖೆ ಪ್ರಗತಿಯಲ್ಲಿದೆ
ವಿಡಿಯೋ ದೃಶ್ಯಾವಳಿಗಳ ಕುರಿತು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಸೋನ್‌ಭದ್ರ ಪೊಲೀಸರು, "ಈ ವಿಷಯವನ್ನು ಸಂಬಂಧಿಸಿದ ಪೊಲೀಸ್ ಅಧಿಕಾರಿಯ ಗಮನಕ್ಕೆ ತರಲಾಗಿದೆ. ವಿಡಿಯೋ ಕುರಿತಂತೆ ತನಿಖೆ ಪ್ರಗತಿಯಲ್ಲಿದೆ" ಎಂದು ತಿಳಿಸಿದ್ದಾರೆ. ಮಂಗಳವಾರ ಸುದರ್ಶನ್ ನ್ಯೂಸ್ ವಾಹಿನಿಯಲ್ಲಿ ಪ್ರಸಾರವಾಗಿದ್ದ ವಿಡಿಯೋದಲ್ಲಿ ಭಾರತ-ನೇಪಾಳ ಗಡಿಯಲ್ಲಿರುವ ಸಣ್ಣ ಪಟ್ಟಣ ರುಪೈದಿಹಾದಲ್ಲಿ 12 ಮಂದಿಗೆ ಅನಾಮಿಕ ವ್ಯಕ್ತಿಯೊಬ್ಬ ಪ್ರಮಾಣ ವಚನ ಬೋಧಿಸುತ್ತಿರುವುದು ಕಂಡು ಬಂದಿತ್ತು.

ಪ್ರಮಾಣ ವಚನ ಭೋದನೆ
ಮಂಗಳವಾರ ಬೆಳಗ್ಗೆ ಪ್ರಸಾರವಾಗಿದ್ದ ವಿಡಿಯೋದಲ್ಲಿ ನಾಗಪುರದಲ್ಲಿ ಹಲವಾರು ವ್ಯಕ್ತಿಗಳಿಗೆ ಮಹಿಳೆಯೊಬ್ಬಳು ಪ್ರಮಾಣ ವಚನ ಬೋಧಿಸುತ್ತಿರುವುದು ಕಂಡು ಬಂದಿತ್ತು. ಸಭೆಯ ಕೊನೆಯಲ್ಲಿ ಜನರ ಗುಂಪು "ಭಾರತ್ ಮಾತಾ ಕಿ ಜೈ", " ವಂದೇ ಮಾತರಂ ", " ಜೈ ಶ್ರೀರಾಂ" ಹಾಗೂ "ಛತ್ರಪತಿ ಶಿವಾಜಿ ಮಹಾರಾಜ್ ಕಿ ಜೈ" ಎಂಬ ಘೋಷಣೆಗಳನ್ನೂ ಕೂಗಿತ್ತು.

ಇದಕ್ಕೂ ಮುನ್ನ ಡಿಸೆಂಬರ್ 19ರಂದು ದೆಹಲಿಯ ಗೋವಿಂದ್‌ಪುರಿ ಮೆಟ್ರೊ ನಿಲ್ದಾಣದ ಬಳಿಯಿರುವ ಬನಾರಸಿದಾಸ್ ಚಂಡಿವಾಲಾ ಆಡಿಟೋರಿಯಂನಲ್ಲಿ ದ್ವೇಷ ಕಾರುವ ಸಭೆ ನಡೆದಿತ್ತು. ಆದರೆ, ಡಿಸೆಂಬರ್ 24ರವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.

ಇದನ್ನೂ ಓದಿ: Drugs ದಾಸಳಾಗಿರುವ ಮಗಳನ್ನು ರಕ್ಷಿಸಿ.. ಹಿಂದೂ ಸಂಘಟನೆ ಮೊರೆ ಹೋದ ನೊಂದ ತಾಯಿ!

ಪ್ರಚೋದನೆ
ಈ ಸಭೆಯು ಡಿಸೆಂಬರ್ 17-19ರವರೆಗೆ ಉತ್ತರಾಖಂಡದ ಯಾತ್ರಾಸ್ಥಳ ಹರಿದ್ವಾರದಲ್ಲಿ ವಿವಾದಿತ ಹಿಂದೂ ನಾಯಕ ಯತಿ ನರಸಿಂಗಾನಂದ್ ಆಯೋಜಿಸಿದ್ದ ಸಮ್ಮೇಳನದ ಬೆನ್ನಿಗೇ ನಡೆದಿತ್ತು. ಹಲವಾರು ಭಾಷಣಗಳ ವಿಡಿಯೋಗಳಲ್ಲಿ ಅಲ್ಪಸಂಖ್ಯಾತರನ್ನು ಕೊಲ್ಲುವಂತೆ ಸಭೆಯಲ್ಲಿ ಭಾಗಿಯಾಗಿದ್ದವರನ್ನು ಪ್ರಚೋದಿಸಿರುವುದು, ಅವರ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸಲು ಕರೆ ಕೊಟ್ಟಿರುವುದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪ್ರಮಾಣದಲ್ಲಿ ವೈರಲ್ ಆಗಿದೆ.
Published by:vanithasanjevani vanithasanjevani
First published: