Student Scholarship: ವಿದ್ಯಾರ್ಥಿಗಳೇ, ಈ ಸ್ಕಾಲರ್​ಶಿಪ್​ಗಳಿಗೆ ತಡ ಮಾಡದೇ ಅರ್ಜಿ ಹಾಕಿ

ಸೂಕ್ತ ಸ್ಕಾಲರ್​ಶಿಪ್ ಮತ್ತು ಫೆಲೋಶಿಪ್ ಕಾರ್ಯಕ್ರಮಗಳು ನಿಮಗೆ ವಿದೇಶ ವ್ಯಾಸಂಗ, ವೃತ್ತಿ ಸೇರಿದಂತೆ ಹಲವಾರು ರೀತಿಯಲ್ಲಿ ಸಹಾಯ ಮಾಡಬಹುದು. ಅಂತಹ 3 ಸ್ಕಾಲರ್​ಶಿಪ್ ಕಾರ್ಯಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ವಿದ್ಯಾರ್ಥಿವೇತನ (Student Scholarship) ಅನೇಕ ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಾಧನೆಯ ಕನಸಿಗೆ ಒಂದು ವರದಾನವಾಗಿದೆ. ಇದು ಸಾಧನೆಯ ಹಾದಿಯಲ್ಲಿ ನಡೆಯಲು ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಒಂದು ರೀತಿಯ ಪ್ರೋತ್ಸಾಹವೂ ಹೌದು. ಸ್ಕಾಲರ್ಶಿಪ್ ಎಂದರೆ, ವಿವಿಧ ವಯೋಮಾನದ ಮತ್ತು ಅರ್ಹತೆಯ ವಿದ್ಯಾರ್ಥಿಗಳಿಗೆ ನೀಡುವ ಒಂದು ಹಣಕಾಸಿನ ಸಹಾಯ. ಕೊರೋನಾ ಸಾಂಕ್ರಮಿಕದ ಸಂದರ್ಭದಲ್ಲಿ, ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳ (Students) ಓದಿಗೆ ಬೆಂಬಲ ನೀಡಲು ಭಾರತದಲ್ಲಿ ಅನೇಕ ರೀತಿಯ ಸ್ಕಾಲರ್​ಶಿಪ್‍ಗಳು ಜಾರಿಗೆ ಬಂದಿವೆ. ಸೂಕ್ತ ಸ್ಕಾಲರ್​ಶಿಪ್‍ ಮತ್ತು ಫೆಲೋಶಿಪ್ ಕಾರ್ಯಕ್ರಮಗಳು ನಿಮಗೆ ವಿದೇಶ ವ್ಯಾಸಂಗ, ವೃತ್ತಿ ಸೇರಿದಂತೆ ಹಲವಾರು ರೀತಿಯಲ್ಲಿ ಸಹಾಯ (Help) ಮಾಡಬಹುದು. ಅಂತಹವುಗಳಲ್ಲಿ 3 ಸ್ಕಾಲರ್​ಶಿಪ್‍ ಕಾರ್ಯಕ್ರಮಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಮುಂಬರುವ ತಿಂಗಳಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಲಭ್ಯವಾಗಲಿರುವ ವಿದ್ಯಾರ್ಥಿವೇತನಗಳ ಬಗ್ಗೆ ಮಾಹಿತಿ ಇಲ್ಲಿದೆ

1. ಅನ್‍ಸ್ಟಾಪ್ಪೇಬಲ್: ಕರ್‍ಕೆ ದಿಖಾವೂಂಗಿ ಅಥ್ಲೀಟ್ ಸ್ಕಾಲರ್ಶಿಪ್ 2022 -23
ಅನ್‍ಸ್ಟಾಪ್ಪೇಬಲ್ ಕರ್‍ಕೆ ದಿಖಾವೂಂಗಿ ಅಥ್ಲೀಟ್ ಸ್ಕಾಲರ್ಶಿಪ್ 2022 -23, ಗೋ ಸ್ಪೋರ್ಟ್ಸ್ ಫೌಂಡೇಶನ್ (ಭಾರತೀಯ ಮಹಿಳಾ ಕ್ರೀಡಾಪಟುಗಳನ್ನು ಬೆಂಬಲಿಸುವ ಒಂದು ಲಾಭರಹಿತ ಟ್ರಸ್ಟ್ ) ಮತ್ತು ಹೆಚ್‍ಡಿಎಫ್‍ಸಿ ಬ್ಯಾಂಕ್ ಪರಿವರ್ತನ್ ಮಹಿಳಾ ಕ್ರೀಡಾಪಟುಗಳಿಗೆ ತಮ್ಮ ಸಾಧನೆಯ ಕನಸನ್ನು ನನಸಾಗಿಸಿಕೊಳ್ಳಲು ನೀಡುತ್ತಿರುವ ಒಂದು ಅವಕಾಶವಾಗಿದೆ. ಭಾರತ ದೇಶವನ್ನು ಒಲಿಂಪಿಕ್ ಮತ್ತು ಪ್ಯಾರಒಲಿಂಪಿಕ್‍ನಲ್ಲಿ, ಪ್ರತಿನಿಧಿಸುವ ಕನಸನ್ನು ಹೊತ್ತಿರುವ ದೇಶದಾದ್ಯಂತ ಇರುವ ಹಲವಾರು ಯುವತಿಯರು ಮತ್ತು ಮಹಿಳೆಯರನ್ನು ತಲುಪುವ ಗುರಿಯನ್ನು ಈ ಸ್ಕಾಲರ್ಶಿಪ್ ಕಾರ್ಯಕ್ರಮ ಹೊಂದಿದೆ.

ಅರ್ಹತೆ : ನಿರ್ದಿಷ್ಟ ಒಲಿಂಪಿಕ್/ ಪ್ಯಾರಾಒಲಿಂಪಿಕ್ಸ್/ಸಾಹಸ/ವಿಂಟರ್ ಒಲಿಂಪಿಕ್ /ಮೋಟಾರ್ ಸ್ಪೋರ್ಟ್ಸ್ ಈವೆಂಟ್‍ಗಳಲ್ಲಿ ಭಾಗವಹಿಸಿರುವ 13 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಭಾರತೀಯ ಮಹಿಳಾ ಕ್ರೀಡಾಪಟುಗಳು ಇದನ್ನು ಪಡೆದುಕೊಳ್ಳಬಹುದು.
ಬಹುಮಾನ : ಮಾರ್ಪಡಿಸಬಹುದಾದ ಪ್ರಶಸ್ತಿಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-06-2022
ಅರ್ಜಿ ಸಲ್ಲಿಸುವ ವಿಧಾನ : ಕೇವಲ ಆನ್‍ಲೈನ್‍ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ  

2. ಕ್ವಾಡ್ ಫೆಲೋಶಿಪ್ 2022
SCHMIDT ಫ್ಯೂಚರ್ಸ್ ಸಂಸ್ಥೆಯು, ಬ್ಯಾಚುಲರ್ಸ್ ಅಥವಾ ಅದಕ್ಕೆ ಸಮಾನ ಡಿಗ್ರಿಯನ್ನು ಹೊಂದಿರುವವರಿಗೆ ನೀಡುವ ಅವಕಾಶವೇ ಕ್ವಾಡ್ ಫೆಲೋಶಿಪ್ 2022.

ಅರ್ಹತೆ : ಆಸ್ಟ್ರೇಲಿಯಾ, ಭಾರತ, ಜಪಾನ್ ಅಥವಾ ಯುನೈಟೆಡ್ ಸ್ಟೇಟ್ಸ್‍ನ ಕಾನೂನುಬದ್ಧ ನಿವಾಸಿಗಳು ಕ್ವಾಡ್ ಫೆಲೋಶಿಪ್ 2022 ಪಡೆಯಲು ಅರ್ಹತೆ ಹೊಂದಿರುತ್ತಾರೆ. ಆದರೆ ಅರ್ಜಿ ಸಲ್ಲಿಸುವ ಅವಧಿಯಲ್ಲಿ ಅವರಿಗೆ ಕನಿಷ್ಟ 18 ವರ್ಷ ವಯಸ್ಸಾಗಿರಬೇಕು.

ಇದನ್ನೂ ಓದಿ: Student Bus Pass: ವಿದ್ಯಾರ್ಥಿಗಳೇ, ವೆಬ್​ಸೈಟ್ ಮೂಲಕ ನಿಮ್ಮ ಬಸ್ ಪಾಸ್ ಪಡೆಯೋದು ಹೇಗೆ? ಸುಲಭ ವಿಧಾನ ಇಲ್ಲಿದೆ

ಕ್ವಾಡ್ ಫೆಲೋಶಿಪ್ 2022 ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಆಗಸ್ಟ್ 2023 ರ ಒಳಗೆ STEM ಕ್ಷೇತ್ರದಲ್ಲಿ ಬ್ಯಾಚುಲರ್ಸ್ ಡಿಗ್ರಿ ಅಥವಾ ಅದಕ್ಕೆ ಸಮಾನವಾ ಪದವಿಯನ್ನು ಪಡೆದಿರಬೇಕು ಮತ್ತು ಪದವಿಪೂರ್ವ ಮಟ್ಟದಲ್ಲಿ ಉನ್ನತ ಮಟ್ಟದ ಶೈಕ್ಷಣಿಕ ಸಾಧನೆಯ ಪ್ರದರ್ಶಿತ ದಾಖಲೆಯನ್ನು ಹೊಂದಿರಬೇಕು.

ಬಹುಮಾನ :
50 ಸಾವಿರ ಡಾಲರ್ ಮತ್ತು ಇತರ ಲಾಭಗಳು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 -06- 2022
ಅರ್ಜಿ ಸಲ್ಲಿಸುವ ವಿಧಾನ : ಕೇವಲ ಆನ್‍ಲೈನ್‍ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

3. ಡಾ. ರೆಡ್ಡೀಸ್ ಫೌಂಡೇಶನ್ ಸಶಕ್ತ್ ಸ್ಕಾಲರ್ಶಿಪ್ 2022
ಡಾ.ರೆಡ್ಡೀಸ್ ಫೌಂಡೇಶನ್ ಸಶಕ್ತ್ ಸ್ಕಾಲರ್ಶಿಪ್ 2022, ಭಾರತದಾದ್ಯಂತ ಇರುವ ಯುವತಿಯರು ವಿಜ್ಞಾನದಲ್ಲಿ ವೃತ್ತಿಯನ್ನು ಕೈಗೊಳ್ಳಲು ಪ್ರೋತ್ಸಾಹ ನೀಡುವ ಉದ್ದೇಶದಿಂದ ಡಾ.ರೆಡ್ಡಿಸ್ ಫೌಂಡೇಶನ್ ಕೊಡುತ್ತಿರುವ ಸ್ಕಾಲರ್ಶಿಪ್ ಇದು.

ಇದನ್ನೂ ಓದಿ: Belagavi: ವಿದ್ಯಾರ್ಥಿಗಳೇ ಗಮನಿಸಿ, ಹಾಸ್ಟೆಲ್ ಸೌಲಭ್ಯದ ಮಹತ್ವದ ಮಾಹಿತಿ ಇಲ್ಲಿದೆ

ಅರ್ಹತೆ : ಉನ್ನತ ಶೈಕ್ಷಣಿಕ ಸಾಧನೆ ಮಾಡಿರುವ ಮತ್ತು ಪ್ಯೂರ್/ನ್ಯಾಚುರಲ್ ಸೈನ್ಸ್ ಬಿಎಸ್ಸಿ ಪ್ರೋಗ್ರಾಮ್ ಅನ್ನು ಆಯ್ಕೆ ಮಾಡಿಕೊಂಡಿರುವ ಎಲ್ಲಾ ಭಾರತೀಯ ಹುಡುಗಿಯರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31- 08- 2022
ಅರ್ಜಿ ಸಲ್ಲಿಸುವ ವಿಧಾನ : ಕೇವಲ ಆನ್‍ಲೈನ್ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು  ಇಲ್ಲಿ ಕ್ಲಿಕ್ ಮಾಡಿ
Published by:Ashwini Prabhu
First published: