ವ್ಯಕ್ತಿಯೊಬ್ಬನ ಕತ್ತಿಗೆ ಸುತ್ತಿಕೊಂಡ ಹೆಬ್ಬಾವು; ವಿಡಿಯೋ ವೈರಲ್

ಹಾವು ಸುಮಾರು 6-7 ಅಡಿ ಉದ್ದವಿದ್ದು, ಜನರು ಹಾವಿನಿಂದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.  ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

Latha CG | news18-kannada
Updated:October 16, 2019, 4:30 PM IST
ವ್ಯಕ್ತಿಯೊಬ್ಬನ ಕತ್ತಿಗೆ ಸುತ್ತಿಕೊಂಡ ಹೆಬ್ಬಾವು; ವಿಡಿಯೋ ವೈರಲ್
ವ್ಯಕ್ತಿಯ ಕೊರಳಿಗೆ ಸುತ್ತಿಕೊಂಡಿರುವ ಹೆಬ್ಬಾವು
  • Share this:
ಕೇರಳ(ಅ.16): ಕೇರಳದಲ್ಲಿ ಬೃಹದಾಕಾರದ ಹೆಬ್ಬಾವು ಕಾಣಿಸಿಕೊಂಡಿದ್ದು, ಅದನ್ನು ಸೆರೆ ಹಿಡಿದಿರುವ ದೃಶ್ಯ ಮೈ ಜುಂ ಎನ್ನಿಸುವಂತಿದೆ. 

ತಿರುವನಂತಪುರ ಜಿಲ್ಲೆಯ ನೆಯ್ಯರ್​ ಡ್ಯಾಂ ಬಳಿಯ ಕೋ-ಆಪರೇಟಿವ್ ಕಾಲೇಜು ಬಳಿ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ನರೇಗಾ ಕೆಲಸಗಾರರು ಅಲ್ಲಿನ ಅನಗತ್ಯ ಗಿಡಗಂಟೆಗಳನ್ನು  ಕಿತ್ತು ಹಾಕಿ, ಪೊದೆಗಳನ್ನು ತೆರವು ಮಾಡುತ್ತಿದ್ದರು.

ಈ   ವೇಳೆ ಅಲ್ಲಯೇ ಇದ್ದ ಬೃಹದಾಕಾರದ ಹೆಬ್ಬಾವು  ವ್ಯಕ್ತಿಯೊಬ್ಬರ ಕತ್ತಿಗೆ ಸುತ್ತಿಕೊಂಡಿದೆ.  ತಕ್ಷಣ ಅಲ್ಲೇ ಇದ್ದ ಉಳಿದ ಕೆಲಸಗಾರರು ಹೋಗಿ ವ್ಯಕ್ತಿಯ ಕತ್ತಿಗೆ ಸುತ್ತಿಕೊಂಡಿದ್ದ ಹೆಬ್ಬಾವನ್ನು ಬಿಡಿಸಿದ್ದಾರೆ.

ಜಮ್ಮು ಕಾಶ್ಮೀರದಲ್ಲಿ ಸೈನಿಕ ಕಾರ್ಯಾಚರಣೆ ; ಮೂವರು ಉಗ್ರರನ್ನು ಹೊಡೆದುರುಳಿಸಿದ ಸೇನೆ

ಹಾವು ಸುಮಾರು 6-7 ಅಡಿ ಉದ್ದವಿದ್ದು, ಜನರು ಹಾವಿನಿಂದ ವ್ಯಕ್ತಿಯನ್ನು ರಕ್ಷಿಸಿದ್ದಾರೆ.  ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ಬಳಿಕ ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಲಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಹೆಬ್ಬಾವನ್ನು ರಕ್ಷಿಸಿ ವಾಪಸ್ ಅರಣ್ಯಕ್ಕೆ ಬಿಟ್ಟಿದ್ದಾರೆ.

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading