VIDEO: ಹೆಲ್ಮೆಟ್​ ಏಕೆ ಧರಿಸಬೇಕು? ಬೆಚ್ಚಿ ಬೀಳಿಸುತ್ತಿದೆ ಈ ಭೀಕರ ದೃಶ್ಯ..!

ಹೆಲ್ಮೆಟ್​ ಹಾಕದೇ ವಾಹನ ಚಲಾಯಿಸಿದ್ದರಿಂದ ಉಂಟಾದ ಅನೇಕ ಸಾವು ನೋವಿನ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ ಯಾಕಾಗಿ ಹೆಲ್ಮೆಟ್​ ಹಾಕಬೇಕೆಂಬುದನ್ನು ತಿಳಿಸುವ ವಿಡಿಯೋವೊಂದು ಈಗ ಭಾರೀ ವೈರಲ್​ ಆಗಿದೆ.

zahir | news18
Updated:January 23, 2019, 10:07 PM IST
VIDEO: ಹೆಲ್ಮೆಟ್​ ಏಕೆ ಧರಿಸಬೇಕು? ಬೆಚ್ಚಿ ಬೀಳಿಸುತ್ತಿದೆ ಈ ಭೀಕರ ದೃಶ್ಯ..!
ಸಾಂದರ್ಭಿಕ ಚಿತ್ರ
  • News18
  • Last Updated: January 23, 2019, 10:07 PM IST
  • Share this:
ವಾಹನ ಚಾಲನೆ ಮಾಡುವಾಗ ಸುರಕ್ಷತೆ ಅತೀ ಮುಖ್ಯ. ಕಾರುಗಳಲ್ಲಾದರೆ ಸೀಟ್​ ಬೆಲ್ಟ್​, ಬೈಕ್​ನಲ್ಲಾದರೆ ಹೆಲ್ಮೆಟ್​ ಕಡ್ಡಾಯವಾಗಿ ಧರಿಸುವಂತೆ ಸಂಚಾರಿ ಪೊಲೀಸರು ನಿರಂತರ ಎಚ್ಚರಿಸುತ್ತಾ ಬರುತ್ತಿದೆ. ಆದರೂ ಚಾಲಕರ ಮತ್ತು ಪ್ರಯಾಣಿಕರ ನಿರ್ಲಕ್ಷ್ಯವೇ ಅನೇಕ ಜೀವಗಳನ್ನು ಬಲಿ ಪಡೆದುಕೊಳ್ಳುತ್ತಿದೆ. ದ್ವಿಚಕ್ರ ವಾಹನಗಳಿಂದ ಉಂಟಾಗುವ ಅಪಘಾತದಲ್ಲಿ ಜೀವ ಉಳಿಸಲು ಹೆಲ್ಮೆಟ್ ಹೊಂದಿದ್ದರೆ ಸಾಕು ಎಂದು ಸಾರಿ ಹೇಳಲಾಗುತ್ತಿದ್ದರೂ, ಸವಾರರು ಸಂಚಾರಿ ನಿಯಮಕ್ಕೆ ಪ್ರಾಮುಖ್ಯತೆ ನೀಡುತ್ತಿಲ್ಲ ಎಂಬುದೇ ದುಖಃಕರ ಸಂಗತಿ.

ಹೆಲ್ಮೆಟ್​ ಹಾಕದೇ ವಾಹನ ಚಲಾಯಿಸಿದ್ದರಿಂದ ಉಂಟಾದ ಅನೇಕ ಸಾವು ನೋವಿನ ವಿಡಿಯೋಗಳನ್ನು ನೀವು ನೋಡಿರುತ್ತೀರಿ. ಆದರೆ ಯಾಕಾಗಿ ಹೆಲ್ಮೆಟ್​ ಹಾಕಬೇಕೆಂಬುದನ್ನು ತಿಳಿಸುವ ವಿಡಿಯೋವೊಂದು ಈಗ ಭಾರೀ ವೈರಲ್​ ಆಗಿದೆ. ಟ್ರಕ್​ವೊಂದರ ಹಿಂಬದಿಯಲ್ಲಿ ಚಲಿಸುತ್ತಿದ್ದ ಬೈಕ್ ಸವಾರನೊಬ್ಬ ಓವರ್​ ಟೇಕ್​ ಮಾಡಲು ಹೋಗಿ ಅದೃಷ್ಟವಶಾತ್​ ಪರಾದ ವಿಡಿಯೋ ಹೆಲ್ಮೆಟ್​ನ ಪ್ರಾಮುಖ್ಯತೆಯನ್ನು ತಿಳಿಸುತ್ತಿದೆ.

ಇದನ್ನೂ ಓದಿ: ಬಿಗ್​ಬಾಸ್​ ಗೆದ್ದರೆ ಹಳ್ಳಿಯನ್ನು ದತ್ತು ತೆಗೆದುಕೊಳ್ಳಲಿದ್ದಾರೆ ನವೀನ್​ ಸಜ್ಜು

ಕಿರಿದಾದ ರಸ್ತೆಯಲ್ಲಿ ದೊಡ್ಡ ವಾಹನವನ್ನು ಓವರ್​ ಟೇಕ್ ಮಾಡಲು ಹೋದ ಬೈಕ್ ಸವಾರ ನಿಯಂತ್ರಣ ತಪ್ಪಿ ಟ್ರಕ್​ ಕೆಳಗೆ ಸಿಲುಕಿದ್ದರು. ಅಷ್ಟೇ ಅಲ್ಲದೆ ಟ್ರಕ್​ನ ಹಿಂಬದಿ ಚಕ್ರಗಳು ಬೈಕ್​ ಸವಾರನ ತಲೆ ಮೇಲೆ ಹರಿದಿದೆ. ಮುಂದೆ ನಡೆದಿದ್ದೇ ಪವಾಡ. ಅಕ್ಷರಶಃ ಹೆಲ್ಮೆಟ್​ ಧರಿಸಿದ ಪವಾಡ. ಹೌದು, ಬೈಕ್ ಸವಾರ ತಲೆ ಮೇಲೆ ಚಕ್ರಗಳು ಹರಿದರೂ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉತ್ತಮ ಹೆಲ್ಮೆಟ್​ ಧರಿಸಿದ್ದರಿಂದ ಬೈಕ್ ಸವಾರ ಜೀವ ಉಳಿಸಿಕೊಂಡಿದ್ದಾರೆ. ಈ ಭೀಕರ ದೃಶ್ಯವು ಟ್ರಕ್​ನ ಹಿಂದಿದ್ದ ಮತ್ತೊಂದು ವಾಹನದ ಕ್ಯಾಮೆರಾದಲ್ಲಿ ರೆಕಾರ್ಡ್​​ ಆಗಿದೆ.

ಈ ವಿಡಿಯೋವನ್ನು ಐಪಿಎಲ್​ ಅಧಿಕಾತರಿ ರಾಜ್ ತಿಲಕ್ ರೌಶನ್ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಯಾಕಾಗಿ ಹೆಲ್ಮೆಟ್​ ಧರಿಸಬೇಕೆಂದಕ್ಕೆ ಅತ್ಯುತ್ತಮ ಉತ್ತರವನ್ನು ನೀಡಿದ್ದಾರೆ. ಹೀಗಾಗಿ ಇನ್ನು ಮುಂದೆ ಎಚ್ಚರ, ಹತ್ತಿರವಿರಲಿ ಅಥವಾ ದೂರವೇ ಇರಲಿ ಹೆಲ್ಮೆಟ್​ ಧರಿಸದೇ ಬೈಕ್​ನಲ್ಲಿ ಸವಾರಿ ಮಾಡಬೇಡಿ.

ಇದನ್ನೂ ಓದಿ: ನೀವು ಎಟಿಎಂ ಕಾರ್ಡ್​ ಬಳಸುತ್ತೀರಾ? ಹಾಗಿದ್ರೆ ಇನ್ಮುಂದೆ ಈ ಪೌಚ್​ಗಳನ್ನು ಬಳಸಲೇಬೇಕು
First published:January 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ