UPI Fraud: 1 ಕೋಟಿ ರೂಪಾಯಿ ಕದ್ದ ಸೈಬರ್ ವಂಚಕರು, 81 ಗ್ರಾಹಕರಿಗೆ ಬಿತ್ತು ಪಂಗನಾಮ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದೇಶದಲ್ಲಿ ಪ್ರತಿನಿತ್ಯ ಕೆವೈಸಿಗೆ, ಯುಪಿಐ ಪಾವತಿಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಅದ್ರಲ್ಲಿ ಪ್ರಸ್ತುತ ಚರ್ಚೆಗೆ ಕಾರಣವಾಗಿರುವುದು ಮುಂಬೈನ ಯುಪಿಐ ಹಗರಣ. ಮುಂಬೈನಲ್ಲಿ ಕೆವೈಸಿಗೆ ಸಂಬಂಧಿಸಿದಂತೆ 81 ಮಂದಿಯಿಂದ 1 ಕೋಟಿ ರೂ.ಗೂ ಹೆಚ್ಚು ಲೂಟಿ ಮಾಡಿದೆ ಎಂದು ಪ್ರಕರಣದ ವರದಿಗಳು ಸೂಚಿಸಿವೆ.

ಮುಂದೆ ಓದಿ ...
  • Share this:

UPI (ಏಕೀಕೃತ ಪಾವತಿ ಇಂಟರ್ಫೇಸ್) ಪಾವತಿ ಬಂದಮೇಲೆ ಜನ ಪರ್ಸಲ್ಲಿ ಬಿಡಿಗಾಸನ್ನು ಸಹ ಇಟ್ಟುಕೊಳ್ಳಲಾರದ ಮಟ್ಟಕ್ಕೆ ಬಂದಿದ್ದಾರೆ. ಕೊತ್ತುಂಬರಿ, ಕರಿಬೇವು ಸೊಪ್ಪು ಖರೀದಿ ಮಾಡೋದ್ರಿಂದ ಹಿಡಿದು ಫ್ಲೈಟ್‌ ಟಿಕೆಟ್‌ ಬುಕ್‌ ಮಾಡೋದರ ತನಕ ಎಲ್ಲದ್ದಕ್ಕೂ ಯುಪಿಐ ಪೇಮೆಂಟ್‌ (Upi Payment). ಅಷ್ಟರ ಮಟ್ಟಿಗೆ ಡಿಜಿಟಲ್‌ ಇಂಡಿಯಾದ (Digital India) ಉಪಕ್ರಮ ದೇಶದಲ್ಲಿ ಜನಪ್ರಿಯತೆ ಹೊಂದಿದೆ. ಭಾರತದಲ್ಲಿ (India) ಪ್ರಸ್ತುತ ಅಧಿಕವಾಗಿ ಯುಪಿಐ ವಹಿವಾಟನ್ನು ನಡೆಸಲಾಗುತ್ತದೆ. ಅತೀ ಸರಳವಾದ, ವೇಗವಾದ ವಹಿವಾಟು ಇದಾದ ಕಾರಣ ಹೆಚ್ಚಿನ ಜನರು ಯುಪಿಐ ವಹಿವಾಟಿನ ಮೇಲೆ ಅವಲಂಬಿತರಾಗಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಪ್ರಕಾರ, ಫೆಬ್ರವರಿ 2022 ರಲ್ಲಿ UPI ಮೂಲಕ ದೈನಂದಿನ ವಹಿವಾಟುಗಳು 24 ಕೋಟಿಯಿಂದ 36 ಕೋಟಿಗೆ ದಾಟಿದೆ ಎಂದು ತಿಳಿಸಿದೆ.


ಆನ್‌ಲೈನ್‌ ಪಾವತಿಗಳು ತಕ್ಷಣಕ್ಕೆ ಎಷ್ಟು ಲಾಭವೋ ಅಷ್ಟೇ ಪ್ರಮಾಣದಲ್ಲಿ ತನ್ನದೇ ಬಾಧಕಗಳನ್ನು ಹೊಂದಿದೆ. ಕೆವೈಸಿ ಅಪ್‍ಡೇಟ್ ಹೆಸರಲ್ಲಿ, ಯಪಿಐ ಪಾವತಿ ಹೀಗೆ ಹಲವು ವಿಚಾರಗಳಲ್ಲಿ ವಂಚನೆ ನಡೆಯುತ್ತಿದೆ. ಕೇಂದ್ರ ಹಣಕಾಸು ಸಚಿವಾಲಯದ ವರದಿಯು, ಸೈಬರ್ ಸೆಲ್‌ಗಳು 2022-23 ರ ನಡುವೆ ಯುಪಿಐ ವಹಿವಾಟಿನ 95,000 ಕ್ಕೂ ಹೆಚ್ಚು ವಂಚನೆ ಪ್ರಕರಣಗಳನ್ನು ದಾಖಲಿಸಿವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ನೈಜ-ಸಮಯದ ಪಾವತಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದರೂ, ಸ್ಕ್ಯಾಮರ್‌ಗಳು ಹಣವನ್ನು ಸುಲಿಗೆ ಮಾಡಲು ಜನರ ಲೋಪದೋಷಗಳನ್ನು ಮತ್ತು ಅವರ ಅರಿವಿನ ಕೊರತೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.


ಸಾಂದರ್ಭಿಕ ಚಿತ್ರ


ಮುಂಬೈನಲ್ಲಿ ಅತಿದೊಡ್ಡ ಯುಪಿಐ ಪಾವತಿ ಹಗರಣ
ದೇಶದಲ್ಲಿ ಪ್ರತಿನಿತ್ಯ ಕೆವೈಸಿಗೆ, ಯುಪಿಐ ಪಾವತಿಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಅದ್ರಲ್ಲಿ ಪ್ರಸ್ತುತ ಚರ್ಚೆಗೆ ಕಾರಣವಾಗಿರುವುದು ಮುಂಬೈನ ಯುಪಿಐ ಹಗರಣ. ಮುಂಬೈನಲ್ಲಿ ಕೆವೈಸಿಗೆ ಸಂಬಂಧಿಸಿದಂತೆ 81 ಮಂದಿಯಿಂದ 1 ಕೋಟಿ ರೂ.ಗೂ ಹೆಚ್ಚು ಲೂಟಿ ಮಾಡಿದೆ ಎಂದು ಪ್ರಕರಣದ ವರದಿಗಳು ಸೂಚಿಸಿವೆ.


ವಂಚನೆ ನಡೆದದ್ದು ಹೇಗೆ?
ಎಫ್‌ಐಆರ್ ಮತ್ತು ಸಂತ್ರಸ್ತರ ಸಾಕ್ಷ್ಯಗಳ ಪ್ರಕಾರ, ಸ್ಕ್ಯಾಮರ್‌ಗಳು ತಮ್ಮ ಗೂಗಲ್‌ ಪೇನಂತಹ UPI ಅಪ್ಲಿಕೇಶನ್‌ಗಳಲ್ಲಿ ಮೊದಲಿಗೆ ಒಂದಿಷ್ಟು ಜನರಿಗೆ ಹಣವನ್ನು ಕಳುಹಿಸುತ್ತಾರೆ. ನಂತರ ವರ್ಗಾವಣೆಯು ತಪ್ಪಾಗಿದೆ ಎಂದು ಹೇಳಿಕೊಂಡು ಅವರನ್ನು ಸಂಪರ್ಕಿಸುತ್ತಾರೆ ಮತ್ತು ತಮ್ಮ ಸಂಖ್ಯೆಗೆ ಹಣವನ್ನು ಹಿಂತಿರುಗಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ. ವಂಚನೆಯ ಗಂಧಗಾಳಿ ಗೊತ್ತಿಲ್ಲದವರು ಯಾರಾದರೂ ಹಣವನ್ನು ಹಿಂತಿರುಗಿಸಿದ ತಕ್ಷಣ, ಸ್ಕ್ಯಾಮರ್‌ಗಳು ಅವರ UPI ಖಾತೆಯನ್ನು ಹ್ಯಾಕ್ ಮಾಡುತ್ತಾರೆ. ಮತ್ತು ಪಾನ್ ಮತ್ತು ಆಧಾರ್ ಸೇರಿದಂತೆ ಅವರ ಸಂಪೂರ್ಣ ಡೇಟಾ‌ ಕಲೆ ಹಾಕಿ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣವನ್ನು ಕದಿಯುತ್ತಾರೆ. ಹೀಗೆ ಮುಂಬೈನಲ್ಲಿ 81 ಮಂದಿಯಿಂದ 1 ಕೋಟಿ ರೂಗಳಿಗಿಂತ ಹೆಚ್ಚಿನ ಹಣವನ್ನು ಸ್ಕ್ಯಾಮರ್ಸ್‌ಗಳು ದೋಚಿದ್ದಾರೆ.




ಮೋಸ ಹೋಗಬೇಡಿ.. ಜಾಗೃತರಾಗಿರಿ
ಈ ರೀತಿಯಾದ ವಂಚನೆಗಳಿಂದ ಜಾಗೃತರಾಗಿರಲು ಅಪ್ಲಿಕೇಷನ್‌ಗಳು ಆಗಾಗ್ಗೆ ಸಂದೇಶ ನೀಡುತ್ತಲೆ ಇರುತ್ತದೆ. ಕರೆ ಮಾಡುವವರಿಗೆ ನಿಮ್ಮ ಬ್ಯಾಂಕ್ ಖಾತೆ, ಕಾರ್ಡ್ ಅಥವಾ ಅಂತಹ ಯಾವುದೇ ವಿವರಗಳನ್ನು ನೀಡಬೇಡಿ ಅಥವಾ
ಯಾವುದೇ ಕರೆ ಮಾಡುವವರ ಕೋರಿಕೆಯ ಮೇರೆಗೆ Anydesk, TeamViewer ಅಥವಾ Screenshareನಂತಹ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಬೇಡಿ. ಈ ಆ್ಯಪ್‌ಗಳು ವಂಚಕರಿಗೆ ನಿಮ್ಮ ಎಲ್ಲಾ ಪಾಸ್‌ವರ್ಡ್‌ಗಳು, ಪಿನ್‌ಗಳು ಮತ್ತು ಇತರ ಪ್ರಮುಖ ವಿವರಗಳನ್ನು ನೋಡಲು ಅನುಮತಿಸುತ್ತವೆ. ಹೀಗೆ ಅನೇಕ ಸೂಚನೆಗಳನ್ನು ನೀಡುತ್ತಿರುತ್ತದೆ.




ಮುಖ್ಯವಾಗಿ ನಿಜವಾದ ಫೋನ್‌ ಪೇ, ಗೂಗಲ್‌ ಪೇ ಪ್ರತಿನಿಧಿಗಳು ನಿಮಗೆ ಯಾವತ್ತೂ ಕರೆಮಾಡಿ ನಿಮ್ಮ KYC ಪ್ರಕ್ರಿಯೆಯನ್ನು ಫೋನ್‌ನಲ್ಲಿ ಮಾಡಲು ಹೇಳುವುದಿಲ್ಲ ಅಥವಾ ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಲು ಕೇಳಿಕೊಳ್ಳುವುದಿಲ್ಲ ಎಂದು ಈ ಅಪ್ಲಿಕೇಷನ್‌ಗಳು ಎಚ್ಚರಿಸುತ್ತಲೇ ಇರುತ್ತವೆ. ಆದರೂ ಈ ಬಗ್ಗೆ ಅರಿವಿನ ಕೊರತೆ ಇರುವವರು ವಂಚಕರ ಮೋಸಕ್ಕೆ ಬಲಿಯಾಗಿ ಹಣ ಕಳೆದುಕೊಳ್ಳುತ್ತಾರೆ.
ಆದಷ್ಟು ಯುಪಿಐ ಬಳಕೆದಾರರು ಈ ರೀತಿ ಕರೆಗಳಿಗೆ ಉತ್ತರಿಸಬಾರದು ಮತ್ತು ಒಟಿಪಿಯಂತಹ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬಾರದು. ಅನುಮಾನಸ್ಪದ ಕರೆಗಳು ಬಂದಲ್ಲಿ ಹತ್ತಿರದ ಸೈಬರ್ ಸೆಲ್‌ಗೆ ಹೋಗಿ ದೂರ ನೀಡಬಹುದು.

top videos
    First published: