Adar Poonawalla: ಅದಾರ್ ಪೂನಾವಾಲಾ ಹೆಸರಲ್ಲೇ ಸೀರಮ್ ಇನ್‌ಸ್ಟಿಟ್ಯೂಟ್​ಗೆ ₹ 1,01,01,554 ಹಣ ವಂಚನೆ!

ಮೆಸೇಜ್ ಮಾಡಿದ್ದು ಸಿಇಒ ಎಂದು ನಂಬಿದ ಕಂಪನಿ ಅಧಿಕಾರಿ ಆನ್‌ಲೈನ್‌ನಲ್ಲಿ 1,01,01,554 ರೂ.ಗಳನ್ನು ವರ್ಗಾಯಿಸಿದ್ದಾರೆ.

ಅದಾರ್ ಪೂನಾವಾಲಾ

ಅದಾರ್ ಪೂನಾವಾಲಾ

  • Share this:
    ಮುಂಬೈ: ಕೋವಿಡ್ ಲಸಿಕೆ ತಯಾರಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾಕ್ಕೆ (SII) ಅದರ ಮುಖ್ಯಸ್ಥ ಅದಾರ್ ಪೂನಾವಾಲಾ (Adar Poonawalla) ಅವರ ಹೆಸರಲ್ಲೇ 1 ಕೋಟಿ ವಂಚನೆ ನಡೆಸಿದ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ವಂಚನೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಪ್ರತಾಪ್ ಮಾನ್ಕರ್ ತಿಳಿಸಿದ್ದಾರೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದಂತೆ  ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ (Serum Institute Of India) ನಿರ್ದೇಶಕರಲ್ಲಿ ಒಬ್ಬರಾದ ಸತೀಶ್ ದೇಶಪಾಂಡೆ ಅವರು ಅದಾರ್ ಪೂನಾವಾಲಾ ಎಂದು ಹೇಳಿಕೊಂಡ ವ್ಯಕ್ತಿಯಿಂದ ವಾಟ್ಸಾಪ್ ಸಂದೇಶಗಳನ್ನು ಸ್ವೀಕರಿಸಿದ್ದಾರೆ.

    ಮೆಸೇಜ್​ಗಳಲ್ಲಿ ದೇಶಪಾಂಡೆ ಅವರ ಬಳಿ ತಕ್ಷಣವೇ ಕೆಲವು ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸುವಂತೆ ಕೇಳಿಕೊಳ್ಳಲಾಗಿದೆ. ಮೆಸೇಜ್ ಮಾಡಿದ್ದು ಸಿಇಒ ಎಂದು ನಂಬಿದ ಕಂಪನಿ ಅಧಿಕಾರಿ ಆನ್‌ಲೈನ್‌ನಲ್ಲಿ 1,01,01,554 ರೂ.ಗಳನ್ನು ವರ್ಗಾಯಿಸಿದ್ದಾರೆ. ಆದರೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅದಾರ್ ಪೂನಾವಾಲಾ ಅಂತಹ ಯಾವುದೇ ವಾಟ್ಸಾಪ್ ಮೆಸೇಜ್​ಗಳನ್ನು ಕಳುಹಿಸಿಲ್ಲ ಎಂದು ನಂತರ ತಿಳಿದುಬಂದಿದೆ.
    Published by:ಗುರುಗಣೇಶ ಡಬ್ಗುಳಿ
    First published: