ಜೀವ ಬೆದರಿಕೆ ಹಿನ್ನೆಲೆ ಅಸ್ಸಾಂನಿಂದ ಎನ್​ಆರ್​ಸಿ ಅಧಿಕಾರಿ ವರ್ಗಾವಣೆ ಮಾಡಿ ಸುಪ್ರೀಂ ಆದೇಶ

ಅಸ್ಸಾಂ-ಮೇಘಾಲಯ ಕೇಡರ್​ನ 1995 ಬ್ಯಾಚ್​ನ ಹಜೀಲ ಅಸ್ಸಾಂನಲ್ಲಿ ವಿವಾದ ಮೂಡಿಸಿದ ಎನ್​ಆರ್​ಸಿ ಕುರಿತು ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆಗಸ್ಟ್​ 31ರಂದು ಕಡೆಯ ಎನ್​ಆರ್​ಸಿ ಲಿಸ್ಟ್​ ಅನ್ನು ಪ್ರಕಟಗೊಳಿಸಲಾಗಿತ್ತು.

Seema.R | news18-kannada
Updated:October 18, 2019, 11:31 AM IST
ಜೀವ ಬೆದರಿಕೆ ಹಿನ್ನೆಲೆ ಅಸ್ಸಾಂನಿಂದ ಎನ್​ಆರ್​ಸಿ ಅಧಿಕಾರಿ ವರ್ಗಾವಣೆ ಮಾಡಿ ಸುಪ್ರೀಂ ಆದೇಶ
ಸುಪ್ರೀಂ ಕೋರ್ಟ್
  • Share this:
ನವದೆಹಲಿ (ಅ.18): ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್​ ಆರ್​ಸಿ)ಯ ಸಹಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರತೀಕ್​ ಹಜಿಲ ಅವರನ್ನು ಮಧ್ಯ ಪ್ರದೇಶಕ್ಕೆ ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್​ ಆದೇಶ ನೀಡಿದೆ.

ಏಕಾಏಕಿ ಅವರನ್ನು ಯಾವ ಕಾರಣಕ್ಕಾಗಿ ವರ್ಗಾವಣೆ ಮಾಡಲಾಗಿದೆ ಎಂಬುದು ತಿಳಿದು ಬಂದಿಲ್ಲ. ಆದರೆ, ನ್ಯೂಸ್​ 18 ಮೂಲಗಳ ಪ್ರಕಾರ ಹಜಿಲ್​ ಅವರಿಗೆ ಜೀವ ಬೆದರಿಕೆ ಇತ್ತು ಈ ಹಿನ್ನೆಲೆ ಈ ನಿರ್ಧಾರವನ್ನು ಸರ್ವೋಚ್ಛ ನ್ಯಾಯಾಲಯ ಮಾಡಿದೆ ಎನ್ನಲಾಗಿದೆ.

ಅಧಿಕಾರಿಯನ್ನು ಏಳು ದಿನಗಳೊಳಗೆ ವರ್ಗಾವಣೆ ಮಾಡುವಂತೆ ಸರ್ಕಾರಕ್ಕೆ ಕೋರ್ಟ್​ ತಿಳಿಸಿದೆ. ವಿಚಾರಣೆ ವೇಳೆ ಅಧಿಕಾರಿಯನ್ನು ಯಾವ ಕಾರಣಕ್ಕಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಅಟರ್ನಿ ಜನರಲ್​ ಕೆಕೆ ವೇಣುಗೋಪಾಲ್​, ಮುಖ್ಯ ನ್ಯಾಯಾಧೀಶರಾದ ರಂಜನ್​ ಗೋಗೊಯಿ ಅವರನ್ನು ಕೇಳಿದರು. ಆದರೆ, ಈ ಕುರಿತು ನ್ಯಾಯಾಲಯ ವಿವರಣೆ ನೀಡಲು ನಿರಾಕರಿಸಿತು.

ಅಸ್ಸಾಂ-ಮೇಘಾಲಯ ಕೇಡರ್​ನ 1995 ಬ್ಯಾಚ್​ನ ಹಜಿಲ ಅಸ್ಸಾಂನಲ್ಲಿ ವಿವಾದ ಮೂಡಿಸಿದ ಎನ್​ಆರ್​ಸಿ ಕುರಿತು ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆಗಸ್ಟ್​ 31ರಂದು ಕಡೆಯ ಎನ್​ಆರ್​ಸಿ ಲಿಸ್ಟ್​ ಅನ್ನು ಪ್ರಕಟಗೊಳಿಸಲಾಗಿತ್ತು.

ಮಧ್ಯಪ್ರದೇಶ ಮೂಲದ ಹಜಿಲ್​ ಎನ್​ಆರ್​ಸಿ ವಿಚಾರವಾಗಿ ಕೋಮುವಾದ ಮತ್ತು ಭಾಷಾ ರೇಖೆಯ ಸಮಸ್ಯೆಯಲ್ಲಿ ತಾವು ಸಂಕಷ್ಟಕ್ಕೆ ಒಳಗಾಗಿದ್ದು, ವರ್ಗಾವಣೆ ಮಾಡುವಂತೆ ಸುಪ್ರೀಂಕೋರ್ಟ್​ಗೆ ಮುಚ್ಚಿದ ಲಕೋಟೆಯಲ್ಲಿ ಮನವಿ ಸಲ್ಲಿಸಿದ್ದರು.

ಇದನ್ನು ಓದಿ: ಭಾರತ ಆವಿಷ್ಕಾರ ಸೂಚ್ಯಂಕ 2019: ಕರ್ನಾಟಕಕ್ಕೆ ಅಗ್ರಸ್ಥಾನ; ಬಂಡವಾಳ ಹೂಡಿಕೆಗೆ ಸೂಕ್ತ ರಾಜ್ಯ ಎಂದ ನೀತಿ ಆಯೋಗ

ಆಗಸ್ಟ್​ 31ರಂದು ಕಡೆಯ ಎನ್​ಆರ್​ಸಿ ಪಟ್ಟಿ ಪ್ರಕಟಿಸಿದರಲ್ಲಿ ವ್ಯತ್ಯಾಸ ಕಂಡು ಬಂದಿದೆ ಎಂಬ ಆಪಾದನೆ ಮೇಲೆ ಅವರ ಮೇಲೆ ಎರಡು ಬಾರಿ ದೂರು ದಾಖಲಾಗಿತ್ತು. ಜನರು ಸರಿಯಾದ ದಾಖಲೆಯನ್ನು ಹೊಂದಿದ್ದರು. ಹಜಿಲ ಉದ್ದೇಶಪೂರ್ವಕವಾಗಿ ಅವರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ಆರೋಪಿಸಲಾಗಿತ್ತು.
First published: October 18, 2019, 11:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading