ಬಹುಮತ ಸಾಬೀತು ಕೋರಿ ಸೇನಾ-ಕಾಂಗ್ರೆಸ್-ಎನ್​​ಸಿಪಿ ಸುಪ್ರೀಂಕೋರ್ಟ್​​​ನಲ್ಲಿ ಅರ್ಜಿ; ಇಂದು ವಿಚಾರಣೆ

ಸರ್ಕಾರ ರಚನೆಗೆ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಇದ್ದರೂ, ಬಹುಮತ ಇಲ್ಲದ ಪಕ್ಷಕ್ಕೆ ರಾಜ್ಯಪಾಲರು ಸರ್ಕಾರ ರಚಿಸಲು ಅವಕಾಶ ನೀಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

news18-kannada
Updated:November 24, 2019, 7:36 AM IST
ಬಹುಮತ ಸಾಬೀತು ಕೋರಿ ಸೇನಾ-ಕಾಂಗ್ರೆಸ್-ಎನ್​​ಸಿಪಿ ಸುಪ್ರೀಂಕೋರ್ಟ್​​​ನಲ್ಲಿ ಅರ್ಜಿ; ಇಂದು ವಿಚಾರಣೆ
ಸುಪ್ರೀಂ ಕೋರ್ಟ್​.
  • Share this:
ನವದೆಹಲಿ(ನ.24): ಶೀಘ್ರ ಬಹುಮತ ಸಾಬೀತಾಗಬೇಕೆಂದು ಶಿವಸೇನೆ, ಕಾಂಗ್ರೆಸ್​ ಮತ್ತು ಎನ್​ಸಿಪಿ ಸುಪ್ರೀಂ ಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದವು. ಮೂರು ಪಕ್ಷಗಳ  ಮನವಿಯನ್ನು ಸ್ವೀಕರಿಸಿರುವ ಸುಪ್ರೀಂ ಅರ್ಜಿ ವಿಚಾರಣೆ ನಡೆಸಲು ಒಪ್ಪಿದೆ. ಇಂದು ಬೆಳಗ್ಗೆ 11.30ಕ್ಕೆ ಸುಪ್ರೀಂ ಕೋರ್ಟ್​ ಎನ್​ಸಿಪಿ-ಶಿವಸೇನಾ-ಕಾಂಗ್ರೆಸ್​​ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನಡೆಸಲಿದೆ.

ಮಹಾರಾಷ್ಟ್ರದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಿದ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರಿ ಅವರ ನಿರ್ಧಾರ ನಿರಂಕುಶ ಮತ್ತು ದುರುದ್ದೇಶದಿಂದ ಕೂಡಿದ್ದು ಎಂದು ಆರೋಪಿಸಿ, ರಾಜ್ಯಪಾಲರ ನಿರ್ಧಾರ ಪ್ರಶ್ನಿಸಿ ಎನ್​ಸಿಪಿ-ಶಿವಸೇನಾ-ಕಾಂಗ್ರೆಸ್​​ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದವು. ಬಹುಮತ ಸಾಬೀತು ಪ್ರಕ್ರಿಯೆ ಚಿತ್ರೀಕರಣ ಆಗಬೇಕು ಎಂದು ಸುಪ್ರೀಂ ಕೋರ್ಟ್​​ಗೆ ಶಿವಸೇನೆ, ಕಾಂಗ್ರೆಸ್, ಎನ್​ಸಿಪಿ ಮನವಿ ಮಾಡಿವೆ ಎನ್ನಲಾಗಿದೆ.

24 ಗಂಟೆಯೊಳಗೆ ಬಹುಮತ ಸಾಬೀತುಪಡಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಿವಸೇನೆ

ಕಾಂಗ್ರೆಸ್​ ವಕ್ತಾರ ರಂದೀಪ್​ ಸುರ್ಜೇವಾಲಾ ಸುಪ್ರೀಂ ಕೋರ್ಟ್​​ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.  2018 ರಲ್ಲಿ ಸುಪ್ರೀಂ ಕೋರ್ಟ್ ಕರ್ನಾಟಕ ರಾಜಕಾರಣಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪಿನಂತೆಯೇ ಈಗಲೂ ಸಹ ನೀಡಬೇಕು ಎಂದು ಎನ್​ಸಿಪಿ-ಶಿವಸೇನಾ-ಕಾಂಗ್ರೆಸ್ ಮೂರು ಪಕ್ಷಗಳು​​ ಬಯಸುತ್ತಿವೆ ಎಂದರು.

ಮಹಾರಾಷ್ಟ್ರ ರಾಜ್ಯಪಾಲರು ದಿನಾಂಕ 23-11-2019ರ ಶನಿವಾರದಂದು ಬಿಜೆಪಿ ದೇವೇಂದ್ರ ಫಡ್ನವೀಸ್ ಅವರಿಗೆ ಸರ್ಕಾರ ರಚನೆಗೆ ಅವಕಾಶ ನೀಡಿರುವುದು ದುರುದ್ದೇಶಪೂರ್ವಕವಾಗಿದೆ. ಅವರ ಈ ನಿರ್ಧಾರ ಕಾನೂನು ಹಾಗೂ ಸಂವಿಧಾನಬಾಹಿರವಾಗಿದೆ. ಬಿಜೆಪಿಗೆ ಸರ್ಕಾರ ರಚನೆಗೆ ಬೇಕಾದ ಬಹುಮತಕ್ಕೆ 40 ಸ್ಥಾನಗಳ ಕೊರತೆ ಇದ್ದರೂ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮಹತ್ವಾಕಾಂಕ್ಷೆ, ದಕ್ಷತೆ, ಜನಪ್ರಿಯತೆ – ಕೌಟುಂಬಿಕ ರಾಜಕಾರಣಕ್ಕೆ ಹೊಸ ಆಯಾಮ ಕೊಟ್ಟ ಅಜಿತ್ ಪವಾರ್

ಈ ಹಿಂದೆ, ನವೆಂಬರ್ 10ರಂದು ಸರ್ಕಾರ ರಚಿಸುವಂತೆ ರಾಜ್ಯಪಾಲರು ಬಿಜೆಪಿಗೆ ಆಹ್ವಾನ ನೀಡಿತ್ತು. ಆಗ, ಬಿಜೆಪಿ ಬಹುಮತಕ್ಕೆ ಬೇಕಾದ ಸಂಖ್ಯೆ ಇಲ್ಲದ ಕಾರಣ, ಸರ್ಕಾರ ರಚನೆಯಿಂದ ಹಿಂದೆ ಸರಿದಿತ್ತು. ಸರ್ಕಾರ ರಚನೆಗೆ ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಇದ್ದರೂ, ಬಹುಮತ ಇಲ್ಲದ ಪಕ್ಷಕ್ಕೆ ರಾಜ್ಯಪಾಲರು ಸರ್ಕಾರ ರಚಿಸಲು ಅವಕಾಶ ನೀಡಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
First published:November 24, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ