HOME » NEWS » National-international » SC TO EXAMINE CONSTITUTIONAL VALIDITY OF LOVE JIHAD LAWS SNVS

ಲವ್ ಜಿಹಾದ್ ಕಾಯ್ದೆ ಅಸಂವಿಧಾನಿಕವಾ? ಸುಪ್ರೀಂನಿಂದ ಪರಿಶೀಲನೆ; 4 ವಾರದಲ್ಲಿ ವಿಚಾರಣೆ

ಮತಾಂತರ ಉದ್ದೇಶದಿಂದ ನಡೆಯುವ ಅಂತರ್ಧರ್ಮೀಯ ವಿವಾಹವನ್ನು ನಿಯಂತ್ರಿಸುವ ಲವ್ ಜಿಹಾದ್ ಕಾನೂನು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾದ ಅರ್ಜಿಗಳನ್ನ ಪರಿಗಣಿಸಿರುವ ಸುಪ್ರೀಂ ಕೋರ್ಟ್ ನಾಲ್ಕು ವಾರದಲ್ಲಿ ವಿಚಾರಣೆ ಆರಂಭಿಸಲಿದೆ.

news18
Updated:January 6, 2021, 4:11 PM IST
ಲವ್ ಜಿಹಾದ್ ಕಾಯ್ದೆ ಅಸಂವಿಧಾನಿಕವಾ? ಸುಪ್ರೀಂನಿಂದ ಪರಿಶೀಲನೆ; 4 ವಾರದಲ್ಲಿ ವಿಚಾರಣೆ
ಸರ್ವೋಚ್ಚ ನ್ಯಾಯಾಲಯ
  • News18
  • Last Updated: January 6, 2021, 4:11 PM IST
  • Share this:
ನವದೆಹಲಿ(ಜ. 06): ಬಹಳಷ್ಟು ವಿವಾದ ಮತ್ತು ಚರ್ಚೆಗೆ ಕಾರಣವಾಗಿರುವ, ಉತ್ತರ ಪ್ರದೇಶ ಉತ್ತರಾಖಂಡ್ ರಾಜ್ಯಗಳಲ್ಲಿ ಜಾರಿಗೆ ಬಂದಿರುವ ಲವ್ ಜಿಹಾದ್ ಕಾನೂನಿನ ಸಂವಿಧಾನಿಕ ಸಿಂಧುತ್ವದ ಬಗ್ಗೆ ಬಹಳಷ್ಟು ಅಪಸ್ವರಗಳು ಕೇಳಿಬಂದಿವೆ. ಮತಾಂತರಕ್ಕಾಗಿ ನಡೆಯುವ ಅಂತರ್ಧರ್ಮೀಯ ವಿವಾಹ ತಡೆಯಲು ರಚಿಸಲಾಗಿರುವ ಕಾಯ್ದೆಯನ್ನು ಸಂವಿಧಾನಿಕ ಕೋನದಲ್ಲಿ ಅಳೆಯಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳಲ್ಲಿ ಜಾರಿ ಮಾಡಲಾಗಿರುವ ಲವ್ ಜಿಹಾದ್ ಕಾನೂನುಗಳು ಸಂವಿಧಾನ ವಿರೋಧಿಯಾಗಿದ್ದು ಅದಕ್ಕೆ ತಡೆ ನಿಡಬೇಕೆಂದು ಕೋರಿ ವಿಶಾಲ್ ಠಕ್ರೆ ನೇತೃತ್ವದಲ್ಲಿ ಒಂದು ಅರ್ಜಿ ಹಾಗೂ ಸಿಟಿಜನ್ ಫಾರ್ ಜಸ್ಟಿಸ್ ಅಂಡ್ ಪೀಸ್ ಎಂಬ ಎನ್​ಜಿಒದಿಂದ ಮತ್ತೊಂದು ಅರ್ಜಿ ಸುಪ್ರೀಂ ಕೋರ್ಟ್​ನಲ್ಲಿ ದಾಖಲಾಗಿತ್ತು. ಅದರ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ಕಾಯ್ದೆಗೆ ಈಗಲೇ ತಡೆ ನೀಡಲು ನಿರಾಕರಿಸಿತು. ಆದರೆ, ಆ ಕಾನೂನುಗಳ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದೆ. ನಾಲ್ಕು ವಾರಗಳಲ್ಲಿ ಇದರ ವಿಚಾರಣೆ ಪ್ರಾರಂಭಿಸುವುದಾಗಿ ಕೋರ್ಟ್ ಹೇಳಿದೆ.

ಎನ್​ಜಿಒ ಪರವಾಗಿ ವಕಾಲತು ಮಾಡಿದ ಹಿರಿಯ ವಕೀಲ ಸಿ.ಯು. ಸಿಂಗ್, ಲವ್ ಜಿಹಾದ್ ಕಾಯ್ದೆಯಲ್ಲಿ ಭಯಾನಕ ಅಂಶಗಳನ್ನ ಸೇರಿಸಲಾಗಿದೆ ಎಂದು ಕೋರ್ಟ್​ನಲ್ಲಿ ವಾದಿಸಿದರು. “ಈ ಕಾಯ್ದೆಯಲ್ಲಿನ ಕೆಲ ಅಂಶಗಳು ದಮನಕಾರಿ ಮತ್ತು ಭಯಾನಕವಾಗಿವೆ. ಮದುವೆಗೆ ಸರ್ಕಾರದಿಂದ ಪೂರ್ವಾನುಮತಿ ಪಡೆಯುವ ಅಗತ್ಯತೆಯನ್ನು ಸೃಷ್ಟಿಸಲಾಗಿದೆ. ಇದು ನಿಜಕ್ಕೂ ವಿಚಿತ್ರವಾದುದು” ಎಂದು ಅವರು ವಿವರಿಸಿದರು.

ಇದನ್ನೂ ಓದಿ: ಫರ್ನಿಚರ್, ಬೆಡ್​ಶೀಟ್​, ಟಿವಿಗಾಗಿಯೇ 82ಲಕ್ಷ ಖರ್ಚು ಮಾಡಿದ್ದರು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬ ಮುಫ್ತಿ!

ಸಿಜೆಐ ನೇತೃತ್ವದ ಸುಪ್ರೀಂ ನ್ಯಾಯಪೀಠವು ಈ ವಿಚಾರದ ಬಗ್ಗೆ ನಾಲ್ಕು ವಾರದೊಳಗೆ ಪ್ರತಿಕ್ರಿಯೆ ನೀಡಬೇಕೆಂದು ತಾನು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯ ಸರ್ಕಾರಗಳಿಗೆ ನೋಟೀಸ್ ನೀಡುವುದಾಗಿ ತಿಳಿಸಿತು.

ಲವ್ ಜಿಹಾದ್ ಕಾನೂನಿನಲ್ಲಿನ ಕೆಲ ಅಂಶಗಳಿಗೆ ತಡೆ ನೀಡಬೇಕೆಂದು ದೂರುದಾರರು ಕೇಳಿಕೊಂಡಾಗ ನ್ಯಾಯಪೀಠವು ರಾಜ್ಯ ಸರ್ಕಾರದ ವಾದ ಆಲಿಸದೆ ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ತಡೆ ನೀಡಲು ನಿರಾಕರಿಸಿತು.

ಇದನ್ನೂ ಓದಿ: ಉತ್ತರ ಪ್ರದೇಶ; 50 ವರ್ಷದ ಮಹಿಳೆಯ ಸಾಮೂಹಿಕ ಅತ್ಯಾಚಾರ - ಕೊಲೆ, ಇಬ್ಬರು ಆರೋಪಿಗಳ ಬಂಧನ

ಲವ್ ಜಿಹಾದ್ ಆರೋಪ ಮಾಡುತ್ತಿರುವವರ ಪ್ರಕಾರ, ಮತಾಂತರ ಉದ್ದೇಶಕ್ಕಾಗಿ ಅಮಾಯಕ ಹೆಣ್ಣುಮಕ್ಕಳನ್ನ ಪ್ರೀತಿ ಪ್ರೇಮದ ಬಲೆಗೆ ಕೆಡವಿ ಮದುವೆ ಮಾಡಲಾಗುತ್ತಿದೆಯಂತೆ. ಲವ್ ಜಿಹಾದ್ ಕಾನೂನು ವಿರೋಧಿಗಳ ಆತಂಕ ಎಂದರೆ, ಈ ಕಾನೂನು ಮುಸ್ಲಿಮ್ ಸಮುದಾಯವನ್ನ ಗುರಿಯಾಗಿಸಿ ದುರ್ಬಳೆಯಾಗುತ್ತದೆ. ಹಾಗೂ ಮದುವೆಯಾಗುವ ಒಬ್ಬ ವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಹಾಕುತ್ತದೆ ಎಂದು.ಉತ್ತರ ಪ್ರದೇಶ ರಾಜ್ಯ ಮೊದಲು ತಂದ ಈ ಕಾನೂನನ್ನು ಬಿಜೆಪಿ ಆಡಳಿತದ ಬಹುತೇಕ ರಾಜ್ಯಗಳಲ್ಲೂ ಜಾರಿಗೆ ತರಲಾಗುತ್ತಿದೆ. ಕರ್ನಾಟಕದಲ್ಲೂ ಈ ಕಾಯ್ದೆ ಜಾರಿಗೆ ಬರುತ್ತಿದೆ.
Published by: Vijayasarthy SN
First published: January 6, 2021, 4:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories