ಸಿಬಿಐ, ಇಡಿ, ಎನ್​ಐಎ ಕಚೇರಿಯಲ್ಲಿ ಆಡಿಯೋ, ವಿಡಿಯೋ ದಾಖಲಾಗುವ ಸಿಸಿಟಿವಿ ಅಳವಡಿಸಿ; ಸುಪ್ರೀಂ ಕೋರ್ಟ್

ಸಿಸಿಟಿವಿಯಲ್ಲಿ ಕತ್ತಲಲ್ಲಿ ಸ್ಪಷ್ಟ ದೃಶ್ಯ ಶೇಖರಿಸುವಂತಹ ನೈಟ್​ವಿಷನ್​, ಆಡಿಯೋ ಸ್ಪಷ್ಟವಾಗಿ ಕೇಳುವಂತಹ ವ್ಯವಸ್ಥೆ ಜೊತೆ ವಿಡಿಯೋ ದಾಖಲಿಸಿಕೊಳ್ಳುವ ಸಿಸಿಟಿವಿಯನ್ನು ಖರೀದಿಸಬೇಕು. ಅಲ್ಲದೇ ಇವು ಗರಿಷ್ಠ ಅವಧಿಯ ಡೇಟಾವನ್ನು ಸಂಗ್ರಹಿಸಬೇಕು.

ಸುಪ್ರೀಂಕೋರ್ಟ್​.

ಸುಪ್ರೀಂಕೋರ್ಟ್​.

 • Share this:
  ನವದೆಹಲಿ (ಡಿ. 2): ಸಿಬಿಐ, ರಾಷ್ಟ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಸೇರಿದಂತೆ ದೇಶದ ಎಲ್ಲಾ ಪೊಲೀಸ್​ ಠಾಣೆಗಳಲ್ಲಿನ ವಿಚಾರಣಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶ ನೀಡಿದೆ. ಅಷ್ಟೇ ಅಲ್ಲದೇ ಕತ್ತಲಲ್ಲೂ ದೃಶ್ಯ ಸೆರೆಹಿಡಿಯುವ ನೈಟ್​ ವಿಷನ್​ ಹೊಂದಿರುವುದರ ಜೊತೆಗೆ ಆಡಿಯೋವನ್ನು ರೆಕಾರ್ಡ್​ ಮಾಡಿಕೊಳ್ಳುವಂತಹ ಸೌಲಭ್ಯವನ್ನು ಹೊಂದಿರ ಕ್ಯಾಮೆರಾ ಅಳವಡಿಸಬೇಕು. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ ಕೂಡ ಪೊಲೀಸ್​ ಠಾಣೆಯಲ್ಲಿ ಇದೇ ರೀತಿ ಸೌಲಭ್ಯವುಳ್ಳ ಸಿಸಿಟಿವಿ ಅಳವಡಿಸಬೇಕು ಎಂಬ ಮಹತ್ವದ ನಿರ್ದೇಶನ ನೀಡಿದೆ. ಅಲ್ಲದೇ ಈ ಕ್ಯಾಮೆರಾಗಳು ವಿಚಾರಣಾ ಕೊಠಡಿಗಳು, ಲಾಕ್​ಅಪ್​ ರೂಮ್​ನ ಪ್ರವೇಶ ಮತ್ತು ನಿರ್ಗಮನ ಎರಡನ್ನು ಸೆರೆ ಮಾಡುವಂತೆ ಅಳವಡಿಸಬೇಕು ಎಂದು ನ್ಯಾ. ಆರ್​ಎಫ್​ ನಾರಿಮನ್​ ಒಳಗೊಂಡ ಪೀಠ ಸೂಚಿಸಿದೆ.

  ಈ ಹಿಂದೆ ಪೊಲೀಸ್​ ಠಾಣೆಗಳಲ್ಲಿ ಮಾನವ ಹಕ್ಕು ಉಲ್ಲಂಘನೆಯನ್ನು ತಡೆಯುವ ಉದ್ದೇಶದಿಂದ ಸಿಸಿಟಿವಿಗಳನ್ನು ಅಳವಡಿಸುವಂತೆ ಸೂಚಿಸಿತ್ತು. ಈಗ ನಾರ್ಕೋಟಿಕ್ಸ್​ ಬ್ಯೂರೋ, ಕಂದಾಯ ಗುಪ್ತಾಚರ ಮತ್ತು ಗಂಭೀರ ವಂಚನೆಯಂತಹ ಪ್ರಕರಣಗಳನ್ನು ತನಿಖಾ ಸಂಸ್ಥೆಗಳು ತಮ್ಮ ಕಚೇರಿಯಲ್ಲಿಯೇ ನಡೆಸುತ್ತಿವೆ. ಆರೋಪಿಗಳ ವಿಚಾರಣೆ ನಡೆಸುವ ಸಂದರ್ಭದಲ್ಲಿ ಅಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯವಾಗಿರಬೇಕು ಎಂದು ತಿಳಿಸಿದೆ.

  ಇದನ್ನು ಓದಿ: ಈ ಬಾರಿ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್ಸನ್​ಗೆ ಆಹ್ವಾನ?

  ಸಿಸಿಟಿವಿಯಲ್ಲಿ ಕತ್ತಲಲ್ಲಿ ಸ್ಪಷ್ಟ ದೃಶ್ಯ ಶೇಖರಿಸುವಂತಹ ನೈಟ್​ವಿಷನ್​, ಆಡಿಯೋ ಸ್ಪಷ್ಟವಾಗಿ ಕೇಳುವಂತಹ ವ್ಯವಸ್ಥೆ ಜೊತೆ ವಿಡಿಯೋ ದಾಖಲಿಸಿಕೊಳ್ಳುವ ಸಿಸಿಟಿವಿಯನ್ನು ಖರೀದಿಸಬೇಕು. ಅಲ್ಲದೇ ಇವು ಗರಿಷ್ಠ ಅವಧಿಯ ಡೇಟಾವನ್ನು ಸಂಗ್ರಹಿಸಬೇಕು. ಕಡೆ ಪಕ್ಷ ಇಂದು ವರ್ಷದ ಅವಧಿಯ ಡೇಟಾ ಇದರಲ್ಲಿ ದಾಖಲಾಗುವ ಸಾಮರ್ಥ್ಯ ಹೊಂದಿರಬೇಕು ಎಂದಿದೆ.

  ಇನ್ನು ಆದೇಶವನ್ನು ಆರುವಾರಗಳಲ್ಲಿ ಕಾರ್ಯಗತಗೊಳಿಸಲು ಕ್ರಿಯಾ ಯೋಜನೆ ಸಲ್ಲಿಸುವಂತೆ ರಾಜ್ಯಗಳಿಗೆ ಸುಪ್ರೀಂ ಕೋರ್ಟ್​ ಸೂಚಿಸಿದೆ. ಪಂಜಾಬ್​​ ಕಸ್ಟಡಿಯಲ್ಲಿ ಚಿತ್ರಹಿಂಸೆ ಸಂಬಂಧಿಸಿದ 2018ರ ಪ್ರಕರಣ ಗಮನದಲ್ಲಿಸಿ ಸುಪ್ರೀಂ ಕೋರ್ಟ್​ ಈ ಮಹತ್ವದ ಆದೇಶ ನೀಡಿದೆ.
  Published by:Seema R
  First published: