ಸಿಜೆಐ ವಿರುದ್ಧ ಆರೋಪ ಪಿತೂರಿ ಎಂದು ವಕೀಲರು ಸಾಕ್ಷಿ ಸಲ್ಲಿಸಿದ ಬಳಿಕ ಸಿಬಿಐ, ಐಟಿ, ದೆಹಲಿ ಪೊಲೀಸ್​ ಮುಖ್ಯಸ್ಥರಿಗೆ ಸಮನ್ಸ್​ ನೀಡಿದ ಸುಪ್ರೀಂಕೋರ್ಟ್​

ಇದು ವಿಚಾರಣೆ ಅಲ್ಲ. ಸಿಬಿಐ, ಐಬಿ  ಮತ್ತು ದೆಹಲಿ ಪೊಲೀಸ್​ ಮುಖ್ಯಸ್ಥರು ನಾವು ಸಭೆ ನಡೆಸಬೇಕಿದೆ. ಹೀಗಾಗಿ ಇಂದು ನ್ಯಾಯಮೂರ್ತಿಗಳ ಚೆಂಬರ್​ನಲ್ಲಿ ಮಧ್ಯಾಹ್ನ 12.30ಕ್ಕೆ ಬಂದು ಭೇಟಿಯಾಗಬೇಕು. ಮತ್ತು ಕೋರ್ಟ್​ ವಿಚಾರಣೆ ಮಧ್ಯಾಹ್ನ 3 ಗಂಟೆಯಿಂದ ಮತ್ತೆ ಆರಂಭವಾಗಲಿದೆ ಎಂದು ಕೋರ್ಟ್​ ಹೇಳಿತು.

HR Ramesh | news18
Updated:April 24, 2019, 12:43 PM IST
ಸಿಜೆಐ ವಿರುದ್ಧ ಆರೋಪ ಪಿತೂರಿ ಎಂದು ವಕೀಲರು ಸಾಕ್ಷಿ ಸಲ್ಲಿಸಿದ ಬಳಿಕ ಸಿಬಿಐ, ಐಟಿ, ದೆಹಲಿ ಪೊಲೀಸ್​ ಮುಖ್ಯಸ್ಥರಿಗೆ ಸಮನ್ಸ್​ ನೀಡಿದ ಸುಪ್ರೀಂಕೋರ್ಟ್​
ನ್ಯಾ.ರಂಜನ್ ಗೋಗೊಯ್
  • News18
  • Last Updated: April 24, 2019, 12:43 PM IST
  • Share this:
ನವದೆಹಲಿ: ಸುಪ್ರೀಂಕೋರ್ಟ್​ ಮುಖ್ಯನ್ಯಾಯಮೂರ್ತಿ ರಂಜನ್​ ಗೋಗೊಯ್ ಅವರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಪಿತೂರಿ ಎಂದು ಸಿಜೆಐ ಪರ ವಕೀಲ ಉತ್ಸವ್​ ಬೈನ್ಸ್​ ಅವರು ಇಂದು ಮುಚ್ಚಿದ ಲಕೋಟೆಯಲ್ಲಿ ತ್ರಿಸದಸ್ಯ ಪೀಠದ ಮುಂದೆ ಸಾಕ್ಷ್ಯವನ್ನು ಸಲ್ಲಿಕೆ ಮಾಡಿದ್ದರು. ಈ ನ್ಯಾ.ಅರುಣ್ ಮಿಶ್ರಾ, ಆರ್.ಎಫ್​.ನಾರಿಮನ್ ಮತ್ತು ದೀಪಕ್​ ಗುಪ್ತಾ ಅವರಿದ್ದ ನ್ಯಾಯಪೀಠ ಇಂದು ಸಂಬಂಧ ಸಿಬಿಐ ಮುಖ್ಯಸ್ಥ, ಇಂಟಲಿಜೆನ್ಸ್​ ಬ್ಯುರೋ ಹಾಗೂ ದೆಹಲಿ ಪೊಲೀಸ್​ ಮುಖ್ಯಸ್ಥರಿಗೆ ​ ಸಮನ್ಸ್​ ನೀಡಿದೆ.

ಇದನ್ನು ಓದಿ: ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ; ವಿಚಾರಣೆಗೆ ತ್ರಿಸದಸ್ಯ ಸಮಿತಿ ರಚನೆ

ಇದು ವಿಚಾರಣೆ ಅಲ್ಲ. ಸಿಬಿಐ, ಐಬಿ  ಮತ್ತು ದೆಹಲಿ ಪೊಲೀಸ್​ ಮುಖ್ಯಸ್ಥರು ನಾವು ಸಭೆ ನಡೆಸಬೇಕಿದೆ. ಹೀಗಾಗಿ ಇಂದು ನ್ಯಾಯಮೂರ್ತಿಗಳ ಚೆಂಬರ್​ನಲ್ಲಿ ಮಧ್ಯಾಹ್ನ 12.30ಕ್ಕೆ ಬಂದು ಭೇಟಿಯಾಗಬೇಕು. ಮತ್ತು ಕೋರ್ಟ್​ ವಿಚಾರಣೆ ಮಧ್ಯಾಹ್ನ 3 ಗಂಟೆಯಿಂದ ಮತ್ತೆ ಆರಂಭವಾಗಲಿದೆ ಎಂದು ಕೋರ್ಟ್​ ಹೇಳಿತು.

First published: April 24, 2019, 12:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading