HOME » NEWS » National-international » SC STAYS ALLAHABAD HC ORDER FOR IMPOSING LOCKDOWN UTTARPRADESH SESR

ಉತ್ತರ ಪ್ರದೇಶದ ಐದು ನಗರಗಳಲ್ಲಿ ಲಾಕ್​ಡೌನ್​ ಇಲ್ಲ; ಅಲಹಾಬಾದ್​ ಹೈಕೋರ್ಟ್​ ಆದೇಶಕ್ಕೆ ಸುಪ್ರೀಂ ತಡೆ

ರಾಜ್ಯದಲ್ಲಿ ಕೊರೋನಾ ವೈರಸ್​ ಸೋಂಕು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ವಾರದೊಳಗೆ ವರದಿ ಮಾಡುವಂತೆ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ತಿಳಿಸಿದೆ.

news18-kannada
Updated:April 20, 2021, 2:39 PM IST
ಉತ್ತರ ಪ್ರದೇಶದ ಐದು ನಗರಗಳಲ್ಲಿ ಲಾಕ್​ಡೌನ್​ ಇಲ್ಲ; ಅಲಹಾಬಾದ್​ ಹೈಕೋರ್ಟ್​ ಆದೇಶಕ್ಕೆ ಸುಪ್ರೀಂ ತಡೆ
ಸುಪ್ರೀಂಕೋರ್ಟ್​.
  • Share this:
ನವದೆಹಲಿ (ಏ. 20):  ಉತ್ತರ ಪ್ರದೇಶದ ಕೊರೋನಾ ಸೋಂಕು ಹೆಚ್ಚಿರುವ ಹಿನ್ನಲೆ ರಾಜ್ಯದ ಪ್ರಮುಖ ಐದು ನಗರಗಳನ್ನು ಲಾಕ್​ಡೌನ್​ ಮಾಡಿ ಅಲಹಾಬಾದ್​ ಹೈ ಕೋರ್ಟ್​ ಆದೇಶ ನೀಡಿತ್ತು. ನಿನ್ನೆ ರಾತ್ರಿಯಿಂದ ಏಪ್ರಿಲ್​ 26ರವರೆಗೆ ಪ್ರಯಾಗರಾಜ್​, ಲಕ್ನೋ, ವಾರಾಣಾಸಿ, ಕಾನ್ಫೂರ್​ ಮತ್ತು ಗೋರಾಕ್​ಪುರ್​ಗಳಲ್ಲಿ ಹೈ ಕೋರ್ಟ್​ ಪೀಠ ಲಾಕ್​ಡೌನ್​ ಜಾರಿ ಮಾಡಿತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದೆ. ಈ ಅರ್ಜಿಯನ್ನು ಕೈಗೆತ್ತಿಕೊಂಡ ಪೀಠ ಅಲಹಾಬಾದ್​ ನ್ಯಾಯಾಲಯದ ತೀರ್ಪಿಗೆ ತಡೆ ನೀಡಿದೆ. ಅಲ್ಲದೇ, ರಾಜ್ಯದಲ್ಲಿ ಕೊರೋನಾ ವೈರಸ್​ ಸೋಂಕು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ವಾರದೊಳಗೆ ವರದಿ ಮಾಡುವಂತೆ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ತಿಳಿಸಿದೆ.

ಮುಖ್ಯ ನ್ಯಾಯಾಮೂರ್ತಿ ಎಸ್​ಎಸ್​ ಬೋಬ್ಡೆ ನೇತೃತ್ವದ ಪೀಠ ಈ ಆದೇಶಕ್ಕೆ ತಡೆ ನೀಡಿದೆ. ಐದು ನಗರಗಳನ್ನು ಲಾಕ್​ಡಾನ್ ಮಾಡುವ ನ್ಯಾಯಾಂಗ ಆದೇಶವೂ ಸರಿಯಾದ ಕ್ರಮವಲ್ಲ. ಇದರಿಂದ ಆಡಳಿತಾತ್ಮಕ ತೊಂದರೆ ಎದುರಾಗುತ್ತದೆ. ನ್ಯಾಯಾಲಯದ ಕಾಳಜಿ ಅರ್ಥವಾಗುತ್ತದೆ. ಸೋಂಕು ನಿಯಂತ್ರಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಹೈ ಕೋರ್ಟ್​ ಸೂಚಿಸಿದ ಕೆಲವು ಕ್ರಮಗಳನ್ನು ಕೂಡ ಈಗಾಗಲೇ ಸರ್ಕಾರ ಜಾರಿ ಮಾಡಿದೆ ಎಂದು ಉತ್ತರ ಪ್ರದೇಶ ಸರ್ಕಾರ ಪೀಠದ ಮುಂದೆ ವಾದ ಮಂಡಿಸಿದೆ.

ಸೋಂಕು ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಲಹಾಬಾದ್​ ಹೈ ಕೋರ್ಟ್​ ಪ್ರಯಾಗ್​ ರಾಜ್​, ಲಕ್ನೋ, ವಾರಣಾಸಿ, ಕಾನ್ಫುರ ಮತ್ತು ಗೋರಖ್​ಪುರದಲ್ಲಿ ಲಾಕ್​ಡೌನ್​ ಮಾಡುವಂತೆ ಯೋಗಿ ಆದಿತ್ಯನಾಥ್​ ಸರ್ಕಾರಕ್ಕೆ ಸೂಚನೆ ನೀಡಿತ್ತು. ಏ. 26ರವರೆಗೆ ಎಲ್ಲಾ ಶಾಪಿಂಗ್​ ಮಾಲ್​, ಕಾಂಪ್ಲೆಕ್ಸ್​, ರೆಸ್ಟೋರೆಂಟ್​, ಹೋಟೆಲ್​, ತರಕಾರಿ ಅಂಗಡಿ ಮತ್ತು ಕಮರ್ಷಿಯಲ್​ ಶಾಪ್​ಗಳನ್ನು ಮುಚ್ಚುವಂತೆ ತಿಳಿಸಿದೆ. ಈ ಸಮಯದಲ್ಲಿ ಸಾರ್ವಜನಿಕ ಓಡಾಟವನ್ನು ಪರೀಕ್ಷಿಸದಿರಲು ಜನಪ್ರಿಯ ಸರ್ಕಾರಕ್ಕೆ ರಾಜಕೀಯ ಒತ್ತಡಗಳಿದ್ದರೆ ನಾವು ಮೂಕ ಪ್ರೇಕ್ಷಕರಾಗಿ ಉಳಿಯಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ನಾವು ಕೂಡ ಸುಮ್ಮನೆ ಕೂರಲು ಸಾಧ್ಯವಾಗುವುದಿಲ್ಲ. ಸಾರ್ವಜನಿಕರ ಆರೋಗ್ಯ ನಮ್ಮ ಮೊದಲ ಆದ್ಯತೆ. ಕೆಲವರು ನಿರ್ಲಕ್ಷ್ಯದಿಂದಾಗಿ ಸೋಂಕು ಹರಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರನ್ನು ರಕ್ಷಿಸುವುದು ಸಾಂವಿಧಾನಿಕ ಕರ್ತವ್ಯದಿಂದ ನಾವು ದೂರ ಉಳಿಯಲು ಸಾಧ್ಯವಿಲ್ಲ ಎಂದು ಕೋರ್ಟ್​ ತಿಳಿಸಿತ್ತು.

ಇದನ್ನು ಓದಿ: ಉತ್ತರ ಪ್ರದೇಶದ ಐದು ನಗರಗಳನ್ನು ಲಾಕ್​ಡೌನ್​ ಮಾಡಿ ಅಲಹಾಬಾದ್​ ಹೈಕೋರ್ಟ್​​​ ಆದೇಶ

ಇದೇ ವೇಳೆ ವಿವಿಐಪಿ ಶಿಫಾರಸಿನ ಚಿಕಿತ್ಸೆ ಕುರಿತು ಹೈಕೋರ್ಟ್​ ಚಾಟಿ ಬೀಸಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ವಿಐಟಿ ಶಿಫಾರಸಿನ ಅನ್ವಯ ರೋಗಿಗಳನ್ನು ಆಡ್ಮಿಟ್​ ಮಾಡಲಾಗುತ್ತಿದೆ. ಜೊತೆಗೆ ಆಂಟಿ ವೈರಸ್​ ರೆಮಿಡಿಸಿವರ್​ ಔಷಧಿ ನೀಡಲು ಕೂಡ ಪ್ರಮುಖ ವ್ಯಕ್ತಿಗಳ ಶಿಫಾರಸು ಅಗತ್ಯ ವಾಗಿದೆ ಎಂಬುದು ತಿಳಿದುಬಂದಿದೆ. ವಿವಿಐಪಿಗಳು 12 ಗಂಟೆಯಲ್ಲಿ ಆರ್​ಟಿ ಪಿಸಿಆರ್​ ಪರೀಕ್ಷಾ ವರದಿ ಪಡೆದರೆ, ಸಾಮಾನ್ಯ ಜನರಿಗೆ ಇದು ತಲುಪಲು ಎರಡ್ಮೂರು ದಿನಗಳವರೆಗೆ ಕಾಯಬೇಕಿದೆ. ಇದರಿಂದ ಸೋಂಕು ಕುಟುಂಬಸ್ಥರಿಗೂ ಹರಡುತ್ತಿದೆ ಎಂದು ಚಾಟಿ ಬೀಸಿತು.

ಉತ್ತರ ಪ್ರದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ.
Published by: Seema R
First published: April 20, 2021, 2:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories