ಅಯೋಧ್ಯೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಮೊದಲ ಮರುಪರಿಶೀಲನಾ ಅರ್ಜಿ ಸಲ್ಲಿಕೆ

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯ ಅರ್ಜಿದಾರ ಸಂಘಟನೆಯಾದ ಸುನ್ನಿ ವಕ್ಫ್ ಮಂಡಳಿ, ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಈ ತೀರ್ಪನ್ನು ಪ್ರಶ್ನೆ ಮಾಡಿ ನಾವು ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿತ್ತು. ಆದರೆ, ಜಮೈತ್ ಉಲ್ಮಾ ಐ ಹಿಂದ್ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾತ್ರ ಸುಪ್ರೀಂಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದವು.

news18-kannada
Updated:December 2, 2019, 4:30 PM IST
ಅಯೋಧ್ಯೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಮೊದಲ ಮರುಪರಿಶೀಲನಾ ಅರ್ಜಿ ಸಲ್ಲಿಕೆ
ರೇಖಾಚಿತ್ರ-ಮೀರ್ ಸುಹೈಲ್
  • Share this:
ನವದೆಹಲಿ: ಅಯೋಧ್ಯೆ ಬಾಬರಿ-ರಾಮಭೂಮಿ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಮೊದಲ ಮರುಪರಿಶೀಲನಾ ಅರ್ಜಿ ಅಪೆಕ್ಸ್​ ಕೋರ್ಟ್​ನಲ್ಲಿ ಸಲ್ಲಿಕೆಯಾಗಿದೆ.

ಅಯೋಧ್ಯೆ ಜಾಗ ವಿವಾದದ ಮೂಲ ದಾವೆದಾರರಾದ ಎಂ.ಸಿದ್ಧಿಖ್ ಅವರ ಕಾನೂನು ಉತ್ತರಾಧಿಕಾರಿಯಾಗಿರುವ ಮೌಲಾನಾ ಸೈಯದ್ ಅಶಾದ್ ಅವರು ಈ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣ ಸಂಬಂಧ ನವೆಂಬರ್ 9ರಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ಹಲವು ದೋಷಗಳಿದ್ದು, ಈ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಧ್ವಂಸಗೊಳಿಸಲಾದ ಮಸೀದಿ ಕಟ್ಟಿಕೊಳ್ಳಲು ಬೇರೆಡೆ ಜಾಗ ನೀಡುವಂತೆ ಗೌರವಾನ್ವಿತ ನ್ಯಾಯಾಲಯ ನೀಡಿದೆ. ಘನ ನ್ಯಾಯಾಲಯವು ಹಿಂದೂ ಪರವಾಗಿ ಆದೇಶ ನೀಡುವ ಮೂಲಕ 1934, 1949 ಮತ್ತು 1992 ರಲ್ಲಿ ಮಾಡಿದ ತಪ್ಪುಗಳನ್ನೇ ಮರುಕಳಿಸುವಂತೆ ಮಾಡಿದೆ. ಇದು ಕಾನೂನುಬಾಹಿರ ಎಂದು ಈಗಾಗಲೇ ತೀರ್ಪು ನೀಡಲಾಗಿದೆ ಎಂದು 217 ಪುಟಗಳ ಅರ್ಜಿಯನ್ನು ವಕೀಲ ಎಜಾಜ್​ ಮಕ್ಬೂಲ್​ ಮೂಲಕ ದಾಖಲಿಸಲಾಗಿದೆ.

ಇದನ್ನು ಓದಿ: Ayodhya Verdict: ಅಯೋಧ್ಯೆಯಲ್ಲಿ ರಾಮಮಂದಿರ; ಹಿಂದೂಗಳಿಗೆ ನಿರ್ಬಂಧ ವಿಧಿಸಿ ಜಾಗ, ಮುಸ್ಲಿಮರಿಗೆ ಬದಲಿ ಜಾಗ

ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯ ಅರ್ಜಿದಾರ ಸಂಘಟನೆಯಾದ ಸುನ್ನಿ ವಕ್ಫ್ ಮಂಡಳಿ, ಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಈ ತೀರ್ಪನ್ನು ಪ್ರಶ್ನೆ ಮಾಡಿ ನಾವು ಮರುಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿತ್ತು. ಆದರೆ, ಜಮೈತ್ ಉಲ್ಮಾ ಐ ಹಿಂದ್ ಮತ್ತು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಾತ್ರ ಸುಪ್ರೀಂಕೋರ್ಟ್ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದವು. ಈ ಸಂಘಟನೆಗಳು ಪ್ರತ್ಯೇಕ ಅರ್ಜಿದಾರರನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರತಿನಿಧಿಸಿದ್ದವು.
First published: December 2, 2019, 4:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading