West Bengal Election: ಪ.ಬಂಗಾಳದಲ್ಲಿ 8 ಹಂತದ ಮತದಾನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ

ಎಂಟು ಹಂತಗಳಲ್ಲಿ ಚುನಾವಣೆ ನಡೆಸುವ ಚುನಾವಣಾ ಆಯೋಗದ ಕ್ರಮವನ್ನು ಬಂಗಾಳದ ಹಲವಾರು ರಾಜಕೀಯ ಪಕ್ಷಗಳು ವಿರೋಧಿಸಿವೆ. ಅದರಲ್ಲೂ ವಿಶೇಷವಾಗಿ ಎಡ ಪಕ್ಷಗಳು ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿವೆ ಮತ್ತು ಈ ವಿಚಾರದಲ್ಲಿ "ವಿಶ್ವಾಸಾರ್ಹ ಸಮರ್ಥನೆ ಇಲ್ಲ" ಎಂದು ಆರೋಪಿಸಿವೆ.

ಸುಪ್ರೀಂಕೋರ್ಟ್​.

ಸುಪ್ರೀಂಕೋರ್ಟ್​.

  • Share this:
    ನವ ದೆಹಲಿ (ಮಾರ್ಚ್​ 09); ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಪಶ್ಚಿಮ ಬಂಗಾಳದ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಭಾರತೀಯ ಚುನಾವಣೆ ಆಯೋಗ ಈಗಾಗಲೇ ಪಶ್ಚಿಮ ಬಂಗಾಳದ ಚುನಾವಣೆಗೆ ದಿನಾಂಕವನ್ನು ನಿಗದಿ ಮಾಡಿದೆ. ಆದರೆ, 8 ಹಂತಗಳಲ್ಲಿ ಚುನಾವಣೆ ನಡೆಸಲು ಮುಂದಾಗಿದೆ. ಆದರೆ, ವಕೀಲರಾದ ಎಂ.ಎಲ್​. ಶರ್ಮಾ ಎಂಬವರು ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯನ್ನು 8 ಹಂತಗಳಲ್ಲಿ ನಡೆಸಬೇಕು ಎಂಬ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ಮಾರ್ಚ್​ 01 ರಂದು ಅರ್ಜಿ ಸಲ್ಲಿಸಿದ್ದರು. ಅಲ್ಲದೆ, ರಾಜ್ಯದಲ್ಲಿ ಸುದೀರ್ಘ ಎಂಟು ಹಂತದ ಚುನಾವಣೆಗಳನ್ನು ನಡೆಸದಂತೆ ತಡೆಯಲು ಸುಪ್ರೀಂ ಕೋರ್ಟ್ ಮತದಾನ ಸಮಿತಿಗೆ ‌ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ಈ ಸಂಬಂಧ ಇಂದು ವಿಚಾರಣೆ ನಡೆಸಿರುವ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿದೆ.

    ವಕೀಲ ಎಂ.ಎಲ್​. ಶರ್ಮಾ ಸುಪ್ರಿಂಗೆ ಸಲ್ಲಿಸಿದ್ದ ಅರ್ಜಿಯಲ್ಲಿ, "ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಎಂಟು ಹಂತಗಳಲ್ಲಿ ನಡೆಸುವುದು ಸಂವಿಧಾನದ 14 ನೇ ಪರಿಚ್ಚೇಧದ ಅಡಿಯಲ್ಲಿ ಸಮಾನತೆಯ ಹಕ್ಕಿನ ಉಲ್ಲಂಘನೆಯಾಗಿದೆ. ಅದೇ ಸಮಯದಲ್ಲಿ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ವಿಧಾನಸಭಾ ಚುನಾವಣೆಗಳು ಒಂದೇ ಹಂತದಲ್ಲಿ ನಡೆಯಲಿವೆ. ಕೇರಳ, ತಮಿಳುನಾಡಿನಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ.

    ಆದ್ದರಿಂದ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಎಂಟು ಹಂತಗಳಲ್ಲಿ ನಡೆಸುವುದರಿಂದ ಪಶ್ಚಿಮ ಬಂಗಾಳ ಅಸಮಾನ ಚಿಕಿತ್ಸೆಯನ್ನು ಅನುಭವಿಸಲಿದೆ. ಇದಲ್ಲದೆ, ಪಶ್ಚಿಮ ಬಂಗಾಳವು ಯಾವುದೇ ಭಯೋತ್ಪಾದಕ ದಾಳಿಯನ್ನು ಎದುರಿಸುತ್ತಿಲ್ಲ ಅಥವಾ ವಿವಾದಿತ ಯುದ್ಧ ವಲಯದ ಅಡಿಯಲ್ಲಿಲ್ಲ. ಹೀಗಾಗಿ 8 ಹಂತದ ಮತದಾನ ಪ್ರಕ್ರಿಯೆಗೆ ತಡೆ ನೀಡಬೇಕು" ಎಂದು ಮನವಿಯಲ್ಲಿ ಒತ್ತಾಯಿಸಲಾಗಿತ್ತು.

    ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರದ್ ಅರವಿಂದ್ ಬೊಬ್ಡೆ, ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಇಂದು ಈ ಅರ್ಜಿಯನ್ನು ವಜಾಗೊಳಿಸಿದೆ.

    ಇದನ್ನೂ ಓದಿ: Kolkata Fire Accident: ಕೊಲ್ಕತ್ತಾದಲ್ಲಿ ಭಾರೀ ಬೆಂಕಿ ದುರಂತ; ಪೊಲೀಸ್ ಅಧಿಕಾರಿ, ರೈಲ್ವೆ ಅಧಿಕಾರಿ ಸೇರಿ 9 ಜನ ಸಾವು

    ಎಂಟು ಹಂತಗಳಲ್ಲಿ ಚುನಾವಣೆ ನಡೆಸುವ ಚುನಾವಣಾ ಆಯೋಗದ ಕ್ರಮವನ್ನು ಬಂಗಾಳದ ಹಲವಾರು ರಾಜಕೀಯ ಪಕ್ಷಗಳು ವಿರೋಧಿಸಿವೆ. ಅದರಲ್ಲೂ ವಿಶೇಷವಾಗಿ ಎಡ ಪಕ್ಷಗಳು ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿವೆ ಮತ್ತು ಈ ವಿಚಾರದಲ್ಲಿ "ವಿಶ್ವಾಸಾರ್ಹ ಸಮರ್ಥನೆ ಇಲ್ಲ" ಎಂದು ಆರೋಪಿಸಿವೆ.

    ಮಾರ್ಚ್ 27 ರಂದು ಐದು ವಿಧಾನಸಭಾ ಚುನಾವಣೆಗಳ ಮತದಾನ ಪ್ರಾರಂಭವಾ ಗಲಿದ್ದು, ಪಶ್ಚಿಮ ಬಂಗಾಳವು ಗರಿಷ್ಠ ಎಂಟು ಹಂತಗಳನ್ನು ಏಪ್ರಿಲ್ 29 ರವರೆಗೆ ಮುಂದುವರಿಸಲಿದೆ. ನಾಲ್ಕು ರಾಜ್ಯಗಳಿಗೆ ಮತ್ತು ಒಂದು ಕೇಂದ್ರ ಪ್ರದೇಶಕ್ಕೆ ಮತ ಎಣಿಕೆ ಮೇ 2 ರಂದು ನಡೆಯಲಿದೆ.
    Published by:MAshok Kumar
    First published: