ಲಾಲೂ ಪ್ರಸಾದ್ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ; ಬಿಹಾರ ಮಾಜಿ ಸಿಎಂಗೆ ಮತ್ತೆ ಹಿನ್ನಡೆ!

ಇನ್ನು ವೈದ್ಯಕೀಯ ನೆಪವೊಡ್ಡಿ ಲಾಲೂ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿದ್ದಾರೆ. ಹಾಗಾಗಿ ಆರೋಪಿಗೆ ಜಾಮೀನು ನೀಡಬೇಡಿ ಎಂದು ಸುಪ್ರೀಂಗೆ ಆಕ್ಷೇಪಣೆ ಸಲ್ಲಿಸಿತ್ತು.

Ganesh Nachikethu | news18
Updated:April 10, 2019, 12:33 PM IST
ಲಾಲೂ ಪ್ರಸಾದ್ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ; ಬಿಹಾರ ಮಾಜಿ ಸಿಎಂಗೆ ಮತ್ತೆ ಹಿನ್ನಡೆ!
ಲಾಲೂ ಪ್ರಸಾದ್​ ಯಾದವ್​​
Ganesh Nachikethu | news18
Updated: April 10, 2019, 12:33 PM IST
ನವದೆಹಲಿ(ಏ.10): ಬಿಹಾರ ಮಾಜಿ ಸಿಎಂ ಲಾಲೂ ಪ್ರಸಾದ್​ ಯಾದವ್​​ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್​​ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಆರ್​​ಜೆಡಿ ಮುಖ್ಯಸ್ಥನಿಗೆ ಜಾಮೀನು ನೀಡಲು ನಿರಾಕರಿಸಿದೆ. ಬಹುಕೋಟಿ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಬೇಡಿ ಎಂದು ಸಿಬಿಐ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಆಧಾರದ ಮೇಲೆ ಸುಪ್ರೀಂಕೋರ್ಟ್​​ ಜಾಮೀನು ನಿರಾಕರಿಸಿ, ಅರ್ಜಾ ವಜಾಗೊಳಿಸಿದೆ.

ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​​ ಯಾದವ್​​​, ಸುಪ್ರೀಂಕೋರ್ಟ್​​ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಬಳಿಕ ಈ ಅರ್ಜಿ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​​ಗೆ ಆಕ್ಷೇಪಣೆ ಸಲ್ಲಿಸಿದ ಸಿಬಿಐ, ಲಾಲೂ ಪ್ರಸಾದ್​​ಗೆ ಜಾಮೀನು ನೀಡಬೇಡಿ. ಒಂದು ವೇಳೆ ನೀಡಿದ್ದಲ್ಲಿ ಲೋಕಸಭಾ ಚುನಾವಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ಧಾರೆ. ಚುನಾವಣೆ ಪ್ರಚಾರಗಳಲ್ಲಿ ಭಾಗಿಯಾಗಲು ಅನಾರೋಗ್ಯ ನೆಪವೊಡ್ಡಿ ಜಾಮೀನು ಕೇಳುತ್ತಿದ್ದಾರೆ ಎಂದು ಹೇಳಿದೆ.

ಇನ್ನು ವೈದ್ಯಕೀಯ ನೆಪವೊಡ್ಡಿ ಲಾಲೂ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯಲು ಪ್ರಯತ್ನಿಸಿದ್ದಾರೆ. ಹಾಗಾಗಿ ಆರೋಪಿಗೆ ಜಾಮೀನು ನೀಡಬೇಡಿ ಎಂದು ಸುಪ್ರೀಂಗೆ ಆಕ್ಷೇಪಣೆ ಸಲ್ಲಿಸಿತ್ತು.

ಇದನ್ನೂ ಓದಿ: ‘ಕಾಂಗ್ರೆಸ್-​ಬಿಎಸ್​​ಪಿಗೆ ಮುಸ್ಲಿಂ ಮೇಲೆ ನಂಬಿಕೆ, ಬಿಜೆಪಿಗೆ ಹಿಂದುಗಳ ಮೇಲೆ ವಿಶ್ವಾಸ’; ಸಿಎಂ ಯೋಗಿ ಆದಿತ್ಯನಾಥ್​​

ಈ ಹಿಂದೆಯೂ ಜಾರ್ಖಂಡ್ ಹೈಕೋರ್ಟ್ ಲಾಲೂ ಪ್ರಸಾದ್​​ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಏಪ್ರಿಲ್ 6 ರಂದು ಪ್ರಕಟಣೆ ಹೊರಡಿಸಿದ್ದ ಸುಪ್ರೀಂ, ಏಪ್ರಿಲ್. 10(ಇಂದು) ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿತ್ತು. ಜತೆಗೆ ಏಪ್ರಿಲ್ 09ರ ಒಳಗಾಗಿ ಉತ್ತರ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶನ ನೀಡಿತ್ತು.

ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕಾಂಗ್ರೆಸ್​​ಗೆ ಭೀಮಸೇನೆ ಮುಖ್ಯಸ್ಥ ಚಂದ್ರಶೇಖರ್​​​ ಆಜಾದ್​​​​​ ಬೆಂಬಲ; ಎಸ್​​​ಪಿ-ಬಿಎಸ್​​ಪಿ ಮೈತ್ರಿಗೆ ಭಾರೀ ಹಿನ್ನಡೆ!
Loading...

ಅಂತೆಯೇ ಕೋರ್ಟ್​​ಗೆ ಲಾಲೂ ಜಾಮೀನು ಅರ್ಜಿಗೆ ನಿನ್ನೆ ಆಕ್ಷೇಪಣೆ ಸಲ್ಲಿಸಿತ್ತು. ಈ ವೇಳೆ ಉತ್ತರಿಸಿದ್ದ ಸಿಬಿಐ ಅಧಿಕಾರಿಗಳು, ರಾಂಚಿಯ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಲಾಲೂ ಅವರನ್ನು ಯಾವ ರಾಜಕಾರಣಿಗಳು ಭೇಟಿ ಮಾಡಲು ಬರುತ್ತಿದ್ದರು. ಹೇಗೆಲ್ಲಾ ಚುನಾವಣೆ ಸಂಬಂಧಿಸಿದಂತೆ ಚರ್ಚಿಸುತ್ತಿದ್ದರು ಎಂಬುದನ್ನು ಸುಪ್ರೀಂಗೆ ವಿವರಿಸುವ ಮೂಲಕ ಜಾಮೀನು ನೀಡದಂತೆ ಮನವಿ ಮಾಡಿತ್ತು.
----------
First published:April 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...