HOME » NEWS » National-international » SC REFUSES TO STAY LAW HINTS AT REFERRING PLEAS TO LARGER CONSTITUTION BENCH CENTRE GIVEN 4 WEEKS TO REPLY RMD

ಸಿಎಎ ವಿಚಾರದಲ್ಲಿ ಮಧ್ಯಂತರ ಆದೇಶ ಹೊರಡಿಸಲು ಸುಪ್ರೀಂಕೋರ್ಟ್​ ನಿರಾಕರಣೆ; ಕೇಂದ್ರಕ್ಕೆ ನಾಲ್ಕು ವಾರ ಗಡುವು

Supreme Court On CAA: ಚಳಿಗಾಲದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತಂದಿತ್ತು. ಇದನ್ನು ಪ್ರಶ್ನಿಸಿ ಮುಸ್ಲಿಂ ಒಕ್ಕೂಟ ಸಂಘ (ಐಯುಎಂಎಲ್​), ಕಾಂಗ್ರೆಸ್​ ನಾಯಕ ಜಯರಾಮ್​ ರಮೇಶ್​ ಸೇರಿ 143 ಅರ್ಜಿ ಸುಪ್ರೀಂಕೋರ್ಟ್​​ಗೆ ಸಲ್ಲಿಕೆ ಆಗಿತ್ತು. ಇಂದು ಈ ಅರ್ಜಿಗಳ ವಿಚಾರಣೆ ನಡೆದಿದೆ.

news18-kannada
Updated:January 22, 2020, 11:45 AM IST
ಸಿಎಎ ವಿಚಾರದಲ್ಲಿ ಮಧ್ಯಂತರ ಆದೇಶ ಹೊರಡಿಸಲು ಸುಪ್ರೀಂಕೋರ್ಟ್​ ನಿರಾಕರಣೆ; ಕೇಂದ್ರಕ್ಕೆ ನಾಲ್ಕು ವಾರ ಗಡುವು
ಸುಪ್ರೀಂಕೋರ್ಟ್
  • Share this:
ನವದೆಹಲಿ (ಜ.22): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ (ಸಿಎಎ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿರುವ 143 ಅರ್ಜಿಗಳ ವಿಚಾರಣೆಯನ್ನು ಸುಪ್ರಿಂ ಕೋರ್ಟ್​​ ಆರಂಭಿಸಿದೆ. ಈ ವಿಚಾರದಲ್ಲಿ ಮಧ್ಯಂತರ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ಕೋರ್ಟ್​ ಹೇಳಿದೆ.

ಚಳಿಗಾಲದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಎಎ ಜಾರಿಗೆ ತಂದಿತ್ತು. ಇದನ್ನು ಪ್ರಶ್ನಿಸಿ ಮುಸ್ಲಿಂ ಒಕ್ಕೂಟ ಸಂಘ (ಐಯುಎಂಎಲ್​), ಕಾಂಗ್ರೆಸ್​ ನಾಯಕ ಜಯರಾಮ್​ ರಮೇಶ್​ ಸೇರಿ 143 ಅರ್ಜಿ ಸಲ್ಲಿಕೆ ಆಗಿತ್ತು.  ಇಂದು ಅರ್ಜಿ ವಿಚಾರಣೆ ಆರಂಭಿಸಿದ  ಎಸ್​ಎ ಬೋಬ್ಡೆ, "ಈ ಪ್ರಕರಣದಲ್ಲಿ ಅಸ್ಸಾಂ, ತ್ರಿಪುರಾ ಭಿನ್ನವಾಗಿದೆ. ಹೀಗಾಗಿ ಅಲ್ಲಿನ ಅರ್ಜಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲಾಗುವುದು," ಎಂದು ಸಿಜೆಐ ಹೇಳಿದ್ದಾರೆ.

ಇನ್ನು, ಈ ಪ್ರಕರಣವನ್ನು ಸಾಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ಹಸ್ತಾಂತರ ಮಾಡುವ ಬಗ್ಗೆ ಸುಪ್ರೀಂಕೋರ್ಟ್​ ಸುಳಿವು ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರಕ್ಕೆ ನಾಲ್ಕು ವಾರಗಳ ಗಡುವು ನೀಡಲಾಗಿದೆ. ಅಲ್ಲದೆ, ಸಿಎಎ ವಿಚಾರದಲ್ಲಿ ಯಾವುದೆ ಆದೇಶ ನೀಡದಂತೆ ಹೈಕೋರ್ಟ್​​ಗಳಿಗೆ ಸೂಚನೆ ನೀಡಿದೆ.

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರು ಎನಿಸಿಕೊಂಡು 2014 ಡಿಸೆಂಬರ್​ 31ರ ಒಳಗೆ ಭಾರತ ಪ್ರವೇಶಿಸಿದ ಹಿಂದು, ಸಿಖ್​, ಬೌದ್ಧ, ಕ್ರೈಸ್ತ, ಜೈನ ಹಾಗೂ ಪಾರ್ಸಿ ಸಮುದಾಯದವರಿಗೆ ಕೇಂದ್ರ ಸರ್ಕಾರ ಭಾರತದ ನಾಗರಿಕತೆ ನೀಡಲು ಮುಂದಾಗಿದೆ. ಹೀಗಾಗಿ ಈ ಕಾಯ್ದೆಗೆ ಸಾಂವಿಧಾನಿಕ ಸಿಂಧುತ್ವ ಇದೆಯೇ ಎನ್ನುವುದನ್ನು ಪ್ರಶ್ನಿಸಲಾಗಿದೆ.

ಇದನ್ನೂ ಓದಿ: ಮಂಗಳೂರು ಬಾಂಬ್​ ಪತ್ತೆ ಪ್ರಕರಣ; ಆರೋಪಿ ಆದಿತ್ಯ ರಾವ್​ ಪೊಲೀಸರಿಗೆ ಶರಣು

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾಗಿದೆ. ತಿದ್ದುಪಡಿ ಮಸೂದೆಗೆ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಅನುಮೋದನೆ ಸಿಗುತ್ತಿದ್ದಂತೆಯೇ ದೇಶದ ಹಲವೆಡೆ ಪ್ರತಿಭಟನೆಗಳು ಭುಗಿಲೆದ್ದಿವೆ. ಈಶಾನ್ಯ ಭಾರತದ ರಾಜ್ಯಗಳಲ್ಲಿ ಪ್ರತಿಭಟನೆಗಳು ಮೊದಲಿಟ್ಟವು. ನಂತರ ಇದು ರಾಜಧಾನಿ ದೆಹಲಿಯಲ್ಲಿ ಮಾರ್ದನಿಸಿತು. ದೇಶದ ವಿವಿಧೆಡೆ  ಪ್ರತಿಭಟನೆಗಳು ನಡೆಯುತ್ತಲೇ ಇವೆ.
First published: January 22, 2020, 11:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories