Supreme Court Verdict on Sabarimala: ಶಬರಿಮಲೆ ಪ್ರಕರಣ;​ ಏಳು ಸದಸ್ಯರ ಪೀಠಕ್ಕೆ ವರ್ಗಾವಣೆ ಮಾಡಿದ ಸುಪ್ರೀಂಕೋರ್ಟ್​

5 ವರ್ಷದಿಂದ 50 ವರ್ಷ ವಯಸ್ಸಿನವರೆಗಿನ ಮಹಿಳೆಯರು ದೇಗುಲ ಪ್ರವೇಶಿಸಬಾರದು ಎಂಬ ನಿಯಮವನ್ನು ಸುಪ್ರೀಂಕೋರ್ಟ್​ 2018ರ ಸೆಪ್ಟೆಂಬರ್ 28ರಂದು ರದ್ದುಪಡಿಸಿತ್ತು. ಇದರ ಪರಿಶೀಲನಾ ಅರ್ಜಿಯ ತೀರ್ಪನ್ನು ಕೋರ್ಟ್​ ಪ್ರಕಟಿಸಿದೆ.

Rajesh Duggumane | news18-kannada
Updated:November 14, 2019, 11:06 AM IST
Supreme Court Verdict on Sabarimala: ಶಬರಿಮಲೆ ಪ್ರಕರಣ;​ ಏಳು ಸದಸ್ಯರ ಪೀಠಕ್ಕೆ ವರ್ಗಾವಣೆ ಮಾಡಿದ ಸುಪ್ರೀಂಕೋರ್ಟ್​
ಶಬರಿಮಲೆ ಅಯ್ಯಪ್ಪ ದೇವಾಲಯ
 • Share this:
ನವದೆಹಲಿ (ನ.14): ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿ ಕುರಿತು ಸುಪ್ರೀಂಕೋರ್ಟ್​ ತನ್ನ ತೀರ್ಮಾನ ಪ್ರಕಟಿಸಿದೆ. ಈ ಪ್ರಕರಣವನ್ನು ಏಳು ಸದಸ್ಯರ ಪೀಠಕ್ಕೆ ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್​ ಆದೇಶ ಹೊರಡಿಸಿದೆ. 

ಕೇರಳದ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಮರುಪರಿಶೀಲನಾ ಅರ್ಜಿಯ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ನ್ಯಾ. ರೋಹಿಂಟನ್ ನಾರಿಮನ್, ನ್ಯಾ.ಡಿ.ವೈ.ಚಂದ್ರಚೂಡ್, ಮತ್ತು ನ್ಯಾ.ಇಂದು ಮಲ್ಹೋತ್ರಾ ಅವರಿರುವ ನ್ಯಾಯಪೀಠ ಈ ಆದೇಶ ಹೊರಡಿಸಿತು.

"ಧರ್ಮದಲ್ಲಿ ಗಂಡು ಹೆಣ್ಣಿಗೆ ಸಮಾನ ಹಕ್ಕಿದೆ. ಗಂಡು-ಹೆಣ್ಣು ಇಬ್ಬರು ಸಮಾಜದಲ್ಲಿ ಸರಿಸಮಾನರು. ಧರ್ಮದ ವಿಮರ್ಶೆಗೆ ಅರ್ಜಿ ಹಾಕಲಾಗಿದೆ," ಎಂದು ರಂಜನ್​ ಗೋಗೋಯ್​ ಅಭಿಪ್ರಾಯಪಟ್ಟರು. ನಂತರ ಶಬರಿಮಲೆ ತೀರ್ಪು 7 ನ್ಯಾಯಮೂರ್ತಿಗಳ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದರು. ನ್ಯಾ. ಚಂದ್ರಚೂಡ್​, ನ್ಯಾ. ನಾರಿಮನ್​ಅವರು ಶಬರಿಮಲೆ ದೇಗುಲ ಮಹಿಳೆಯರ ಪ್ರವೇಶಕ್ಕೆ ನಿರಾಕರಣೆ ಮಾಡಿದರು. ಉಳಿದ ಮೂವರು ನ್ಯಾಯಮೂರ್ತಿಗಳು ಮಹಿಳೆಯರ ಪ್ರವೇಶವನ್ನು ಬೆಂಬಲಿಸಿದರು.

5 ವರ್ಷದಿಂದ 50 ವರ್ಷ ವಯಸ್ಸಿನವರೆಗಿನ ಮಹಿಳೆಯರು ದೇಗುಲ ಪ್ರವೇಶಿಸಬಾರದು ಎಂಬ ನಿಯಮವನ್ನು ಸುಪ್ರೀಂಕೋರ್ಟ್​ 2018ರ ಸೆಪ್ಟೆಂಬರ್ 28ರಂದು ರದ್ದುಪಡಿಸಿತ್ತು.  ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಮತ್ತು ನ್ಯಾ.ರೋಹಿಂಟನ್ ನಾರಿಮನ್, ನ್ಯಾ.ಎ.ಎಂ.ಖಾನ್ ವಿಲ್ಕರ್, ನ್ಯಾ.ಡಿ.ವೈ.ಚಂದ್ರಚೂಡರ್ ಮತ್ತು ನ್ಯಾ.ಇಂದು ಮಲ್ಹೋತ್ರಾ ಅವರಿದ್ದ ನ್ಯಾಯಪೀಠ 4:1 ಬಹುಮತದ ತೀರ್ಪು ನೀಡಿತ್ತು.

ಈ ತೀರ್ಪನ್ನು ಮರುಪರಿಶೀಲಿಸಬೇಕು ಎಂದು ಹಲವು ಅರ್ಜಿಗಳು ಸುಪ್ರೀಂಕೋರ್ಟ್​ಗೆ ಸಲ್ಲಿಕೆಯಾಗಿದ್ದವು. ಅಲ್ಲದೆ, ಕೋರ್ಟ್​​ ಆದೇಶದ ನಂತರ ಮಹಿಳೆಯರು ಶಬರಿಮಲೆ ಪ್ರವೇಶಿಸಿದ ನಂತರದಲ್ಲಿ ಕೇರಳ ಉದ್ವಿಘ್ನಗೊಂಡಿತ್ತು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಓರ್ವ ಬಿಜೆಪಿ ಕಾರ್ಯಕರ್ತ ಮೃತಪಟ್ಟಿದ್ದ. ಸಿಪಿಐಎಂ ನಾಯಕರ ಮನೆಯ ಮೇಲೆ ಬಾಂಬ್​ ದಾಳಿ ಕೂಡ ನಡೆದಿತ್ತು. ಇದಾದ ಬೆನ್ನಲ್ಲೇ ಮತ್ತೋರ್ವ ಮಹಿಳೆ ಶಬರಿಮಲೆ ಪ್ರವೇಶಿಸಿದ್ದರು. ಈ ವಿಚಾರ ಬಿಜೆಪಿ-ಸಿಪಿಐಎಂ ನಡುವಣ ವಾಗ್ವಾದಕ್ಕೂಕಾರಣವಾಗಿತ್ತು.

ಪ್ರಕರಣದ ಟೈಮ್​ಲೈನ್​  
 • 1990: ದೇವಸ್ಥಾನಕ್ಕೆ ಮಹಿಳೆ ಪ್ರವೇಶ ಬೇಡ. ಕೇರಳ ಹೈಕೋರ್ಟ್​​ನಲ್ಲಿ ಅರ್ಜಿ

 •  05-04-1991: ದೇವಸ್ಥಾನಕ್ಕೆ ಮಹಿಳೆ ಪ್ರವೇಶ ನಿಷಿದ್ಧ. ಕೆಲ ವಯಸ್ಸಿನವರಿಗೆ ನಿರ್ಬಂಧ

 • 2006: ನಟಿ ಜಯಮಾಲಾ ಹೊಸ ಬಾಂಬ್. 28ನೇ ವಯಸ್ಸಲ್ಲೇ ದೇಗುಲ ಪ್ರವೇಶಿಸಿದ್ದೆ ಎಂದ ನಟಿ

 • 04-08-2006: ದೇಗುಲಕ್ಕೆ ಮಹಿಳೆ ಪ್ರವೇಶಕ್ಕೆ ಮನವಿ: ಸುಪ್ರೀಂಗೆ ಯುವ ವಕೀಲರ ಕೂಟ.

 •  2007: ಮಹಿಳೆ ಪ್ರವೇಶ ನಿಷೇಧ-LDF ವಿರೋಧ. ಸರ್ಕಾರದಿಂದ ಸುಪ್ರಿಂಗೆ ಅಫಿಡವಿಟ್.

 • 11-01-2016: ಸುಪ್ರಿಂನಲ್ಲಿ ವಿಚಾರಣೆ ಆರಂಭ. ಮಹಿಳೆ ಪ್ರವೇಶ ನಿಷೇಧ-ಕೋರ್ಟ್ ಪ್ರಶ್ನೆ.

 •  06-02-2016: ಉಲ್ಟಾ ಹೊಡೆದ UDF ಸರ್ಕಾರ. ಭಕ್ತರ ಆಚರಣೆಗಳಿಗೆ ಅಡ್ಡಿ ಬೇಡ.

 • 11-04-2016: ಮಹಿಳೆ ನಿಷೇಧಕ್ಕೆ ಸುಪ್ರೀಂ ಗರಂ. ಲಿಂಗ ತಾರತಮ್ಯ-ಸಂದೇಶ ರವಾನೆ.

 • 13-04-2016: ಮಹಿಳೆ ನಿಷೇಧದಿಂದ ಧಕ್ಕೆ ಇಲ್ಲ. ಸಂಪ್ರದಾಯಕ್ಕೆ ಧಕ್ಕೆ ಆಗಲ್ಲ –ಸುಪ್ರಿಂ.

 • 21-04-2016: ದೇಗುಲಕ್ಕೆ ಮಹಿಳೆ ಪ್ರವೇಶಕ್ಕೆ ಸಹಮತ. ಸುಪ್ರೀಂಗೆ ಹಿಂದೂ ಸಂಘಟನೆಗಳ ಅರ್ಜಿ.

 •  07-11-2016: LDF ಸರ್ಕಾರದಿಂದ 2ನೇ ಅಫಿಡವಿಟ್. ಎಲ್ಲಾ ಮಹಿಳೆಯರ ಪ್ರವೇಶಕ್ಕೆ ಅಸ್ತು.

 • 13-10-2017: ಕಗ್ಗಂಟಾದ ಮಹಿಳೆಯರ ಎಂಟ್ರಿ. ಸಾಂವಿಧಾನಿಕ ಪೀಠಕ್ಕೆ ಕೇಸ್

 • 27-10-2017: ಮಹಿಳಾ ನ್ಯಾ.ಗಳುಳ್ಳ ಪೀಠಕ್ಕೆ ಕೋರಿಕೆ. ಸುಪ್ರಿಂಗೆ ಮತ್ತೊಂದು ಅರ್ಜಿ.

 • 17-06-2018: 5 ನ್ಯಾಯಮೂರ್ತಿಗಳ ಪೀಠ. ಕೇಸ್ನ ಸಮಗ್ರ ವಿಚಾರಣೆ ಆದೇಶ.

 •  24-06-2018: ಋತುಮತಿ ಕಾರಣ ಸಲ್ಲ – ಕೋರ್ಟ್. ಮಹಿಳೆಯ ಸಾಂವಿಧಾನಿಕ ಹಕ್ಕಿಗೆ ಚ್ಯುತಿ ಎಂದ ನ್ಯಾಯಾಲಯ

 • 31-06-2018: ಪ್ರಜಾಪ್ರಭುತ್ವದಲ್ಲಿ ನಿಷೇಧ ಸರಿಯಲ್ಲ. ಹಕ್ಕು ರಕ್ಷಣೆ ಬಗ್ಗೆ ಕೋರ್ಟ್ ಸಂದೇಶ.

 • 28-9-19: ದೇಗು ಪ್ರವೇಶಕ್ಕೆ ಅನುಮತಿ

 • ಇದೇ ತಿಂಗಳು ಮರುಪರಿಶೀಲನಾ ಅರ್ಜಿ ಸಲ್ಲಿಕೆ

First published:November 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading