ಚಿದಂಬರಂಗಿಲ್ಲ ನೆಮ್ಮದಿ; ಸೆಪ್ಟೆಂಬರ್​ 5ರ ತನಕ ಸಿಬಿಐ ಕಸ್ಟಡಿ ಮುಂದೂಡಿದ ಸುಪ್ರೀಂ ಕೋರ್ಟ್​

ಇಂದಾದರೂ ಸುಪ್ರೀಂ ಕೋರ್ಟ್​ನಿಂದ ರಿಲೀಫ್​ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಚಿದಂಬರಂಗೆ ಮತ್ತೆ ಅಸಮಾಧಾನದ ತೀರ್ಪು ಹೊರಬಿದ್ದಿದೆ. ಸೆಪ್ಟೆಂಬರ್​ 5ರ ತನಕ ಸಿಬಿಐ ವಶಕ್ಕೆ ಮತ್ತೆ ನೀಡಿರುವುದರಿಂದ, ಐದನೇ ತಾರೀಕು ವಿಚಾರಣೆ ನಡೆಯಲಿದೆ. 

Sharath Sharma Kalagaru | news18-kannada
Updated:September 3, 2019, 3:28 PM IST
ಚಿದಂಬರಂಗಿಲ್ಲ ನೆಮ್ಮದಿ; ಸೆಪ್ಟೆಂಬರ್​ 5ರ ತನಕ ಸಿಬಿಐ ಕಸ್ಟಡಿ ಮುಂದೂಡಿದ ಸುಪ್ರೀಂ ಕೋರ್ಟ್​
ಪಿ ಚಿದಂಬರಂ ರೇಖಾಚಿತ್ರ
  • Share this:
ನವದೆಹಲಿ: ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರನ್ನು ಇಂದು ಕೂಡ ಸುಪ್ರೀಂ ಕೋರ್ಟ್​ ಸೆಪ್ಟೆಂಬರ್​ 5ರ ತನಕ ಮತ್ತೆ ಸಿಬಿಐ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ. ಜತೆಗೆ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಮಧ್ಯಂತರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್​ಗೆ ಸಲ್ಲಿಸಬೇಡಿ ಎಂದು ಕೂಡ ಕೋರ್ಟ್​ ಚಿದಂಬರಂ ಪರ ವಕೀಲರಿಗೆ ತಾಕೀತು ಮಾಡಿದೆ. 

ಚಿದಂಬರಂ ಅವರಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಪ್ರತಿಬಾರಿ ಸಿಬಿಐ ವಕೀಲ ಸಾಲಿಸಿಟರ್ ಜನರಲ್​ ತುಷಾರ್ ಮೇಹ್ತಾ ವಾದ ಮಾಡುತ್ತಾ ಬಂದಿದ್ದಾರೆ. ವೈಯಕ್ತಿಕ  ಸ್ವಾತಂತ್ರ್ಯ ಎಂಬುದು ಎಲ್ಲರಿಗೂ ಒಂದೇ. ಆಟೋ ರಿಕ್ಷಾ ಚಾಲಕ ಕೂಡ ಚಿದಂಬರಂ ಅವರಿಗಿಂತ ಚಿಕ್ಕವರಲ್ಲ. ಕಾನೂನು ಪ್ರಕ್ರಿಯೆಗಳು ಎಲ್ಲರಿಗೂ ಒಂದೇ ಎಂದು ವಾದಿಸಿದ್ದರು.

ಇದಕ್ಕೂ ಮುನ್ನ ಸುಪ್ರೀಂಕೋರ್ಟ್​ನಲ್ಲಿ ವಕೀಲ ಕಪಿಲ್​ ಸಿಬಲ್ ಅವರು ಚಿದಂಬರಂ ಅವರನ್ನು ತಿಹಾರ ಜೈಲಿಗೆ ಕಳುಹಿಸದಂತೆ ಬಲವಾಗಿ ವಾದ ಮಂಡನೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ತಿಹಾರ ಜೈಲಿಗೆ ಕಳಿಸದಂತೆ ಸುಪ್ರೀಂ ಆದೇಶಿಸಿತ್ತು.

ಚಿದಂಬರಂ ಅವರಿಗೆ 74 ವರ್ಷ. ಅವರನ್ನು ಗೃಹಬಂಧನದಲ್ಲಿ ಇರಿಸಲಿ. ಆದರೆ, ತಿಹಾರ ಜೈಲಿಗೆ ಕಳುಹಿಸುವುದು ಬೇಡ ಎಂದು ಸಿಬಲ್​ ವಾದ ಮಾಡಿದ್ದರು. ಬಳಿಕ ಚಿದಂಬರಂ ಅವರನ್ನು ಮುಂದಿನ ಆದೇಶದವರೆಗೂ ತಿಹಾರ್ ಜೈಲಿಗೆ ಕಳುಹಿಸದಂತೆ ಸುಪ್ರೀಂಕೋರ್ಟ್​ ಆದೇಶ ನೀಡಿತ್ತು. ಇದರಿಂದ ಚಿದಂಬರಂ ಅವರಿಗೆ ಕೊಂಚ ಸಮಾಧಾನ ನೀಡಿತ್ತು.

ಇದನ್ನು ಓದಿ: ಐಎನ್ಎಕ್ಸ್ ಹಗರಣ: ಮುಂದಿನ ಆದೇಶದವರೆಗೂ ಜೈಲಿಗೆ ಕಳುಹಿಸುವುದು ಬೇಡ; ಚಿದಂಬರಂಗೆ ರಿಲೀಫ್​ ನೀಡಿದ ಸುಪ್ರೀಂ

ಐಎನ್​ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಭ್ರಷ್ಟಾಚಾರ ಮತ್ತು ಹಣ ಅವ್ಯವಹಾರ ಆರೋಪಗಳು ಪಿ. ಚಿದಂಬರಂ ಮೇಲೆ ಕೇಳಿಬಂದಿದೆ. ಈ ಸಂಬಂಧ ಆಗಸ್ಟ್​ 21ರಂದು ಚಿದಂಬರಂ ಅವರನ್ನು ಸಿಬಿಐ ವಶಕ್ಕೆ ಪಡೆದು, ತನ್ನ ಕಸ್ಟಡಿಯಲ್ಲಿ ಇರಿಸಿಕೊಂಡಿದೆ.

ಇಂದಾದರೂ ಸುಪ್ರೀಂ ಕೋರ್ಟ್​ನಿಂದ ರಿಲೀಫ್​ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಚಿದಂಬರಂಗೆ ಮತ್ತೆ ಅಸಮಾಧಾನದ ತೀರ್ಪು ಹೊರಬಿದ್ದಿದೆ. ಸೆಪ್ಟೆಂಬರ್​ 5ರ ತನಕ ಸಿಬಿಐ ವಶಕ್ಕೆ ಮತ್ತೆ ನೀಡಿರುವುದರಿಂದ, ಐದನೇ ತಾರೀಕು ವಿಚಾರಣೆ ನಡೆಯಲಿದೆ.
First published:September 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading