HOME » NEWS » National-international » SC ON LOAN MORATORIUM SUPREME COURT TO HEAR INTEREST WAIVER CASE TODAY AROUND 1 PM MAK

ಮೊರೊಟೋರಿಯಂ ಅವಧಿಯ ಇಎಂಐ ಮೇಲೆ ಬಡ್ಡಿ?; ಇಂದು ಮಧ್ಯಾಹ್ನ 1ಕ್ಕೆ ಮತ್ತೆ ವಿಚಾರಣೆ ಆರಂಭಿಸಲಿರುವ ಸುಪ್ರೀಂ

ಕೊರೋನಾ ಲಾಕ್‌ಡೌನ್‌ ವೇಳೆ ಸತತ ಆರು ತಿಂಗಳ ಕಾಲ ಕೇಂದ್ರ ಸರ್ಕಾರ ಸಾಲಗಳ ಮೇಲಿನ ಇಎಂಐಗಳಿಗೆ ವಿನಾಯಿತಿ ನೀಡಿತ್ತು. ಆದರೆ, ಈ ಮೊತ್ತದ ಮೇಲೆ ಬಡ್ಡಿಯನ್ನೂ ನಿಗದಿಪಡಿಸಿತ್ತು. ಆದರೆ, ಇಎಂಐ ಮೊತ್ತದ ಮೇಲೆ ಬಡ್ಡಿ ಹೇರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನೆ ಮಾಡಲಾಗಿತ್ತು.

news18-kannada
Updated:October 14, 2020, 12:26 PM IST
ಮೊರೊಟೋರಿಯಂ ಅವಧಿಯ ಇಎಂಐ ಮೇಲೆ ಬಡ್ಡಿ?; ಇಂದು ಮಧ್ಯಾಹ್ನ 1ಕ್ಕೆ ಮತ್ತೆ ವಿಚಾರಣೆ ಆರಂಭಿಸಲಿರುವ ಸುಪ್ರೀಂ
ಸುಪ್ರೀಂಕೋರ್ಟ್​.
  • Share this:
ನವ ದೆಹಲಿ (ಅಕ್ಟೋಬರ್​ 14); ಕೊರೋನಾ ವೈರಸ್ ಲಾಕ್‌ಡೌನ್ ಸಮಯದಲ್ಲಿ ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿಯ ಮೇಲಿನ ಬಡ್ಡಿ ಹಾಗೂ ಮಾರ್ಚ್ 27 ರಂದು ಹೊರಡಿಸಲಾದ ಆರ್‌ಬಿಐ ಅಧಿಸೂಚನೆಯ ಕೆಲವು ಭಾಗವನ್ನು ರದ್ದುಗೊಳಿಸಬೇಕು. ಏಕೆಂದರೆ ರಿಸರ್ವ್ ಬ್ಯಾಂಕಿನ ಈ ಅಧಿಸೂಚನೆ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಿದ ಜೀವನ ಹಕ್ಕಿನಲ್ಲಿ ಕಷ್ಟಗಳು ಮತ್ತು ಅಡೆತಡೆಗಳು ಸೃಷ್ಟಿಸುತ್ತದೆ ಎಂದು ಸುಪ್ರೀಂ ಕೋರ್ಟ್‌‌ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಪುನರಾರಂಭಿಸಲಿದೆ. ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಮ್ಆರ್ ಷಾ ಅವರ ನ್ಯಾಯಪೀಠ ಇಂದು ಮಧ್ಯಾಹ್ನ 1 ಗಂಟೆಗೆ ಆರಂಭಿಸಲಿದೆ ಎನ್ನಲಾಗುತ್ತಿದೆ. ಅಸಲಿಗೆ ಈ ಪ್ರಕರಣದ ವಿಚಾರಣೆ ಅಕ್ಟೋಬರ್​ 13ರಂದೇ ನಡೆಯಬೇಕಿತ್ತು. ಆದರೆ, ನ್ಯಾಯಮೂರ್ತಿಗಳು ಕೆಲವು ಕಾರಣಾಂತರಗಳಿಂದ ವಿಚಾರಣೆಯನ್ನು ಅಕ್ಟೋಬರ್​ 14ಕ್ಕೆ ಮುಂದೂಡಿದ್ದರು.

ಕೊರೋನಾ ಲಾಕ್‌ಡೌನ್‌ ವೇಳೆ ಸತತ ಆರು ತಿಂಗಳ ಕಾಲ ಕೇಂದ್ರ ಸರ್ಕಾರ ಸಾಲಗಳ ಮೇಲಿನ ಇಎಂಐಗಳಿಗೆ ವಿನಾಯಿತಿ ನೀಡಿತ್ತು. ಆದರೆ, ಈ ಮೊತ್ತದ ಮೇಲೆ ಬಡ್ಡಿಯನ್ನೂ ನಿಗದಿಪಡಿಸಿತ್ತು. ಆದರೆ, ಇಎಂಐ ಮೊತ್ತದ ಮೇಲೆ ಬಡ್ಡಿ ಹೇರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನೆ ಮಾಡಲಾಗಿತ್ತು. ಅಲ್ಲದೆ, ಈ ಕುರಿತು ಸೆಪ್ಟೆಂಬರ್​ 02 ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌ ಚಕ್ರಬಡ್ಡಿ ವಿಧಿಸುವ ಕೇಂದ್ರ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿತ್ತು.

"ಕೇಂದ್ರ ಸರ್ಕಾರ ಕೊರೋನಾ ಕಾರಣದಿಂದಾಗಿ ಇಡೀ ದೇಶವನ್ನು ಲಾಕ್‌ಡೌನ್ ಮಾಡಿದ ಕಾರಣಕ್ಕೆ ಇಂತಹ ಪರಿಸ್ಥಿತಿ ಸಂಭವಿಸಿದೆ. ಲಾಕ್‌ಡೌನ್‌ನಿಂದಾಗಿ ದೇಶದ ಆರ್ಥಿಕತೆ ಮೇಲೆ ಉಂಟಾಗಿರುವ ಪರಿಣಾಮವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಗಲಿ, ಸರ್ಕಾರವಾಗಲಿ ಮರೆಮಾಡಲು ಸಾಧ್ಯವಿಲ್ಲ. ಬ್ಯಾಂಕುಗಳು ಕೇವಲ ವ್ಯವಹಾರಗಳ ಮೇಲೆ ಮಾತ್ರ ಆಸಕ್ತಿ ಹೊಂದುವ ಬದಲು ಜನರ ನೋವುಗಳನ್ನೂ ಆಲಿಸುವುದು ಸೂಕ್ತ" ಎಂದು ಕೋರ್ಟ್​ ಕಿಡಿಕಾರಿತ್ತು.

ಇನ್ನೂ ಸರ್ಕಾರದ ಎದುರು ಕಟು ಪ್ರಶ್ನೆಗಳನ್ನಿಟ್ಟಿದ್ದ ನ್ಯಾಯಮೂರ್ತಿ ಅಶೋಕ್ ಭೂಷಣ್, "ಇದು ಕೇವಲ ವ್ಯವಹಾರ ಬಗ್ಗೆ ಮಾತ್ರ ಪರಿಗಣಿಸುವ ಸಮಯವಲ್ಲ. ಬದಲಾಗಿ ಜನರ ದುಸ್ಥಿತಿಯ ಬಗ್ಗೆ ಸರ್ಕಾರ ಗಮನವಹಿಸಬೇಕಿದೆ. ಹೀಗಾಗಿ ಸರ್ಕಾರ ನ್ಯಾಯಾಲಯಕ್ಕೆ ಎರಡು ವಿಚಾರದ ಬಗ್ಗೆ ಸ್ಪಷ್ಟತೆ ನೀಡಬೇಕು. ನೀವು ರಾಷ್ಟ್ರೀಯ ವಿಪತ್ತನ್ನು ನಿರ್ವಹಣೆ ಮಾಡುತ್ತೀರಾ? ಅಥವಾ ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿ ಮೇಲಿನ ಬಡ್ಡಿಗೆ ಮತ್ತಷ್ಟು ಬಡ್ಡಿಯನ್ನು ಸೇರಿಸುವ ಕುರಿತು ಲೆಕ್ಕ ಹಾಕುತ್ತೀರ?" ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು

ಇದನ್ನೂ ಓದಿ : ಅಟಲ್ ಸುರಂಗಕ್ಕೆ ಶಂಕುಸ್ಥಾಪನೆ ಮಾಡಿದ್ದ ಸೋನಿಯಾ ಗಾಂಧಿ ನಾಮಫಲಕವೇ ಮಾಯ; ಕಾಂಗ್ರೆಸ್​ ಆಕ್ರೋಶ

ಅಲ್ಲದೆ, "ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಮೊರೊಟೋರಿಯಂ ಅವಧಿಯ ಸಾಲ ಮರುಪಾವತಿ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದ್ದರೂ ಈ ಕುರಿತು ತನ್ನ ನಿಲುವನ್ನು ಸರ್ಕಾರ ಈವರೆಗೆ ಸ್ಪಷ್ಟಪಡಿಸಿಲ್ಲ. ಹೀಗಾಗಿ ಸೆಪ್ಟೆಂಬರ್ 1ರ ಒಳಗಾಗಿ ಸರ್ಕಾರ ಈ ಕುರಿತು ಕೋರ್ಟ್‌‌ಗೆ ಸ್ಪಷ್ಟೀಕರಣ ನೀಡಬೇಕು" ಎಂದು ಕಾಲಾವಕಾಶ ನೀಡಲಾಗಿತ್ತು.
Youtube Video
ಅದರಂತೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್​ಗೆ ಮೊರಟೋರಿಯಂ ಅವಧಿಯ ಬಡ್ಡಿ ಕುರಿತು ಸ್ಪಷ್ಟೀಕರಣ ನೀಡಿದ್ದು ಕೋರ್ಟ್​ ಓ ಸಂಬಂಧ ವಿಚಾರಣೆಯನ್ನು ಇಂದು ನಿಗದಿಪಡಿಸಿದೆ. ಆದರೆ, ಸುಪ್ರೀಂ ಕೋರ್ಟ್‌ ಮೊರೊಟೋರಿಯಂ ಅವಧಿಯ ಇಎಂಐ ಮೇಲೆ ಸರ್ಕಾರ ಮತ್ತು ಬ್ಯಾಂಕುಗಳು ವಿಧಿಸಿರುವ ಬಡ್ಡಿ ಧರವನ್ನು ಕಡಿತಗೊಳಿಸುತ್ತದೆಯೇ? ಅಥವಾ ಸರ್ಕಾರ ಮಾತಿಗೆ ಕಿವಿಗೊಡುತ್ತದೆಯೇ? ಎಂಬುದನ್ನು ಕಾದುನೋಡಬೇಕಿದೆ.
Published by: MAshok Kumar
First published: October 14, 2020, 12:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories