• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Narada Case: ನಾರದಾ ಪ್ರಕರಣ ಸಂಬಂಧ ಮಮತಾ ಬ್ಯಾನರ್ಜಿ ಮೇಲ್ಮನವಿ ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್

Narada Case: ನಾರದಾ ಪ್ರಕರಣ ಸಂಬಂಧ ಮಮತಾ ಬ್ಯಾನರ್ಜಿ ಮೇಲ್ಮನವಿ ಅರ್ಜಿ ವಿಚಾರಣೆ ನಿರಾಕರಿಸಿದ ಸುಪ್ರೀಂಕೋರ್ಟ್

ಮಮತಾ ಬ್ಯಾನರ್ಜಿ.

ಮಮತಾ ಬ್ಯಾನರ್ಜಿ.

ಮಮತಾ ಬ್ಯಾನರ್ಜಿ ಅವರು ಸಿಬಿಐ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಲು ಸೋಮವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

 • Share this:

  ನವದೆಹಲಿ: 2016 ರ ನಾರದಾ ಕುಟುಕು ಪ್ರಕರಣಕ್ಕೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸುವುದನ್ನು ನಿರಾಕರಿಸುವ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಕಾನೂನು ಸಚಿವ ಮೊಲೊಯ್ ಘಟಕ್ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅನಿರುದ್ಧ ಬೋಸ್ ಮಂಗಳವಾರ ನಿರಾಕರಿಸಿದ್ದಾರೆ.


  ರಾಜ್ಯ ಸರ್ಕಾರದ ಒತ್ತಡದ ಕಾರಣದಿಂದ ನಾರದಾ ಪ್ರಕರಣವನ್ನು ಬಂಗಾಳದಿಂದ ಸ್ಥಳಾಂತರಿಸುವ ಸಿಬಿಐ ಕೋರಿಕೆಯ ಮೇರೆಗೆ ಸಿಎಂ ಮತ್ತು ಕಾನೂನು ಸಚಿವರು ತಮ್ಮ ವಾದ ಮಂಡಿಸಲು ಅಫಿಡವಿಟ್ ಸಲ್ಲಿಸಲು ಬಯಸಿದ್ದರು. ಆದಾಗ್ಯೂ, ಹೈಕೋರ್ಟ್ ಅವರಿಬ್ಬರೂ ಸರಿಯಾದ ಸಮಯದಲ್ಲಿ ಅಫಿಡವಿಟ್​ಗಳನ್ನು ಸಲ್ಲಿಸಲಿಲ್ಲ, "ಈಗ ಅವರು ತಮ್ಮದೇ ಆದ ಆಶಯದ ಅಫಿಡವಿಟ್​ಗಳನ್ನು ಸಲ್ಲಿಸಲು ಅನುಮತಿ ನೀಡಲಾಗುವುದಿಲ್ಲ" ನ್ಯಾಯಾಲಯ ಹೇಳಿದೆ.

  ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೇ 2ರಂದು ಮಮತಾ ಬ್ಯಾನರ್ಜಿ ಅವರು ಭಾರಿ ಬಹುಮತದೊಂದಿಗೆ ಜಯ ಸಾಧಿಸಿದ ಬಳಿಕ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿ ನಡೆದ ಹಿಂಸಾಚಾರ ಪ್ರಕರಣದಿಂದ ಹಿಂದೆ ಸರಿದಿದ್ದರು.


  ನಾರದಾ ಸ್ಟಿಂಗ್ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್​ (ಟಿಎಂಸಿ)ನ ಹಲವು ನಾಯಕರು ಹಣದ ರೂಪದಲ್ಲಿ ಲಂಚ ಸ್ವೀಕರಿಸುವ ವಿಡಿಯೋವನ್ನು ಪತ್ರಕರ್ತರು ಸೆರೆ ಹಿಡಿದಿದ್ದರು.


  ಇದನ್ನು ಓದಿ: Delta Plus Variant: ರಾಜ್ಯದಲ್ಲಿ ಈವರೆಗೆ ಡೆಲ್ಟಾ ಪ್ಲಸ್​ ರೂಪಾಂತರಿ ವೈರಸ್ ಪತ್ತೆಯಾಗಿಲ್ಲ; ಆರೋಗ್ಯ ಇಲಾಖೆ ಸ್ಪಷ್ಟನೆ


  ಪ್ರಕರಣ ಸಂಬಂಧ ಟಿಎಂಸಿ ಶಾಸಕರನ್ನು ಬಂಧಿಸಿದ ಬಳಿಕ ಟಿಎಂಸಿ ನಾಯಕರು ಮತ್ತು ಮಮತಾ ಬ್ಯಾನರ್ಜಿ ಅವರು ಸಿಬಿಐ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಮತ್ತು ಪ್ರಕರಣದ ವಿಚಾರಣೆ ಮೇಲೆ ಪ್ರಭಾವ ಬೀರಿದ್ದರು ಎಂದು ಸಿಬಿಐ ಆರೋಪಿಸಿದೆ. ಆದರೆ, ಸಿಬಿಐ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ ಅವರು ತಾವು ಸಿಬಿಐ ಕಚೇರಿಗೆ ತೆರಳಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ತಾವು ಸಿಬಿಐ ಕಚೇರಿಗೆ ಹೋಗಿದ್ದು, ಮುಖ್ಯಮಂತ್ರಿಯಾಗಿ ಅಲ್ಲ, ಬದಲಾಗಿ ಓರ್ವ ಪ್ರಜೆಯಾಗಿ ಹಾಗೂ ಆರೋಪಿತರ ಸಂಬಂಧಿಯಾಗಿ ಹೋಗಿದ್ದು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.


  ಮಮತಾ ಬ್ಯಾನರ್ಜಿ ಅವರು ಸಿಬಿಐ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಲು ಸೋಮವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

  Published by:HR Ramesh
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು