• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • CAA Act: ಪೌರತ್ವ ಕಾಯ್ದೆಯ ಬಗೆಗಿನ ಅಫಿಡವಿಟ್​ಗೆ ಪ್ರತಿಕ್ರಿಯಿಸಲು ಮುಸ್ಲೀಂ ಲೀಗ್​ಗೆ 2 ವಾರ ಗಡುವು ನೀಡಿದ ಸುಪ್ರೀಂ!

CAA Act: ಪೌರತ್ವ ಕಾಯ್ದೆಯ ಬಗೆಗಿನ ಅಫಿಡವಿಟ್​ಗೆ ಪ್ರತಿಕ್ರಿಯಿಸಲು ಮುಸ್ಲೀಂ ಲೀಗ್​ಗೆ 2 ವಾರ ಗಡುವು ನೀಡಿದ ಸುಪ್ರೀಂ!

ಸರ್ವೋಚ್ಚ ನ್ಯಾಯಾಲಯ.

ಸರ್ವೋಚ್ಚ ನ್ಯಾಯಾಲಯ.

ನ್ಯಾಯಮೂರ್ತಿಗಳಾದ ಜಸ್ಟಿಸ್ ಹೇಮಂತ್ ಗುಪ್ತಾ ಮತ್ತು ಜಸ್ಟಿಸ್ ವಿ. ರಾಮಸುಬ್ರಮಣ್ಯನ್ ಅವರ ಪೀಠವು 2 ವಾರಗಳ ನಂತರ ಕೇಂದ್ರ ಸರ್ಕಾರದ ಪೌರತ್ವ ನೊಂದಣಿ ಅಧಿಸೂಚನೆಯ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಆರಂಭಿಸಲಿದೆ.

 • Share this:

  ನವ ದೆಹಲಿ (ಜೂನ್ 15); ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ಸಾಕಷ್ಟು ಚರ್ಚೆ ಮತ್ತು ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಸಿಎಎ ಕಾಯ್ದೆ (ಪೌರತ್ವ ತಿದ್ದುಪಡಿ ಕಾಯ್ದೆ) ಯನ್ನು  ಅಧಿಕೃತವಾಗಿ ದೇಶದಲ್ಲಿ ಜಾರಿಯಾಗುವ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದರ ಮೊದಲ ಭಾಗವಾಗಿ ಕೇಂದ್ರದ ಮಾನವ ಸಂಪನ್ಮೂಲ ಸಚಿವಾಲಯ ಗುಜರಾತ್, ರಾಜಸ್ಥಾನ್, ಹರಿಯಾಣ, ಪಂಜಾಬ್, ಛತ್ತಿಸ್‌ಗಡ್‌ನಲ್ಲಿ ರುವ ಅಪಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ಮೂಲದ ಮುಸ್ಲೀಮೇತ ರರಿಗೆ ದೇಶದ ಪೌರತ್ವಕ್ಕೆ ಅರ್ಜಿ ಸಲ್ಲಿಸುವಂತೆ ಆಹ್ವಾನಿಸಿದೆ. ಆ ಸಂಬಂಧ ಸದ್ಯ ಕೇಂದ್ರ ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ. ಕೇಂದ್ರದ ಅಧಿಸೂಚನೆ ಯನ್ನು ಪ್ರಶ್ನಿಸಿ ಅನೇಕರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಇಂದು ಸಿಎಎ ಕಾಯ್ದೆಗೆ ಸಂಬಂಧಿಸಿ ಇಂಡಿಯನ್ ಯುನಿಯನ್ ಮುಸ್ಲೀಂ ಲೀಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿತು. ಅಲ್ಲದೆ, ಮಾನವ ಸಂಪನ್ಮೂಲ ಇಲಾಖೆಯ ಅಫಿಡವಿಟ್​ಗೆ ಎರಡು ವಾರದಲ್ಲಿ ಉತ್ತರ ನೀಡುವಂತೆ ಸೂಚನೆ ನೀಡಿದೆ.


  ಅರ್ಜಿದಾರರ ಪರವಾಗಿ ಕಪಿಲ್ ಸಿಬಾಲ್ ಇಂದು ನ್ಯಾಯಾಲಯದಲ್ಲಿ ಹಾಜರಿದ್ದರು. ಕೇಂದ್ರ ಸರ್ಕಾರ ಈ ಅಧಿಸೂಚನೆ CAA ಗೆ ಸಂಬಂಧಿಸಿದ್ದಲ್ಲ. ಕೇಂದ್ರ ಸರ್ಕಾರದ ಅಂತರ್ಗತ ಅಧಿಕಾರವನ್ನು ಬಳಸಿ ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಸಿಎಎ ಮತ್ತು ಅಧಿಸೂಚನೆಗೆ ಸಂಬಂಧ ಕಲ್ಪಿಸಿ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿ ದೋಷಪೂರಿತವಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ನಿನ್ನೆ ಸೋಮವಾರ ಅಫಿಡೆವಿಟ್ ಸಲ್ಲಿಸಿತ್ತು.


  ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ವಕೀಲ ಕಪಿಲ್ ಸಿಬಾಲ್ ತಮಗೆ ಉತ್ತರಿಸಲು 2 ವಾರದ ಕಾಲಾವಕಾಶವನ್ನು ಕೇಳಿದ್ದಾರೆ. ಅರ್ಜಿದಾರರ ಮನವಿಗೆ ಸ್ಪಂದಿಸಿದ ಕೋರ್ಟ್ ಪ್ರಕರಣದ ವಿಚಾರಣೆಯನ್ನು 2 ವಾರಗಳ ನಂತರ ಆರಂಭಿಸುವುದಾಗಿ ಹೇಳಿದೆ.


  ನ್ಯಾಯಮೂರ್ತಿಗಳಾದ ಜಸ್ಟಿಸ್ ಹೇಮಂತ್ ಗುಪ್ತಾ ಮತ್ತು ಜಸ್ಟಿಸ್ ವಿ. ರಾಮಸುಬ್ರಮಣ್ಯನ್ ಅವರ ಪೀಠವು 2 ವಾರಗಳ ನಂತರ ಕೇಂದ್ರ ಸರ್ಕಾರದ ಪೌರತ್ವ ನೊಂದಣಿ ಅಧಿಸೂಚನೆಯ ವಿರುದ್ಧದ ಅರ್ಜಿಗಳ ವಿಚಾರಣೆಯನ್ನು ಆರಂಭಿಸಲಿದೆ.


  ಇದಕ್ಕು ಮೊದಲು ಕೇಂದ್ರ ಸರ್ಕಾರವು 2004, 2005, 2006, 2016, 2018 ರಲ್ಲಿ ಇಂತಹುದೇ ಅಧಿಸೂಚನೆಯನ್ನು ದೇಶದಲ್ಲಿ ಸರ್ಕಾರವು ಹೊರಡಿಸಿದೆ. 1955 ರ ಸಿಟಿಜನ್‌ಶಿಪ್ ಕಾಯ್ದೆಯ ನಿಯಮಗಳಡಿಯಲ್ಲಿಯೇ ಈ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಪೌರತ್ವದ ಅರ್ಹತೆಯ ಮಾನದಂಡಗಳನ್ನು ಸಡಿಸಲಾಗಿಲ್ಲ. ಹೊಸ ನಿಯಮಗಳನ್ನು ಇನ್ನೂ ಜಾರಿಗೆ ತಂದಿಲ್ಲ ಎಂದು ಹೇಳಿದೆ.


  ಇದನ್ನೂ ಓದಿ: ಮುಸ್ಲೀಂ ವ್ಯಕ್ತಿಯ ಮೇಲಿನ ಹಲ್ಲೆ ಸಮಾಜ ಮತ್ತು ಧರ್ಮ ಎರಡಕ್ಕೂ ನಾಚಿಕೆಗೇಡಿನ ಸಂಗತಿ; ರಾಹುಲ್ ಗಾಂಧಿ


  ಕೇಂದ್ರ ಸರ್ಕಾರವು ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಸಿಎಎ ವಿರುದ್ಧದ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸಿಎಎ ನಿಯಮಾವಳಿಗಳು ಇದುವರೆಗೆ ರೂಪಿಸಲಾಗಿಲ್ಲ. ಹಾಗಾಗಿ ಸಿಎಎ ಜಾರಿ ಸದ್ಯಕ್ಕಿಲ್ಲವೆಂದು ಹೇಳಿದೆ. ಆದರೆ ಸದ್ದಿಲ್ಲದೇ ಸರ್ಕಾರ ಪೌರತ್ವ ನೀಡಲು ಅರ್ಜಿ ಕರೆದಿದೆ ಎಂದು ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಇಂಡಿಯನ್ ಯೂನಿಯನ್ ಆಫ್ ಮುಸ್ಲೀಂ ಲೀಗ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಸದ್ಯ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು 2 ವಾರಗಳ ನಂತರ ಆರಂಭಿಸಲಿದೆ.


  ಇದನ್ನೂ ಓದಿ: ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ಇಲ್ಲದೆಯೂ 2026ರ ವರೆಗೆ ಟಿಎಂಸಿಗಾಗಿ ಕೆಲಸ ಮಾಡಲಿದೆ I-PAC!


  ಕೇಂದ್ರ ಸರ್ಕಾರ ಬಹು ನಿರೀಕ್ಷಿತ ಸಿಎಎ, ಎನ್‌ಆರ್‌ಸಿ ಯೋಜನೆಗಳ ಜಾರಿ ಇದುವರೆಗೆ ಆರಂಭವಾಗಿಲ್ಲ ಎಂದು ಹೇಳಿಕೊಂಡು ಬರುತ್ತಿದೆ. ಆದರೆ ಸರ್ಕಾರ ಹಿಂಬಾಗಿಲ ಮೂಲಕ ಸದ್ದಿಲ್ಲದೇ CAA ಕಾನೂನನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ದೇಶದ ಅನೇಕ ಸಂಘಟನೆಗಳು ಮತ್ತು ಹೋರಾಟಗಾರರು ದೂರುತ್ತಿದ್ದಾರೆ. ಕೇಂದ್ರ ಸರ್ಕಾರ ಸಿಎಎ ಜಾರಿಗೊಳಿಸುತ್ತಿದೆಯೋ ಅಥವಾ ಇಲ್ಲವೋ ಎಂಬುದು ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಆರಂಭವಾದಾಗಲೇ ತಿಳಿದು ಬರಲಿದೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:MAshok Kumar
  First published: