HOME » NEWS » National-international » SC FORMS COMMITTEE FOR TALKS WITH FARMERS AND PUT ON HOLD FARM LAWS SNVS

ಕೇಂದ್ರದ ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂ ತಡೆ; ಸಮಸ್ಯೆ ಇತ್ಯರ್ಥಕ್ಕೆ ಸಮಿತಿ ರಚನೆ

ನಮ್ಮ ಇತಿಮಿತಿ ಅಧಿಕಾರದಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಯತ್ನಿಸುತ್ತೇವೆ. ಸದ್ಯ ಮೂರು ಕೃಷಿ ಕಾಯ್ದೆಗಳನ್ನ ಜಾರಿಯಾಗದಂತೆ ತಡೆಯುವ ಮತ್ತು ತಜ್ಞರ ಸಮಿತಿ ರಚನೆ ಮಾಡುವ ನಮ್ಮ ಅಧಿಕಾರವನ್ನು ಬಳಸುತ್ತಿದ್ದೇವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

news18
Updated:January 12, 2021, 2:23 PM IST
ಕೇಂದ್ರದ ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂ ತಡೆ; ಸಮಸ್ಯೆ ಇತ್ಯರ್ಥಕ್ಕೆ ಸಮಿತಿ ರಚನೆ
ಸರ್ವೋಚ್ಚ ನ್ಯಾಯಾಲಯ
  • News18
  • Last Updated: January 12, 2021, 2:23 PM IST
  • Share this:
ನವದೆಹಲಿ(ಜ. 12): ರೈತರ ಆಕ್ರೋಶ ಮತ್ತು ಪ್ರತಿಭಟನೆಗೆ ಕೇಂದ್ರದ ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಕೃಷಿ ಕಾಯ್ದೆಗಳ ವಿರುದ್ಧ ಸಲ್ಲಿಸಲಾಗಿರುವ ವಿವಿಧ ಅರ್ಜಿಗಳ ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ನ್ಯಾಯಪೀಠ, ಮುಂದಿನ ಆದೇಶದವರೆಗೂ ಈ ಕಾಯ್ದೆಗಳನ್ನ ಜಾರಿಗೆ ತರಬಾರದೆಂದು ತಡೆ ನೀಡಿ ಆದೇಶಿಸಿದೆ. ಇದೇ ವೇಳೆ, ಸಮಸ್ಯೆ ಇತ್ಯರ್ಥಕ್ಕಾಗಿ ರೈತರೊಂದಿಗೆ ಸಂಧಾನ ನಡೆಸಲು ಸರ್ವೋಚ್ಚ ನ್ಯಾಯಾಲಯ ಕೃಷಿ ತಜ್ಞರ ಸಮಿತಿ ರಚಿಸಿದೆ.

“ಇದು ಸಾವು ಬದುಕಿನ ವಿಚಾರಗಳಾಗಿವೆ. ಕೃಷಿ ಕಾಯ್ದೆಯ ಸಿಂಧುತ್ವದ ಬಗ್ಗೆ ಪ್ರಶ್ನೆ ಇದೆ. ಹಾಗೆಯೇ, ಪ್ರತಿಭಟನೆಗಳಿಂದ ಸಾರ್ವಜನಿಕರ ಜೀವ ಮತ್ತು ಆಸ್ತಿಯ ರಕ್ಷಣೆ ವಿಚಾರದ ಬಗ್ಗೆಯೂ ಆತಂಕ ಇದೆ. ನಮಗೆ ಇರುವ ಅಧಿಕಾರದ ಪರಿಧಿಯಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸುತ್ತಿದ್ದೇವೆ. ಶಾಸನವನ್ನು ಅಮಾನತಿನಲ್ಲಿಟ್ಟು ಒಂದು ಸಮಿತಿ ರಚಿಸುವ ನಮ್ಮ ಅಧಿಕಾರವನ್ನು ಉಪಯೋಗಿಸುತ್ತಿದ್ದೇವೆ” ಎಂದು ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಹೇಳಿದ್ದಾರೆ.

“ಈ ಸಮಿತಿ ನಮಗಾಗಿ ಇರಲಿದೆ. ಸಮಸ್ಯೆಗೆ ಪರಿಹಾರ ಅಪೇಕ್ಷಿಸುವ ನೀವೆಲ್ಲರೂ ಈ ಸಮಿತಿ ಮುಂದೆ ಬರಬೇಕಾಗುತ್ತದೆ. ಈ ಸಮಿತಿ ನಿಮ್ಮನ್ನ ಶಿಕ್ಷಿಸುವುದಾಗಲೀ ಅಥವಾ ಆದೇಶಿಸುವುದಾಗಲೀ ಮಾಡುವುದಿಲ್ಲ. ನಿಮ್ಮ ವಿಚಾರಗಳನ್ನ ಆಲಿಸಿ ನಮಗೆ ವರದಿ ಸಲ್ಲಿಸುವ ಕೆಲಸ ಮಾಡುತ್ತದೆ ಅಷ್ಟೇ” ಎಂದು ಸಿಜೆಐ ರೈತರಿಗೆ ಭರವಸೆ ನೀಡಿದ್ಧಾರೆ.

ಇದನ್ನೂ ಓದಿ: Farmers Protest: ರೈತರು ಆಯೋಜಿಸಿರುವ ಜನವರಿ 26ರ ಟ್ರ್ಯಾಕ್ಟರ್​ ರ‍್ಯಾಲಿಯನ್ನು ತಡೆಯುವಂತೆ ಸುಪ್ರೀಂಗೆ ಕೇಂದ್ರ ಸರ್ಕಾರ ಮನವಿ

ಇದೇ ವೇಳೆ, ಜನವರಿ 26ರಂದು ನವದೆಹಲಿಯಲ್ಲಿ ಗಣರಾಜ್ಯೋತ್ಸವ ಪೆರೇಡ್ ವೇಳೆ ಟ್ರಾಕ್ಟರ್ ರ್ಯಾಲಿ ನಡೆಸದಂತೆ ರೈತರಿಗೆ ತಿಳಿಸಬೇಕೆಂದು ದೆಹಲಿ ಪೊಲೀಸ್ ಮಾಡಿಕೊಂಡ ಮನವಿ ಮೇರೆಗೆ ಸುಪ್ರೀಂ ನ್ಯಾಯಪೀಠ ಇಂದು ರೈತ ಸಂಘಟನೆಗೆ ನೋಟೀಸ್ ನೀಡಿದೆ.

ನಿನ್ನೆ ಪ್ರಾರಂಭವಾದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಕೇಂದ್ರದ ಮೂರು ಕೃಷಿ ಕಾಯ್ದೆಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರದ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಕೃಷಿ ಕಾಯ್ದೆಗಳನ್ನ ಹಿಂಪಡೆಯಲು ಯಾಕೆ ಸಾಧ್ಯ ಇಲ್ಲ ಎಂದು ಪ್ರಶ್ನಿಸಿತ್ತು. ಸುಪ್ರೀಂ ಕೋರ್ಟ್ ಆಕ್ಷೇಪಿಸಿದರೂ ಕೇಂದ್ರ ಸರ್ಕಾರ ತನ್ನ ಕೃಷಿ ಕಾಯ್ದೆಗಳನ್ನ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ತನ್ನ ಹಠ ಮುಂದುವರಿಸಿದೆ. ಕೃಷಿ ಕಾಯ್ದೆಗಳನ್ನ ಮಾತ್ರ ಹಿಂಪಡೆಯುವುದಿಲ್ಲ. ಬೇಕಿದ್ದರೆ ಕಾಯ್ದೆಯಲ್ಲಿ ತಿದ್ದುಪಡಿ ತರಲು ಸಿದ್ಧ ಎಂಬುದು ಕೇಂದ್ರದ ವಾದವಾಗಿದೆ. ಆದರೆ, ಪ್ರತಿಭಟನೆ ನಡೆಸುತ್ತಿರುವ ರೈತರು ಕೂಡ ಕೃಷಿ ಕಾಯ್ದೆಗಳನ್ನ ಸಂಪೂರ್ಣವಾಗಿ ಹಿಂಪಡೆಯಬೇಕು ಎಂದು ಹಠ ತೊಟ್ಟಿದ್ದಾರೆ. ಹೀಗಾಗಿ, ಸರ್ಕಾರ ಮತ್ತು ರೈತರ ಮಧ್ಯೆ ಎಂಟು ಬಾರಿ ನಡೆದ ಮಾತುಕತೆ ಯಾವುದೇ ಫಲಕೊಡಲು ವಿಫಲವಾಗಿದೆ.
Published by: Vijayasarthy SN
First published: January 12, 2021, 2:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories