ಆಗಸ್ಟಾವೆಸ್ಟ್​ಲ್ಯಾಂಡ್ ಪ್ರಕರಣ: ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ


Updated:February 13, 2018, 12:11 PM IST
ಆಗಸ್ಟಾವೆಸ್ಟ್​ಲ್ಯಾಂಡ್ ಪ್ರಕರಣ: ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ಸುಪ್ರೀಂನಲ್ಲಿ ವಜಾ

Updated: February 13, 2018, 12:11 PM IST
ನವದೆಹಲಿ(ಫೆ. 13): ಛತ್ತಿಸ್​ಗಡದ ಬಿಜೆಪಿ ಸರಕಾರಕ್ಕೆ ನಿರಾಳ ತರುವ ಸುದ್ದಿ ಬಂದಿದೆ. ಛತ್ತೀಸ್​ಗಡ ಸರಕಾರದ ವಿರುದ್ಧ ಆರೋಪವಿರುವ ಆಗಸ್ಟಾವೆಸ್ಟ್​​ಲ್ಯಾಂಡ್ ಹೆಲಿಕಾಪ್ಟರ್ ಅವ್ಯವಹಾರ ಪ್ರಕರಣವೊಂದರಲ್ಲಿ ತನಿಖೆಗೆ ಆದೇಶಿಸಲು ಸುಪ್ರೀಂಕೋರ್ಟ್ ನಕಾರ ತೋರಿದೆ. ತನಿಖೆಗೆ ಒತ್ತಾಯಿಸಿ ಸ್ವರಾಜ್ ಅಭಿಯಾನ್ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯ ಇಂದು ತಿರಸ್ಕರಿಸಿದೆ. ಈ ಪ್ರಕರಣದಲ್ಲಿ ರಮಣ್ ಸಿಂಗ್ ಅವರ ಪುತ್ರನ ಹೆಸರು ತಳುಕಿಹಾಕಿಕೊಂಡಿದೆ.

ಏನಿದು ಪ್ರಕರಣ?
ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಪಿಐಎಲ್ ಪ್ರಕಾರ, 2008ರ ಜುಲೈನಲ್ಲಿ ಛತ್ತೀಸ್​ಗಡ ಸಿಎಂ ರಮಣ್ ಸಿಂಗ್ ಅವರ ಮಗ ಅಭಿಷೇಕ್ ಸಿಂಗ್ ಅವರ ಹೆಸರಲ್ಲಿ ಬ್ರಿಟಿಷ್ ವರ್ಜಿನ್ ಐಲೆಂಡ್ಸ್​ನಲ್ಲಿ ಬ್ಯಾಂಕ್ ಅಕೌಂಟ್ ತೆರೆಯಲಾಗಿದೆ. ಅದೇ ವರ್ಷ ಆಗಸ್ಟ್ 1ರಂದು ಆಗಸ್ಟಾವೆಸ್ಟ್​ಲ್ಯಾಂಡ್ ಖರೀದಿ ಒಪ್ಪಂದದಲ್ಲಿ ಭಾಗಿಯಾಗಿದ್ದ ಸಂಸ್ಥೆಯೊಂದು ಮುಚ್ಚಲ್ಪಡುತ್ತದೆ. ಒಪ್ಪಂದದಲ್ಲಿ ನೀಡಲಾದ ಕಮಿಷನ್ ಹಣವು ಅಭಿಷೇಕ್ ಸಿಂಗ್ ಅವರ ವಿದೇಶೀ ಬ್ಯಾಂಕ್ ಅಕೌಂಟ್​ಗೆ ತಲುಪಿದೆ ಎಂಬುದು ಪ್ರಮುಖ ಆರೋಪವಾಗಿದೆ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ