Shah Rukh Khan ಸಿನಿಮಾ ನೋಡಿ ಮೋಸ ಹೋದ ಅಭಿಮಾನಿ: 15 ಸಾವಿರ ದಂಡ ವಿಧಿಸಿದ ಸುಪ್ರೀಂ ಕೋರ್ಟ್

ಆಫ್ರೀನ್​ ಫಾತಿಮಾ ಜೈದಿ ಎಂಬ ಮಹಿಳೆ ವೃತ್ತಿಯಲ್ಲಿ ಶಿಕ್ಷಕಿ. ಮಹಾರಾಷ್ಟ್ರದ ಔರಂಗಾಬಾದ್​ನವರು. ಇವರು 2017ರಲ್ಲಿ ತೆರೆ ಕಂಡ ಸಿನಿಮಾ ಫ್ಯಾನ್​ ಸಿನಿಮಾ ನೋಡಿ, ಅದರಿಂದ ತಮಗೆ ಮೋಸ ಆಗಿದೆ ಎಂಬ ಭಾವನೆ ಇದೆ ಎಂದು ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಫ್ಯಾನ್ ಸಿನಿಮಾದ ಚಿತ್ರದಲ್ಲಿ ಶಾರುಖ್​ ಖಾನ್​ (Photo Credits: YRF/YouTube)

ಫ್ಯಾನ್ ಸಿನಿಮಾದ ಚಿತ್ರದಲ್ಲಿ ಶಾರುಖ್​ ಖಾನ್​ (Photo Credits: YRF/YouTube)

  • Share this:
ರಾಜಕೀಯ ಹಾಗೂ ಕ್ರೀಡೆಗೆ ಯಾವ ರೀತಿಯ ಉಪಚಾರ ಸಿಗುತ್ತೋ ಅದೇ ರೀತಿಯ ಟ್ರೀಟ್​ಮೆಂಟ್​ ಭಾರತದಲ್ಲಿ ಸಿನಿಮಾಗೂ ಸಿಗುತ್ತದೆ. ಬಾಲಿವುಡ್​ ಸಿನಿಮಾಗಳು (Bollywood Movies) ಎಂದರೆ ವಿದೇಶಗಳಲ್ಲೂ ಜನರು ಮುಗಿ ಬಿದ್ದು ವೀಕ್ಷಿಸುತ್ತಾರೆ. ಇಷ್ಟರ ಮಟ್ಟಿಗೆ ಈ ಬಿ-ಟೌನ್​ ಸಿನಿಮಾಗಳಿಗೆ ವೀಕ್ಷಕ ವರ್ಗವಿದೆ. ಜನರು ತಮ್ಮ ಜೇಬಿನಿಂದ ತೆಗೆದ ಹಣವನ್ನು ಖುಷಿಯಿಂದ ಸಿನಿಮಾ ವೀಕ್ಷಿಸಲು ಖರ್ಚು ಮಾಡುತ್ತಾರೆ. ಹೀಗೆ ವೆಚ್ಚ ಮಾಡಿದ ಹಣದಿಂದ ನಿರೀಕ್ಷಿಸಿದ ಮಟ್ಟದಲ್ಲಿ ಮನರಂಜನೆ ಸಿಗದೇ ಹೋದರೆ, ಬೇಸರದಿಂದ ಚಿತ್ರಮಂದಿರದಿಂದ ಹೊರ ಬರುತ್ತಾರೆ. ಆದರೆ, ಇಲ್ಲೊಬ್ಬರು ಸಿನಿಪ್ರಿಯರು (Viewers) ಸಿನಿಮಾ ನೋಡಿ ತಮಗೆ ಮೋಸ ಆಯಿತು ಎಂದು ಕೋರ್ಟ್​ ಮೆಟ್ಟಿಲೇರಿ, ತಮಗಾದ ವಂಚನೆಗೆ ಪರಿಹಾರವನ್ನೂ ಪಡೆದುಕೊಂಡಿದ್ದಾರೆ. ಹೌದು, ಇಂತಹದೊಂದು ಘಟನೆ ನಮ್ಮ ದೇಶದಲ್ಲೇ ನಡೆದಿದೆ. ಅದು ಕೂಡ ಶಾರುಖ್ ಖಾನ್ (Shah Rukh Khan) ಅವರ ಸಿನಿಮಾ ನೋಡಿ ತನಗೆ ಮೋಸ ಆಯಿತು ಎಂದು ಅವರು ನ್ಯಾಯಾಲಯದ ಮೆಟ್ಟಿಲೇರಿ, ಈಗ ಪರಿಹಾರ ಸಹ ಪಡೆದುಕೊಂಡಿದ್ದಾರೆ. 

ಆಫ್ರೀನ್​ ಫಾತಿಮಾ ಜೈದಿ ಎಂಬ ಮಹಿಳೆ ವೃತ್ತಿಯಲ್ಲಿ ಶಿಕ್ಷಕಿ. ಮಹಾರಾಷ್ಟ್ರದ ಔರಂಗಾಬಾದ್​ನವರು. ಇವರು 2017ರಲ್ಲಿ ತೆರೆ ಕಂಡ ಸಿನಿಮಾ ಫ್ಯಾನ್​ ಸಿನಿಮಾ ನೋಡಿ, ಅದರಿಂದ ತಮಗೆ ಮೋಸ ಆಗಿದೆ ಎಂಬ ಭಾವನೆ ಇದೆ ಎಂದು ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಯಶ್​ ರಾಜ್​ ಫಿಲಂಸ್​ ನಿರ್ಮಾಣದ ಫ್ಯಾನ್​ ಸಿನಿಮಾ 2017ರಲ್ಲಿ ತೆರೆ ಕಂಡಿತ್ತು. ಈ ಸಿನಿಮಾದಲ್ಲಿ ಶಾರುಖ್​ ಖಾನ್ ನಾಯಕನಾಗಿ ನಟಿಸಿದ್ದರು. ಈ ಚಿತ್ರದ ಟ್ರೇಲರ್​ನಲ್ಲಿ 'ಜಬ್ರಾ ಫ್ಯಾನ್.....'​ ಎನ್ನುವ ಹಾಡನ್ನು ತೋರಿಸಲಾಗಿತ್ತು. ಈ ಹಾಡನ್ನು ಟಿವಿಯಲ್ಲೂ ಸಹ ಬಿತ್ತರಿಸಲಾಗಿತ್ತು. ಆದರೆ ಈ ಹಾಡನ್ನು ನೋಡಿ ಖುಷಿ ಪಟ್ಟು ಸಿನಿಮಾ ನೋಡಲು ಹೋದವರಿಗೆ ಚಿತ್ರ ಮಂದಿರದಲ್ಲಿ ಈ ಹಾಡು ನೋಡಲು ಸಿಗಲೇ ಇಲ್ಲವಂತೆ.ಸಿನಿಮಾದ ಟ್ರೇಲರ್​ನಲ್ಲಿದ್ದ ಹಾಡನ್ನು ನೋಡಿ ಕುಟುಂಬದೊಂದಿಗೆ ಫ್ಯಾನ್​ ಚಿತ್ರ ವೀಕ್ಷಿಸಲು ಆಫ್ರೀನ್​ ಫಾತಿಮಾ ಜೈದಿ ನಿರ್ಧರಿಸಿ, ಚಿತ್ರಮಂದಿರಕ್ಕೆ ಹೋಗಿದ್ದಾರೆ. ಆ ಸಿನಿಮಾ ನೋಡಿ ಬಂದ ನಂತರ ಅವರ ಮಕ್ಕಳು ಆ ಹಾಡು ಬರಲೇ ಇಲ್ಲ ಅಂತ ಅಂದು ರಾತ್ರಿ ಊಟ ಮಾಡದೆ ಹಾಗೆಯೇ ಬೇಸರದಿಂದ ಮಲಗಿದರೆಂತೆ. ನಂತರ ಅವರಿಗೆ ಗ್ರ್ಯಾಸ್ಟ್ರಿಕ್ ಆಗಿ ಅವರು ಆಸ್ಪತ್ರೆ ಸೇರುವಂತಾಗಿತ್ತಂತೆ.

ಇದನ್ನೂ ಓದಿ:  ಟ್ವಿಟರ್​ನಲ್ಲಿ ಟ್ರೆಂಡ್​ ಆಗುತ್ತಿದೆ Boycott Shah Rukh Khan: ಕಾರಣವೇನು ಗೊತ್ತಾ..?

ಮೊದಲು ಈ ಸಿನಿಮಾ ನೋಡಿ ತನಗೆ ಮೋಸ ಆಗಿದೆ ಎಂದು ಅವರು, ಜಿಲ್ಲಾ ವೇದಿಕೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅದು ಅಲ್ಲಿ ತಿರಸ್ಕೃತಗೊಂಡ ನಂತರ, ಮಹಾರಾಷ್ಟ್ರದ ರಾಜ್ಯ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದಾರೆ. ಅಲ್ಲಿ ಯಶ್​ ರಾಜ್​ ಫಿಲಂಸ್​ಗೆ 10 ಸಾವಿರ ಹಾಗೂ ಜೈದಿ ಅವರು ಈ ಪ್ರಕರಣದಲ್ಲಿ ಖರ್ಚು ಮಾಡಿದ್ದ 5 ಸಾವಿರವನ್ನು ಸೇರಿಸಿ ಒಟ್ಟಾರೆ 15 ಸಾವಿರ ನೀಡುವಂತೆ ಆದೇಶ ನೀಡಿದೆ. ಆದರೆ ಈ ಆದೇಶವನ್ನು ಪ್ರಶ್ನಿಸಿ ಯಶ್​ ರಾಜ್​ ಫಿಲಂಸ್​ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಸಿನಿಮಾ ಟ್ರೇಲರ್​ನಲ್ಲಿ ಒಂದು ತೋರಿಸಿ, ಸಿನಿಮಾದಲ್ಲಿ ಅದನ್ನು ತೋರಿಸದೇ ಇದ್ದ ಕಾರಣಕ್ಕೆ ದಾಖಲಾಗಿದ್ದ ಈ ಪ್ರಕರಣದಲ್ಲಿ ಮಹಾರಾಷ್ಟ್ರದ ರಾಜ್ಯ ಗ್ರಾಹಕರ ವೇದಿಕೆ ನೀಡಿದ್ದ ಆದೇಶವನ್ನೇ ಸುಪ್ರೀಂಕೋರ್ಟ್​ ಸಹ ಎತ್ತಿ ಹಿಡಿದಿದೆ. ನಂತರ ವಂಚನೆಯಾಗಿದೆ ಎಂದು ಅರ್ಜಿ ಸಲ್ಲಿಸಿದ್ದ ಶಿಕ್ಷಿಗೆ 15 ಸಾವಿರ ಪರಿಹಾರ ನೀಡುವಂತೆ ನಿರ್ದೇಶ ನೀಡಿದೆ.

ಇದನ್ನೂ ಓದಿ: Shah Rukh Khan, Salman Khan: ಶಾರುಖ್ ಖಾನ್ ತಂದೂರಿ ಚಿಕನ್ ಮಾತ್ರ ತಿಂತಾರಂತೆ, ಆದ್ರೆ ಸಲ್ಮಾನ್ ಭಕ್ಷ್ಯ ಭೋಜನ ಪ್ರಿಯ..!

ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡು ಮಾಡಿದ್ದ ಫ್ಯಾನ್​ ಸಿನಿಮಾ ಬಾಕ್ಸಾಫಿಸ್​ನಲ್ಲಿ ನೆಲ ಕಚ್ಚಿ ಸುದ್ದಿಗೆ ಇಲ್ಲದಂತಾಗಿತ್ತು. ಈಗ ಸುಪ್ರೀಂ ಕೋರ್ಟಿನಿಂದ ದಂಪ ಹಾಕಿಸಿಕೊಂಡ ಕಾರಣಕ್ಕೆ ಸುದ್ದಿಯಲ್ಲಿದೆ. 15 ಸಾವಿರ ದಂಡ ಹಾಕಿಕೊಂಡ ಕಾರಣಕ್ಕೆ ಬಾಲಿವುಡ್​ನ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾದ ಯಶ್​ ರಾಜ್​ ಫಿಲಂಸ್​ನ ಪ್ರತಿಷ್ಠೆಗೆ ಪೆಟ್ಟಿ ಬಿದ್ದಂತಾಗಿದೆ.
Published by:Anitha E
First published: