HOME » NEWS » National-international » SC ASKS LAWYERS TO MEDIATE WITH SHAHEEN BAGH DEMONSTRATORS GNR

ಕನ್ನಡಿಗ ವಕೀಲ ಸಂಜಯ್ ಹೆಗ್ಡೆಗೆ ಶಾಹೀನ್​​​ ಬಾಗ್ ಪ್ರತಿಭಟನಾಕಾರರ ಮನವೊಲಿಸಲು ಸುಪ್ರೀಂಕೋರ್ಟ್ ಮನವಿ

ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟನೆ ಮೂಲಕ ತಮ್ಮ ನಿಲುವು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ. ಹಾಗಾಗಿ ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಶಾಹೀನ್​​ ಬಾಗ್​​ ಪ್ರತಿಭಟನಾಕಾರರ ಮನವೊಲಿಸಿ ಎಂದು ವಕೀಲ ಸಂಜಯ್​​ ಹೆಗ್ಡೆಯವರಿಗೆ ಸುಪ್ರೀಂಕೋರ್ಟ್​​ ವಿನಂತಿ ಮಾಡಿದೆ.

news18-kannada
Updated:February 17, 2020, 3:31 PM IST
ಕನ್ನಡಿಗ ವಕೀಲ ಸಂಜಯ್ ಹೆಗ್ಡೆಗೆ ಶಾಹೀನ್​​​ ಬಾಗ್ ಪ್ರತಿಭಟನಾಕಾರರ ಮನವೊಲಿಸಲು ಸುಪ್ರೀಂಕೋರ್ಟ್ ಮನವಿ
ಶಾಹೀನ್​​ ಬಾಗ್​​ ಹೋರಾಟ
  • Share this:
ನವದೆಹಲಿ(ಫೆ.17): ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಲ್ಲಿನ ಶಾಹೀನ್​​ ಬಾಗ್​​ನಲ್ಲಿ ಹೋರಾಟ ಮಾಡುತ್ತಿರುವ ಪ್ರತಿಭಟನಾಕಾರರ ಮನವೊಲಿಸುವಂತೆ ಕನ್ನಡಿಗ ವಕೀಲ ಸಂಜಯ್​​ ಹೆಗ್ಡೆಯವರಿಗೆ ಸುಪ್ರೀಂಕೋರ್ಟ್​ ವಿನಂತಿದೆ. ಶಾಹೀನ್​​ ಬಾಗ್ ಪ್ರತಿಭಟನಾಕಾರರ ತೆರವುಗೊಳಿಸಿ ಎಂದು ಸ್ಥಳೀಯರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಈ ಸಂಬಂಧದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​​, "ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟನೆ ಮೂಲಕ ತಮ್ಮ ನಿಲುವು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ. ರಸ್ತೆ ತಡೆ ಹಿಡಿಯುವ ಹಕ್ಕೂ ಯಾರಿಗೂ ಇಲ್ಲ. ಇದು ನಾಳೆ ಯಾವುದಾದರೂ ಅನಾಹುತಕ್ಕೆ ಕಾರಣವಾಗಬುದು. ಹಾಗಾಗಿ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಮುನ್ನೆಚ್ಚರಿಕೆಯಿಂದ ಮಧ್ಯಪ್ರವೇಶಿಸಿ ಶಾಹೀನ್​​ ಬಾಗ್​​ ಪ್ರತಿಭಟನಾಕಾರರ ಮನವೊಲಿಸಿ" ಎಂದು ವಕೀಲ ಸಂಜಯ್​​ ಹೆಗ್ಡೆಯವರಿಗೆ ಸುಪ್ರೀಂಕೋರ್ಟ್​​ ಮನವಿ ಮಾಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಾಗಿನಿಂದಲೂ ಶಾಹೀನ್​ ಬಾಗ್​ನಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಲೇ ಇದೆ. ನಿನ್ನೆಯೂ ಕೇಂದ್ರ ಗೃಹ ಸಚಿವ ಅಮಿತ್​​ ಶಾರ ನಿವಾಸದತ್ತ ಜಾಥ ಹೊರಡುವ ಮೂಲಕ ಹೋರಾಟ ತೀವ್ರಗೊಳಿಸಲು ಮುಂದಾಗಿದ್ದ ಶಾಹೀನ್​ ಬಾಗ್​ ಪ್ರತಿಭಟನಾಕಾರರಿಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದರು. ಹಾಗಾಗಿ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಭೇಟಿಗೆ ಅವಕಾಶ ಸಿಕ್ಕ ನಂತರವೇ ಜಾಥಾ ಮಾಡುವುದಾಗಿ ನಿರ್ಧರಿಸಿದ ಪ್ರತಿಭಟನಾಕಾರರು ಶಾಹೀನ್ ಬಾಗ್​ನಲ್ಲೇ ತಮ್ಮ ಹೋರಾಟ ಮುಂದುವರಿಸಿದ್ದರು.

ಈ ಹಿಂದೆ ಕಳೆದ ಎರಡು ತಿಂಗಳಿನಿಂದ ಶಾಹೀನ್​​ ಬಾಗ್​​ನಲ್ಲಿ ಸಿಎಎ ಮತ್ತು ಎನ್​​ಆರ್​ಸಿ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಪ್ರತಿಭಟನೆಯಿಂದ​ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಪ್ರತಿಭಟನಾಕಾರರ ತೆರವಿಗೆ ಆದೇಶಿಸಿ ಎಂದು ಬಿಜೆಪಿ ನಾಯಕ ನಂದಕಿಶೋರ್ ಗಾರ್ಗ್ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಅಮಿತ್​​ ಶಾ ನಿವಾಸದತ್ತ ಜಾಥಾ ಹೊರಟ ಶಾಹೀನ್​​ ಬಾಗ್​​​ ಪ್ರತಿಭಟನಾಕಾರರು: ಪೊಲೀಸರಿಂದ ತಡೆ

ಶಾಹೀನ್​ ಬಾಗ್​​ ಪ್ರತಿಭಟನೆಯಿಂದ ದೆಹಲಿ-ನೋಯ್ಡಾ ಹೆದ್ದಾರಿಯೂ ಬಹುತೇಕ ಬಂದ್ ಆದಂತಿದೆ. ದೆಹಲಿ ಪ್ರಮುಖ ರಸ್ತೆಗಳಿಗೆ ಹಾದು ಹೋಗುವ ಶಾಹೀನ್​​ ಬಾಗ್​​ನಲ್ಲೇ ನಿರಂತರ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಸಂಚಾರ ದಟ್ಟಣೆ ತೀವ್ರಗೊಂಡಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸುವಂತೆ ಸೂಚಿಸಿ ಎಂದು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

ಸಾರ್ವಜನಿಕರ ಹಿತಾಸಕ್ತಿ ದೃಷ್ಟಿಯಿಂದ ಶಾಹೀನ್​ ಬಾಗ್​​ನಲ್ಲಿ ನಡೆಯುತ್ತಿರುವ ಪ್ರತಿಭಟನೆ ನಿಲ್ಲಿಸುವಂತೆ ದೆಹಲಿ ಪೊಲೀಸರು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದರು. ಸುಮಾರು ದಿನಗಳಿಂದ ಶಾಹೀನ್ ಬಾಗ್​​ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ರಸ್ತೆಯು ನೋಯ್ಡಾ ಮತ್ತು ದೆಹಲಿ ನಡುವಿನ ಪ್ರಮುಖ ಸಂಪರ್ಕದ ಕೊಂಡಿಯಾಗಿದೆ. ನೀವು ಪ್ರತಿಭಟನೆ ಮೂಲಕ ಹೆದ್ದಾರಿಯನ್ನು ಸಂಪೂರ್ಣವಾಗಿ ತಡೆಹಿಡಿದಿರುವುದರಿಂದ ದೆಹಲಿ ಮತ್ತು ಎನ್​​ಸಿಆರ್​​ ನಿವಾಸಿಗಳಿಗೆ ತೊಂದರೆಯಾಗಲಿದೆ. ಹಿರಿಯ ನಾಗರಿಕರು ಮತ್ತು ತುರ್ತು ರೋಗಿಗಳು ಸೇರಿದಂತೆ ಶಾಲಾ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ಸಂಘಟಕರು ಅರ್ಥ ಮಾಡಿಕೊಳ್ಳಬೇಕೆಂದು ಎಂಬುದು ಪೊಲೀಸರ ಮನವಿಯಾಗಿತ್ತು.
First published: February 17, 2020, 2:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories