ಎನ್ಆರ್​ಸಿ ಸಂಯೋಜಕರ ಕೋಮು ಹೇಳಿಕೆ: ಅಸ್ಸಾಮ್ ಸರ್ಕಾರದಿಂದ ವಿವರಣೆ ಕೇಳಿದ ಸುಪ್ರೀಂ ಕೋರ್ಟ್

ಕೋಮುವಾದದ ಹೇಳಿಕೆಗಳನ್ನು ನೀಡುತ್ತಿರುವ ಎನ್​ಆರ್​ಸಿ ಅಸ್ಸಾಮ್ ಸಂಯೋಜಕ ಹಿತೇಶ್ ದೇವ್ ಶರ್ಮಾ ಅವರನ್ನು ಕಿತ್ತುಹಾಕಿ ಎಂದು ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.

news18
Updated:January 6, 2020, 1:18 PM IST
ಎನ್ಆರ್​ಸಿ ಸಂಯೋಜಕರ ಕೋಮು ಹೇಳಿಕೆ: ಅಸ್ಸಾಮ್ ಸರ್ಕಾರದಿಂದ ವಿವರಣೆ ಕೇಳಿದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್​.
  • News18
  • Last Updated: January 6, 2020, 1:18 PM IST
  • Share this:
ನವದೆಹಲಿ(ಜ. 06): ಅಸ್ಸಾಮ್ ರಾಜ್ಯದ ಎನ್​ಆರ್​ಸಿ ಸಂಯೋಜಕರು ಕೋಮುವಾದದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಅಸ್ಸಾಮ್ ಸರ್ಕಾರದಿಂದ ವಿವರಣೆ ಕೇಳಿದೆ. “ಅವರು ಆ ರೀತಿಯೆಲ್ಲಾ ಮಾತನಾಡಬಾರದು. ನೀವು(ಅಸ್ಸಾಮ್ ಸರ್ಕಾರ) ಇದಕ್ಕೆ ವಿವರಣೆ ನೀಡಬೇಕು. ನಿಮಗೆ ಏನಾದರೂ ಬೇಕಿರಬಹುದು. ಆದರೆ, ಅವರು ಇಂಥ ಮಾತುಗಳನ್ನೆಲ್ಲಾ ಆಡಬಾರದು” ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತಾಕೀತು ಮಾಡಿದೆ. ನಾಲ್ಕು ವಾರದೊಳಗೆ ವಿವರಣೆ ನೀಡಬೇಕೆಂದೂ ಆದೇಶಿಸಿದೆ.

ಅಸ್ಸಾಮ್ ಘಟಕದ ಎನ್​ಆರ್​​ಸಿ ಸಂಯೋಜಕ ಹಿತೇಶ್ ದೇವ್ ಸರ್ಮಾ ವಿರುದ್ಧ ಸುಪ್ರೀಂ ಕೋರ್ಟ್​​ನಲ್ಲಿ ದೂರು ದಾಖಲಾಗಿದೆ. ಇವರು ಕೋಮುಸೂಕ್ಷ್ಮ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವರನ್ನು ಸಂಯೋಜಕ ಸ್ಥಾನದಿಂದ ಕಿತ್ತುಹಾಕಬೇಕೆಂದು ಅರ್ಜಿ ಸಲ್ಲಿಕೆಯಾಗಿದೆ. ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ನೇತೃತ್ವದ ನ್ಯಾಯಪೀಠ ಈ ಅರ್ಜಿಯ ವಿಚಾರಣೆ ನಡೆಸಿ ಕೇಂದ್ರ ಮತ್ತು ಅಸ್ಸಾಮ್ ಸರ್ಕಾರಗಳಿಗೆ ನೋಟೀಸ್ ನೀಡಿದೆ.

ಇದನ್ನೂ ಓದಿ: ತೈಲ ಬೆಲೆ ಏರಿಕೆ; ಚಿನ್ನ ತೊಲಕ್ಕೆ 40 ಸಾವಿರ; ಷೇರುಪೇಟೆ ಅಲ್ಲೋಲಕಲ್ಲೋಲ

ಇದೇ ವೇಳೆ, ಎನ್​ಆರ್​ಸಿ ಪಟ್ಟಿಯಲ್ಲಿ ಅಪ್ಪ ಅಮ್ಮ ಇದ್ದರೂ 60 ಮಕ್ಕಳನ್ನು ಹೊರಗಿಟ್ಟಿರುವ ಬಗ್ಗೆ ದಾಖಲಾಗಿದ್ದು ಮತ್ತೊಂದು ಅರ್ಜಿಯ ವಿಚಾರಣೆಯನ್ನೂ ನ್ಯಾಯಪೀಠ ಇಂದು ನಡೆಸಿತು. ಹೀಗೇಕಾಯಿತು ಎಂದು ಸರ್ವೋಚ್ಚ ನ್ಯಾಯಪೀಠವು ಸರ್ಕಾರವನ್ನು ಪ್ರಶ್ನೆ ಮಾಡಿತು. ಪೌರತ್ವ ಹೊಂದಿರುವ ಪೋಷಕರ ಮಕ್ಕಳನ್ನು ಯಾವುದೇ ಕಾರಣಕ್ಕೂ ಬಂಧನ ಕೇಂದ್ರಗಳಿಗೆ ಕಳುಹಿಸುವಂತಿಲ್ಲ ಎಂದು ಕೋರ್ಟ್ ಅಪ್ಪಣೆ ಮಾಡಿತು.

ಕೇಂದ್ರ ಮತ್ತು ಅಸ್ಸಾಮ್ ಸರ್ಕಾರಗಳ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಇಂಥ ಮಕ್ಕಳನ್ನು ಅವರ ಪೋಷಕರಿಂದ ಬೇರ್ಪಡಿಸುವುದಿಲ್ಲ ಎಂದು ವಾಗ್ದಾನ ನೀಡಿದರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:January 6, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ