ಲವ್ ಜಿಹಾದ್ ಕಾನೂನು ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ; ಆದರೆ ತಡೆ ಇಲ್ಲ ಎಂದು ನ್ಯಾಯಾಲಯ

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾ.ಎಸ್​.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ, ಹೊಸ ಕಾನೂನಿನ ಸಂಬಂಧ ವಿಚಾರಣೆಗೆ ಅನುಮತಿ ನೀಡಿತು. ಆದರೆ, ತಡೆಯಾಜ್ಞೆ ನೀಡಲು ನಿರಾಕರಿಸಿತು.

ಸುಪ್ರೀಂಕೋರ್ಟ್​

ಸುಪ್ರೀಂಕೋರ್ಟ್​

 • Share this:
  ನವದೆಹಲಿ; ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಜಾರಿಗೆ ತಂದಿರುವ ಹೊಸ ವಿವಾದಾತ್ಮಕ 'ಲವ್ ಜಿಹಾದ್' ಕಾಯ್ದೆಗಳ ವಿರುದ್ಧದ ಅರ್ಜಿಗಳನ್ನು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ಆದರೆ ಈ ಕಾಯ್ದೆಗಳಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಅಂತರ್ ಧರ್ಮೀಯ ವಿವಾಹಗಳಿಗಾಗಿ ಧಾರ್ಮಿಕ ಮತಾಂತರ ಮಾಡುವುದನ್ನು ತಡೆಯಲು ತಂದಿರುವ ಕಾಯ್ದೆಗಳು ವಿವಾದಕ್ಕೆ ಕಾರಣವಾಗಿವೆ. ಈ ಸಂಬಂಧ ಕಾನೂನುಗಳಿಗೆ ತಡೆಯಾಜ್ಞೆ ನೀಡಲು ಮುಖ್ಯ ನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ನಿರಾಕರಿಸಿದರೂ, ಎರಡು ವಿಭಿನ್ನ ಅರ್ಜಿಗಳಿಗೆ ಸಂಬಂಧಿಸಿದಂತೆ ಎರಡೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

  ವಕೀಲ ವಿಶಾಲ್ ಠಾಕ್ರೆ ಮತ್ತು ಎನ್‌ಜಿಒ ನಾಗರಿಕರು ಸಲ್ಲಿಸಿರುವ ಮನವಿಯಲ್ಲಿ, ಉತ್ತರಪ್ರದೇಶದ ಕಾನೂನುಬಾಹಿರ ಧಾರ್ಮಿಕ ಪರಿವರ್ತನೆ ಸುಗ್ರೀವಾಜ್ಞೆ, 2020 ಮತ್ತು ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸುವ ಉತ್ತರಾಖಂಡದ ಸ್ವಾತಂತ್ರ್ಯ ಕಾಯ್ದೆ 2018 ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದೆ. 


  ಇದನ್ನು ಓದಿ: ಸಾಮಾನ್ಯ ಜನರ ಹಣ ಸುಲಿಗೆ ಮಾಡುವ ಬದಲು ಮನೆಯಲ್ಲಿ ಇರೋದು ಒಳ್ಳೆಯದು; ಎಚ್.ಡಿ.ಕುಮಾರಸ್ವಾಮಿ

  ಎನ್​ಜಿಒ ಪರ ಹಾಜರಾದ ಹಿರಿಯ ವಕೀಲ ಸಿಯು ಸಿಂಗ್, ನಿವೃತ್ತ ನ್ಯಾಯಮೂರ್ತಿ ದೀಪಕ್ ಗುಪ್ತಾ ಅವರು ನೀಡಿದ್ದ ತೀರ್ಪನ್ನು ಉಲ್ಲೇಖಿಸಿದರು. ಇದೇ ರೀತಿಯ ಕಾನೂನುಗಳು ಬೇರೆ ರಾಜ್ಯಗಳಲ್ಲಿಯೂ ಸಿದ್ಧವಾಗುತ್ತಿದೆ ಎಂದು ತಿಳಿಸಿದರು. ಈ ಕಾನೂನುಗಳಲ್ಲಿನ ನಿಯಮಗಳು ದಬ್ಬಾಳಿಕೆ ಮತ್ತು ಭಯಾನಕ ಸ್ವರೂಪದ್ದಾಗಿವೆ. ಜನರು ಮದುವೆಯಾಗಲು ಸರ್ಕಾರದ ಪೂರ್ವಾನುಮತಿ ಪಡೆಯುವಂತಾಗಿದೆ ಎಂದು ಆರೋಪಿಸಿದರು.

  ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾ.ಎಸ್​.ಎ.ಬೊಬ್ಡೆ ನೇತೃತ್ವದ ನ್ಯಾಯಪೀಠ, ಹೊಸ ಕಾನೂನಿನ ಸಂಬಂಧ ವಿಚಾರಣೆಗೆ ಅನುಮತಿ ನೀಡಿತು. ಆದರೆ, ತಡೆಯಾಜ್ಞೆ ನೀಡಲು ನಿರಾಕರಿಸಿತು.
  Published by:HR Ramesh
  First published: