ದೇಶದ ಅತಿದೊಡ್ಡ ಬ್ಯಾಂಕ್ ಜಾಲ ಎಸ್ಬಿಐ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ತನ್ನ ಗ್ರಾಹಕರಿಗೆ ಸೋಮವಾರ ಬೆಳಿಗ್ಗೆಯೇ ಅತ್ಯಂತ ಜರೂರಾದ ಎಚ್ಚರಿಕೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಆನ್ಲೈನ್ ವಂಚನೆ, ಸೈಬರ್ ಕ್ರೈಂ ನಂತಹ ಘಟನೆಗಳು ಬ್ಯಾಂಕಿಂಗ್ ಕ್ಷೇತ್ರವನ್ನು ಅಲುಗಾಡಿಸಿದ್ದು, ಅಮಾಯಕ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ಈ ಗ್ರಾಹಕರ ಬಗ್ಗೆ ತಿಳಿಯಿರಿ (ಕೆವೈಸಿ) ಮೂಲಕ ಅನೇಕ ಜನರನ್ನು ಮೋಸಗೊಳಿಸಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿವೆ.
ತನ್ನ ಟ್ವಿಟರ್ ಖಾತೆಯ ಮೂಲಕ ಗ್ರಾಹಕರಿಗೆ ಎಚ್ಚರಿಕೆ ನೀಡಿರುವ ಎಸ್ಬಿಐ. ನಿಮಗೆ ಬರುವ ಕೆವೈಸಿ ಅಪ್ಡೇಟ್ ಲಿಂಕ್ಗಳ ಬಗ್ಗೆ ಎಚ್ಚರದಿಂದ ಇರಿ ಎಂದು ಹೇಳಿದೆ.
ಎಸ್ಬಿಐ ಹೇಳಿದೆ ’’ಮೋಸಗಾರರು ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಸಣ್ಣ ಸಂದೇಶ ಕಳುಹಿಸುತ್ತಾರೆ, ನಾವು ಬ್ಯಾಂಕಿನ ಉದ್ಯೋಗಿಗಳು ಅಥವಾ ಬ್ಯಾಂಕಿಗೆ ಸಂಬಂಧಪಟ್ಟವರು ಎಂದು ಹೇಳಿ ನಿಮ್ಮ ಎಲ್ಲಾ ಮಾಹಿತಿಯನ್ನು ಪಡೆಯುತ್ತಾರೆ. ಈ ರೀತಿ ನಿಮ್ಮನ್ನು ಮೋಸಗೊಳಿಸುತ್ತಾರೆ.
https://twitter.com/TheOfficialSBI/status/1414489922241658883
ಕೆವೈಸಿ ಮೂಲಕ ಮೋಸ ಮಾಡುತ್ತಿರುವುದು ನಿಜವಾದ ಸಂಗತಿಯಾಗಿದೆ. ವಂಚಕರು ನಿಮ್ಮ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಿ ನಿಮ್ಮ ಮಾಹಿತಿ ತೆಗೆದುಕೊಂಡು, ನಿಮ್ಮ ಹಣ ಲಪಟಾಯಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಟ್ವಿಟರ್ನಲ್ಲಿ ಎಸ್ಬಿಐ ಬರೆದುಕೊಂಡಿದೆ.
ಅಲ್ಲದೇ ಬ್ಯಾಂಕ್ ತನ್ನ ಗ್ರಾಹಕರಲ್ಲಿ ಮನವಿ ಮಾಡಿದ್ದು, ದಯವಿಟ್ಟು ಇಂತಹ ಯಾವುದೇ ಘಟನೆಗಳನ್ನು ನೀವು ಎದುರಿಸಿದ್ದರೇ ಕೂಡಲೇ ಬ್ಯಾಂಕಿನ ಗಮನಕ್ಕೆ ತನ್ನಿ ಮತ್ತು ಸೈಬರ್ ಕ್ರೈಮ್ ವಿಭಾಗಕ್ಕೆ ಕೂಡಲೇ ಮಾಹಿತಿ ನೀಡಿ. https://www.cybercrime.gov.in/ಗೆ ಲಾಗಿನ್ ಆಗಿ ದೂರು ಸಲ್ಲಿಸಿ. ಈ ವಿಭಾಗವು ಗೃಹ ಸಚಿವಾಲಯದ ಅಡಿಯಲ್ಲಿ ಬರುತ್ತದೆ ಎಂದು ಸಹ ಮಾಹಿತಿ ನೀಡಿದೆ.
ಅಲ್ಲದೇ ಬ್ಯಾಂಕ್ ಮೂರು ರೀತಿಯ ಭದ್ರತಾ ಸಂಗತಿಗಳನ್ನು ತನ್ನ ಗ್ರಾಹಕರಿಗೆ ತಿಳಿಸಿದೆ. ಇದು ನಿಮ್ಮ ಖಾತೆಯನ್ನು, ನಿಮ್ಮ ದುಡಿಮೆಯನ್ನು ಭದ್ರವಾಗಿರಿಸುತ್ತದೆ ಎಂದು ಸಹ ಹೇಳಿದೆ.
ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವ ಮುಂಚೆ ಕೊಂಚ ಯೋಚಿಸಿ
ಬ್ಯಾಂಕ್ ಎಂದಿಗೂ ಸಹ ತನ್ನ ಗ್ರಾಹಕರನ್ನು ಕೇಳಿಕೊಂಡು ಅವರ ಮಾಹಿತಿ ಕೇಳಿಕೊಂಡು (ಕೆವೈಸಿ) ಕರೆ ಮಾಡುವುದಿಲ್ಲ.
ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಗೂ ಗೌಪ್ಯವಾದ ಸಂಗತಿಗಳನ್ನು ಯಾರ ಬಳಿಯೂ ಹಂಚಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಯಾರಿದು ಅರುಣ್ ಕುಮಾರ್? ಹೊಸ ವ್ಯಕ್ತಿಯನ್ನು ಮುನ್ನೆಲೆಗೆ ತಂದ ಆರ್ಎಸ್ಎಸ್!
ವರದಿಗಳ ಪ್ರಕಾರ ಚೀನಾ ದೇಶದ ಹ್ಯಾಕರ್ಗಳು ಎಸ್ಬಿಐ ಗ್ರಾಹಕರನ್ನೇ ಗುರಿಯಾಗಿಸಿಕೊಂಡಿದ್ದು, ನಿಮ್ಮ ಕೆವೈಸಿ ಅಪ್ಡೇಟ್ ಮಾಡಿದರೆ ನಿಮಗೆ 50 ಲಕ್ಷ ಬಹುಮಾನ ಸಿಗುತ್ತದೆ ಎಂದು ಆಮಿಷ ತೋರಿಸಿ ಹಣ ದೋಚಲಾಗುತ್ತಿದೆ. ಇತ್ತೀಚೆಗೆ 67 ವರ್ಷ ವಯಸ್ಸಿನ ವೃದ್ದರೊಬ್ಬರು ಸುಮಾರು 3 ಲಕ್ಷ ಹಣವನ್ನು ಕಳೆದುಕೊಂಡಿದ್ದು ಸುದ್ದಿಯಾಗಿತ್ತು. ಕೆವೈಸಿ ಮಾಹಿತಿ ಪಡೆಯುವುದಾಗಿ ಹೇಳಿ ಅತ್ಯಂತ ಅಗತ್ಯ ಮಾಹಿತಿಗಳನ್ನು ಪಡೆದು ಈ ಕೃತ್ಯ ಎಸಗಿದ್ದರು ಎಂದು ಹೇಳಲಾಗಿದೆ. ಆದ ಕಾರಣ ಈ ಎಚ್ಚರಿಕೆಯನ್ನು ಬ್ಯಾಂಕ್ ನೀಡಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ. ಗುಂಪುಗೂಡುವುದನ್ನು ನಿಯಂತ್ರಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ