SBI Warning: ‘ಯಾವುದೇ ಕಾರಣಕ್ಕೂ ಇಂತಹ ಇಮೇಲ್ ಮೇಲೆ ಕ್ಲಿಕ್​​ ಮಾಡಬೇಡಿ‘ - ಗ್ರಾಹಕರಿಗೆ ಎಸ್​ಬಿಐ ಎಚ್ಚರಿಕೆ

ಇಂತಹ ಮೇಲ್​ ಕಂಡರೇ ಭಾರತ ಸರ್ಕಾರದ ಸೈಬರ್ ಕ್ರೈಂ ವಿಭಾಗಕ್ಕೆ ವರದಿ ಮಾಡಿ. ಸೈಬರ್​​​​​ ಕ್ರೈಂ ವಿಭಾಗ ಇದನ್ನು ಪತ್ತೆಹಚ್ಚಿ ಗ್ರಾಹಕರಿಗೆ ಸುರಕ್ಷತೆ ನೀಡಲು ಸಹಾಯ ಮಾಡುತ್ತದೆ ಎಂದು ಎಸ್​ಬಿಐ ತಿಳಿಸಿದೆ.

news18-kannada
Updated:September 26, 2020, 5:11 PM IST
SBI Warning: ‘ಯಾವುದೇ ಕಾರಣಕ್ಕೂ ಇಂತಹ ಇಮೇಲ್ ಮೇಲೆ ಕ್ಲಿಕ್​​ ಮಾಡಬೇಡಿ‘ - ಗ್ರಾಹಕರಿಗೆ ಎಸ್​ಬಿಐ ಎಚ್ಚರಿಕೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಸೆ.26): ಇತ್ತೀಚೆಗೆ ಸೈಬರ್​​ ಕ್ರೈಮ್​​ ಹಾವಳಿ ಜೋರಾಗಿದೆ. ಗುರುತು ಕಳವು, ಕೀ ಲಾಕಿಂಗ್, ನಕಲಿ ವೆಬ್​​ಸೈಟ್ ಹಾವಳಿ, ಬ್ಯಾಂಕ್​​ ಖಾತೆ ಕಳವು ಇತ್ಯಾದಿಗಳು ಸೈಬರ್ ವರ್ಲ್ಡ್​​​ನಲ್ಲಿ ನಡೆಯುತ್ತಿದೆ. ಹೀಗಿರುವಾಗಲೇ ಆನ್​​​ಲೈನ್​​ ಸೈಬರ್​​ ಕ್ರೈಮ್​ ವಂಚಕರು ತಮ್ಮ ಅಧಿಕೃತ ಇಮೇಲ್ ಹೋಲುವ ಇಮೇಲ್​​ಗಳನ್ನು ಕಳುಹಿಸುತ್ತಿದ್ದಾರೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ. ಇಂತಹ ಇಮೇಲ್​​ಗಳು ಕಂಡು ಬಂದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮಾಹಿತಿ ನೀಡಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಸ್​​ಬಿಐ ಹೆಸರಿನಲ್ಲಿ ನಕಲಿ ಇಮೇಲ್​​ಗಳು ಬರುತ್ತಿವೆ. ನಮ್ಮ ಬ್ಯಾಂಕ್​​ ಗ್ರಾಹಕರು ಈ ರೀತಿಯ ಹಲವು ಇ-ಮೇಲ್​​ಗಳನ್ನು ಸ್ವೀಕರಿಸುತ್ತಿದ್ದಾರೆ. ಹೀಗಾಗಿ ಇಂತಹ ಇಮೇಲ್​​ಗಳು ಬಂದಾಗ ಕ್ಲಿಕ್​ ಮಾಡಬೇಡಿ. ಇದರಿಂದ ನೀವು ದೂರ ಇರಿ, ನಾವು ಯಾವುದೇ ಕಾರಣಕ್ಕೂ ಎಂದಿಗೂ ಇಂತಹ ಇಮೇಲ್​ಗಳು ಕಳಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಎಸ್​ಬಿಐ ಬ್ಯಾಂಕ್​​ನಂತೆಯೇ ಅಧಿಕೃತವಾಗಿ ಡಿಸೈನ್​ ಮಾಡಿ ಇಮೇಲ್​​ ಕಳಿಸಲಾಗುತ್ತಿದೆ. ಇಂತಹ ಟ್ರ್ಯಾಪ್​​​ಗೆ ಸಿಲುಕಬೇಡಿ. ಗ್ರಾಹಕರು ಇದನ್ನು ಕ್ಲಿಕ್ ಮಾಡುವ ಮುನ್ನ ಆಲೋಚಿಸಿ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ಹೀಗೆ ಇಮೇಲ್​​​ ಬಂದಲ್ಲಿ ದೂರು ನೀಡಲು ಅಧಿಕೃತ ಇಂಟರ್ನೆಟ್ ಬ್ಯಾಂಕಿಂಗ್ ವೆಬ್ ಸೈಟ್ ನ ಲಿಂಕ್​ ನೀಡಿ ಟ್ವೀಟ್​ ಮಾಡಿದೆ.




ಇಂತಹ ಮೇಲ್​ ಕಂಡರೇ ಭಾರತ ಸರ್ಕಾರದ ಸೈಬರ್ ಕ್ರೈಂ ವಿಭಾಗಕ್ಕೆ ವರದಿ ಮಾಡಿ. ಸೈಬರ್​​​​​ ಕ್ರೈಂ ವಿಭಾಗ ಇದನ್ನು ಪತ್ತೆಹಚ್ಚಿ ಗ್ರಾಹಕರಿಗೆ ಸುರಕ್ಷತೆ ನೀಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದೆ.
Published by: Ganesh Nachikethu
First published: September 26, 2020, 4:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading