SBI UPI Down: ಎರಡು ದಿನ ಎಸ್​ಬಿಐನ ಯೊನೊ, ನೆಟ್‌ಬ್ಯಾಂಕಿಂಗ್, UPI ಸೌಲಭ್ಯ ಇಲ್ಲ

SBI UPI, Yono, Internet Banking Down: ಈ ಅಪ್‌ಡೇಟ್ ಕುರಿತು ಎಸ್‌ಬಿಐ ಟ್ವಿಟ್ಟರ್‌ನಲ್ಲಿ ಹೇಳಿಕೆಯನ್ನು ನೀಡಿದ್ದು ಯೊನೊ, ಯೊನೊ ಲೈಟ್, ಯೊನೊ ಬಿಸ್‌ನೆಸ್, ಐಎಮ್‌ಪಿಎಸ್ ಹಾಗೂ ಯುಪಿಐ ಸೇವೆಗಳು ಸಪ್ಟೆಂಬರ್ 4 ರಂದು ರಾತ್ರಿ 10:35 ರಿಂದ ಸಪ್ಟೆಂಬರ್ 5 ರಂದು ಬೆಳಗ್ಗೆ 1:33 ರವರೆಗೆ ಲಭ್ಯವಿರುವುದಿಲ್ಲವೆಂದು ತಿಳಿಸಿದೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    SBI Digital Banking Down: ಯೊನೊ ಲೈಟ್ (Yono Lite) ಹಾಗೂ ಯುಪಿಐ (SBI UPI Payments) ಸೇವೆಗಳು ಸೇರಿದಂತೆ ಇಂಟರ್ನೆಟ್ ಬ್ಯಾಂಕಿಂಗ್ (SBI Internet Banking) ಸೇವೆಯನ್ನು ಬಳಸುವ ತನ್ನ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿಮುಖ್ಯವಾದ ಮಾಹಿತಿಯೊಂದನ್ನು ನೀಡಿದ್ದು, ಸಪ್ಟೆಂಬರ್ 4 ಹಾಗೂ 5 ರಂದು ಡಿಜಿಟಲ್ ಸೇವೆಗಳು ಕೆಲವು ಗಂಟೆಗಳ ಕಾಲ ಸೇವೆಗೆ ಲಭ್ಯವಿಲ್ಲವೆಂದು ತನ್ನ ಗ್ರಾಹಕರಿಗೆ ತಿಳಿಸಿದೆ. ನಿರ್ವಹಣಾ ಕೆಲಸಗಳ ಕಾರಣದಿಂದ ಪ್ರಸ್ತುತ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು ನಮೂದಿಸಿದ ದಿನಾಂಕಗಳಂದು ಕೆಲವು ಗಂಟೆಗಳ ಕಾಲ ಗ್ರಾಹಕರಿಗೆ ಡಿಜಿಟಲ್ ಸೇವೆಗಳನ್ನು (SBI Digital Banking) ಬಳಸಲಾಗುವುದಿಲ್ಲವೆಂದು ತಿಳಿಸಿದೆ.

    ಈ ಅಪ್‌ಡೇಟ್ ಕುರಿತು ಎಸ್‌ಬಿಐ ಟ್ವಿಟ್ಟರ್‌ನಲ್ಲಿ ಹೇಳಿಕೆಯನ್ನು ನೀಡಿದ್ದು ಯೊನೊ, ಯೊನೊ ಲೈಟ್, ಯೊನೊ ಬಿಸ್‌ನೆಸ್, ಐಎಮ್‌ಪಿಎಸ್ ಹಾಗೂ ಯುಪಿಐ ಸೇವೆಗಳು ಸಪ್ಟೆಂಬರ್ 4 ರಂದು ರಾತ್ರಿ 10:35 ರಿಂದ ಸಪ್ಟೆಂಬರ್ 5 ರಂದು ಬೆಳಗ್ಗೆ 1:33 ರವರೆಗೆ ಲಭ್ಯವಿರುವುದಿಲ್ಲವೆಂದು ತಿಳಿಸಿದೆ. ಡೌನ್‌ಟೈಮ್ 180 ನಿಮಿಷಗಳಲ್ಲಿ ಕೊನೆಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಬ್ಯಾಂಕ್ ಗ್ರಾಹಕರಲ್ಲಿ ಅಡಚಣೆಗಾಗಿ ಕ್ಷಮೆಯಾಚಿಸಿದ್ದು ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸುವ ಸಲುವಾಗಿ ಸೇವೆಗಳಲ್ಲಿ ಕೆಲವು ಗಂಟೆಗಳ ಕಾಲ ನಿರ್ಬಂಧವನ್ನು ಹೇರಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.

    ಎಸ್‌ಬಿಐ ಟ್ವಿಟ್ಟರ್‌ನಲ್ಲಿ ನೀಡಿರುವ ಹೇಳಿಕೆಯ ಪ್ರಕಾರ “ಯೊನೊ, ಯೊನೊ ಲೈಟ್, ಯೊನೊ ಬಿಸಿನೆಸ್, ಐಎಮ್‌ಪಿಎಸ್, ಹಾಗೂ ಯುಪಿಐ ಸಪ್ಟೆಂಬರ್ 4 ರಂದು ರಾತ್ರಿ 10:35 ರಿಂದ ಸಪ್ಟೆಂಬರ್ 5 ರಂದು ಬೆಳಗ್ಗೆ 1:33 ರವರೆಗೆ 22:35 ಗಂಟೆಗಳ ನಡುವೆ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ. ಟ್ವಿಟ್ಟರ್‌ನಲ್ಲಿ ಬ್ಯಾಂಕ್ ನಿರ್ವಹಣಾ ಕೆಲಸದ ಕುರಿತು ಸೂಚನೆ ನೀಡಿದ್ದು ಈ ಡೌನ್‌ಟೈಮ್ 180 ನಿಮಿಷಗಳಲ್ಲಿ ಕೊನೆಗೊಳ್ಳುವ ನಿರೀಕ್ಷೆ ಇದೆ ಎಂದು ಕೂಡ ತಿಳಿಸಿದೆ.

    ಇದನ್ನೂ ಓದಿ: ನ್ಯೂಸ್​18 ಅಭಿಯಾನದಿಂದ ಎಚ್ಚೆತ್ತ ಬಿಬಿಎಂಪಿ: ರಸ್ತೆಗುಂಡಿ ಮುಚ್ಚಲು ಟಾಸ್ಕ್​ ಫೋರ್ಸ್​ ರಚನೆ

    ಬ್ಯಾಂಕ್‌ನ ಟ್ವಿಟ್ಟರ್ ಹೇಳಿಕೆಗೆ ಸ್ಪಂದಿಸಿರುವ ಅನೇಕ ಟ್ವಿಟ್ಟರ್ ಬಳಕೆದಾರರು ಯೊನೊ ಆ್ಯಪ್ ಕೆಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿಲ್ಲವೆಂದು ತಿಳಿಸಿದ್ದಾರೆ. ಇನ್ನು ಕೆಲವು ಬಳಕೆದಾರರು “ಭಾರತದ ಅತಿ ಕೆಟ್ಟ ಬ್ಯಾಂಕ್” ಹಾಗೂ ಬ್ಯಾಂಕ್‌ನ ಸೇವೆಗಳು “ದುರ್ಬಲ” ಎಂಬ ಸಂದೇಶವನ್ನು ಬಳಕೆದಾರರು ಟ್ವೀಟ್ ಮಾಡಿ ಟೀಕಿಸಿದ್ದಾರೆ. ಬ್ಯಾಂಕ್‌ನೊಂದಿಗೆ ತುಂಬಾ ಕೆಟ್ಟ ಅನುಭವವಾಗಿದೆ ಎಂದು ಇನ್ನು ಕೆಲವು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈ ಟ್ವೀಟ್‌ಗಳಿಗೆ ತಕ್ಷಣವೇ ಪ್ರತಿಸ್ಪಂದಿಸಿರುವ ಎಸ್‌ಬಿಐ (State Bank of India Users) ಬಳಕೆದಾರರಿಗೆ ತೊಂದರೆಯುಂಟಾಗಿರುವುದಕ್ಕೆ ಕ್ಷಮೆ ಯಾಚಿಸಿದ್ದು, ಅವರು ಎದುರಿಸಿರುವ ತೊಂದರೆಗಳನ್ನು ವಿವರವಾಗಿ ನಮೂದಿಸಲು ಕೂಡ ಕೇಳಿಕೊಂಡಿದೆ. ಇದರಿಂದ ಬ್ಯಾಂಕ್‌ಗೆ ಸುಲಭವಾಗಿ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ತಿಳಿಸಿದೆ.

    ಗ್ರಾಹಕರ ಸುರಕ್ಷೆಗಾಗಿ SMI Binding:

    ತನ್ನ ಗ್ರಾಹಕರಿಗೆ ತೃಪ್ತಿಕರವಾದ ಸೇವೆಯನ್ನು ಒದಗಿಸುವುದರ ಜೊತೆಗೆ ಸರಕಾರಿ ಬ್ಯಾಂಕ್ ವಂಚನೆಗಳ ಬಗ್ಗೆ ಜಾಗೃತರಾಗಿರಲು ಗ್ರಾಹಕರಿಗೆ ತಿಳಿಸಿದೆ. 'ಎಸ್‌ಎಮ್‌ಐ ಬೈಂಡಿಂಗ್' ಎಂಬ ಹೊಸ ಫೀಚರ್ ಅನ್ನು ಯೊನೊ ಹಾಗೂ ಯೊನೊ ಲೈಟ್‌ ಆ್ಯಪ್‌ಗಳಿಗೆ ಬ್ಯಾಂಕ್ ಸೇರಿಸಿದ್ದು ಇದು ಗ್ರಾಹಕರಿಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸಲಿದೆ ಎಂದು ಬ್ಯಾಂಕ್ ತಿಳಿಸಿದೆ.

    ಇದನ್ನೂ ಓದಿ: ತಮಿಳುನಾಡು ಮಾದರಿ ಪೆಟ್ರೋಲ್& ಡೀಸೆಲ್ ಸೆಸ್ ಕಡಿತದ ಸುಳಿವು ನೀಡಿದ ಸಿಎಂ

    ಡಿಜಿಟಲ್ ಮೋಸಗಳಿಂದ ಗ್ರಾಹಕರನ್ನು ಸಂರಕ್ಷಿಸುವ ಕಾರ್ಯವನ್ನು ಈ ಪ್ಲಾಟ್‌ಫಾರ್ಮ್‌ಗಳ ಅತ್ಯಾಧುನಿಕ ಫೀಚರ್ ಒದಗಿಸಲಿದೆ. ಸಿಮ್ ಬೈಂಡಿಂಗ್ ಫೀಚರ್ ಅನ್ನು ಯೊನೊ ಹಾಗೂ ಯೊನೊ ಲೈಟ್ ಆ್ಯಪ್‌ಗಳು ಒಳಗೊಂಡಿದ್ದು ಎಸ್‌ಬಿಐ ಬ್ಯಾಂಕ್‌ನೊಂದಿಗೆ ನೋಂದಾಯಿಸಿರುವ ಮೊಬೈಲ್ ಸಂಖ್ಯೆಗಳ ಸಿಮ್‌ ಹೊಂದಿರುವ ಡಿವೈಸ್‌ಗಳಲ್ಲಿ ಮಾತ್ರವೇ ಕಾರ್ಯನಿರ್ವಹಿಸುತ್ತವೆ.
    Published by:Sharath Sharma Kalagaru
    First published: