• Home
  • »
  • News
  • »
  • national-international
  • »
  • SBI ಗ್ರಾಹಕರೇ ಗಮನಿಸಿ..! ಎಟಿಎಂನಿಂದ ಹಣ ಹಿಂಪಡೆಯುವ ನಿಯಮ ಚೇಂಜ್..!

SBI ಗ್ರಾಹಕರೇ ಗಮನಿಸಿ..! ಎಟಿಎಂನಿಂದ ಹಣ ಹಿಂಪಡೆಯುವ ನಿಯಮ ಚೇಂಜ್..!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಖಾತೆಯಲ್ಲಿ ಹಣ ಕಡಿಮೆ ಇದ್ದರೂ ಎಟಿಎಂಗೆ ಹೋಗಿ ಹಣ ವಿತ್​ಡ್ರಾಯಲ್ ಮಾಡಲು ಹೋಗಿ ಟ್ರಾನ್ಸಾಕ್ಷನ್ ವಿಫಲವಾದರೆ, ಪ್ರತಿ ವಿಫಲ ಟ್ರಾನ್ಸಾಕ್ಷನ್​ಗೂ ನೀವು 20 ರೂ. ಶುಲ್ಕದ ಜತೆಗೆ ಜಿಎಸ್​ಟಿಯನ್ನು ತೆರಬೇಕಾಗುತ್ತದೆ.

  • Share this:

    ಇತ್ತೀಚೆಗೆ ಆನ್​ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈ ಹಿನ್ನೆಲೆ ದೇಶದ ಅತಿ ದೊಡ್ಡ ಬ್ಯಾಂಕ್​ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ತನ್ನ ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಎಟಿಎಂ ನಗದು ಹಿಂಪಡೆಯುವ ನಿಯಮಗಳನ್ನು ಶುಕ್ರವಾರ ಪರಿಷ್ಕರಿಸಿದೆ. ಇನ್ನು, ನಿಮ್ಮ ಬಳಿ ಎಸ್​ಬಿಐ ಅಕೌಂಟ್ ಇದ್ದು, ಆ ಅಕೌಂಡ್​ನಲ್ಲಿ ಬ್ಯಾಲೆನ್ಸ್ ಕಡಿಮೆ ಇದ್ದರೂ ಎಟಿಎಂಗೆ ಹೋಗಿ ಹಣ ವಿತ್​ಡ್ರಾ ಮಾಡಲು ಹೋದರೆ ನಿಮಗೆ ಮತ್ತಷ್ಟು ನಷ್ಟವಾಗಲಿದೆ.


    ನಿಮ್ಮ ಖಾತೆಯಲ್ಲಿ ಹಣ ಕಡಿಮೆ ಇದ್ದರೂ ಎಟಿಎಂಗೆ ಹೋಗಿ ಹಣ ವಿತ್​ಡ್ರಾಯಲ್ ಮಾಡಲು ಹೋಗಿ ಟ್ರಾನ್ಸಾಕ್ಷನ್ ವಿಫಲವಾದರೆ, ಪ್ರತಿ ವಿಫಲ ಟ್ರಾನ್ಸಾಕ್ಷನ್​ಗೂ ನೀವು 20 ರೂ. ಶುಲ್ಕದ ಜತೆಗೆ ಜಿಎಸ್​ಟಿಯನ್ನು ತೆರಬೇಕಾಗುತ್ತದೆ.


    ಎಸ್​ಬಿಐ ಅಧಿಕೃತ ವೆಬ್ಸೈಟ್​ನಲ್ಲಿ ಈ ಹೊಸ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ನು, ಹಣಕಾಸಿನೇತರ ವಹಿವಾಟುಗಳಿಗೆ ತನ್ನ ಗ್ರಾಹಕರ ಮೇಲೆ ಲೆವಿ ಶುಲ್ಕ ವಿಧಿಸುವುದಾಗಿಯೂ ಹೇಳಿದೆ. ನಿಗದಿತ ಮಿತಿಯನ್ನು ಮೀರಿದ ಯಾವುದೇ ಹೆಚ್ಚುವರಿ ಹಣಕಾಸು ವಹಿವಾಟುಗಳಿಗೆ ಗ್ರಾಹಕರು 10 ರೂ. ಶುಲ್ಕ ಜತೆಗೆ ಜಿಎಸ್ಟಿಯಿಂದ - 20 ರೂ. ಶುಲ್ಕದ ಜತೆಗೆ ಜಿಎಸ್ಟಿಯನ್ನು ತೆರಬೇಕಾಗುತ್ತದೆ ಎಂದೂ ಕೇಂದ್ರ ಸರ್ಕಾರಿ ಸ್ವಾಮ್ಯದ ಎಸ್​ಬಿಐ ಹೇಳಿದೆ.


    ಪ್ರಸ್ತುತ, ಎಸ್​ಬಿಐ ತನ್ನ ಎಟಿಎಂ ಕಾರ್ಡ್ದಾರರಿಗೆ ದೇಶದ ಮೆಟ್ರೋ ನಗರಗಳಲ್ಲಿ ಒಂದು ತಿಂಗಳಲ್ಲಿ ಎಟಿಎಂಗಳಿಂದ ಎಂಟು ಬಾರಿ ಉಚಿತವಾಗಿ ಹಣವನ್ನು ಹಿಂಪಡೆಯಲು ಅವಕಾಶ ನೀಡುತ್ತದೆ. ಇದು 5 ಎಸ್​ಬಿಐ ಎಟಿಎಂ ಮತ್ತು 3 ಎಸ್​ಬಿಐ ಅಲ್ಲದ ಎಟಿಎಂಗಳಿಂದ ಹಿಂಪಡೆಯುವಿಕೆಯನ್ನು ಒಳಗೊಂಡಿದೆ.


    ಎಸ್​ಬಿಐ ಎಟಿಎಂಗಳಿಂದ ಹಣವನ್ನು ಹಿಂಪಡೆಯುವ ಹೊಸ ನಿಯಮಗಳೇನು..?


    ಎಸ್​ಬಿಐ ಖಾತೆದಾರರು ಎಟಿಎಂಗಳಿಂದ 10,000 ರೂ.ಗಿಂತ ಹೆಚ್ಚಿನ ಹಣವನ್ನು ಒಮ್ಮಲೇ ಹಿಂಪಡೆಯಬಹುದು. ಆದರೆ ಅದಕ್ಕೆ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಅಗತ್ಯವಿರುತ್ತದೆ. ಪ್ರತಿ ಬಾರಿ ಎಸ್​ಬಿಐ ಎಟಿಎಂಗಳಿಂದ 10,000 ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಒಟಿಪಿ ನಮೂದಿಸಿದ ಬಳಿಕವೇ ನಿಮಗೆ 10,000 ರೂ.ಗಿಂತ ಹೆಚ್ಚಿನ ಹಣ ಹಿಂಪಡೆಯಲು ಸಾಧ್ಯವಿದೆ. ಎಟಿಎಂಗಳ ವಂಚನೆ ಪ್ರಕರಣಗಳನ್ನು ಇದು ತಗ್ಗಿಸುತ್ತದೆ ಎಂಬುದು ಎಸ್ಬಿಐ ಪ್ಲಾನ್.


    ನಿಮ್ಮ ಎಸ್​ಬಿಐ ಖಾತೆ ಬ್ಯಾಲೆನ್ಸ್ ಅನ್ನು ನೀವು ಹೇಗೆ ಪರಿಶೀಲಿಸಬಹುದು..?


    ಎಸ್​ಬಿಐ ಗ್ರಾಹಕರು ಈಗ  ಇಂಟರ್ನೆಟ್ ಸಂಪರ್ಕವನ್ನು ಬಳಸದೆ ತಮ್ಮ ಖಾತೆಯ ಬಾಕಿ ಪರಿಶೀಲಿಸಬಹುದು. ಇದಕ್ಕೆ ಎರಡು ಮಾರ್ಗಗಳಿವೆ, ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9223766666 ಗೆ ಎಸ್ಎಂಎಸ್ ಬ್ಯಾಲೆನ್ಸ್ ಕಳುಹಿಸಬಹುದು ಅಥವಾ ಅವರು ಟೋಲ್-ಫ್ರೀ ಬ್ಯಾಲೆನ್ಸ್ ವಿಚಾರಣಾ ಸಂಖ್ಯೆಯಾದ 9223766666 ಗೆ ಮಿಸ್ಡ್ ಕಾಲ್ ನೀಡಬಹುದು.

    Published by:Vinay Bhat
    First published: