ಎಸ್​ಬಿಐ ಉಳಿತಾಯ ಖಾತೆಯಲ್ಲಿ ಇನ್ನು ಮುಂದೆ ಮಿನಿಮಮ್ ಬ್ಯಾಲೆನ್ಸ್ ಇಡುವ ಅವಶ್ಯಕತೆ ಇಲ್ಲ

ಪ್ರಸ್ತುತ ಎಸ್​ಬಿಐನ ಉಳಿತಾಯ ಖಾತೆದಾರರು ಮೆಟ್ರೋ ನಗರ, ಸೆಮಿ ಅರ್ಬನ್ ಮತ್ತು ಗ್ರಾಮೀಣ ಭಾಗದವರು ಕ್ರಮವಾಗಿ 3 ಸಾವಿರ, 2 ಸಾವಿರ ಮತ್ತು ಒಂದು ಸಾವಿರ ಮಾಸಿಕ ಕನಿಷ್ಠ ಹಣವನ್ನು ತಮ್ಮ ಉಳಿತಾಯ ಖಾತೆಯಲ್ಲಿ ಹೊಂದಿರಬೇಕಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ: ದೇಶದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್​ ಆದ ಎಸ್​ಬಿಐ ಉಳಿತಾಯ ಖಾತೆಗಳ ಮೇಲಿನ ಬಡ್ಡಿ ದರವನ್ನು ಶೇ.3ರಷ್ಟು ಇಳಿಕೆ ಮಾಡಿದೆ. ಎಸ್​ಬಿಐ ಈ ಕ್ರಮ  44.51 ಕೋಟಿ ಉಳಿತಾಯ ಖಾತೆಗಳಿಗೆ ಅನ್ವಯವಾಗಲಿದೆ. ಹಾಗೂ ಉಳಿತಾಯ ಖಾತೆದಾರರು ತಿಂಗಳಿಗೆ ಕನಿಷ್ಠ ದರವನ್ನು ಹೊಂದಿರಬೇಕು ಎಂಬ ನಿಯಮವನ್ನು ತೆಗೆದುಹಾಕಿದೆ.

  ಗ್ರಾಹಕರೇ ಮೊದಲು ಎಂಬುದನ್ನು ತಲೆಯಲ್ಲಿ ಇಟ್ಟುಕೊಂಡು ಎಸ್​ಬಿಐ ಈ ನಿಯಮಗಳನ್ನು ಜಾರಿಗೆ ತಂದಿದೆ. ಅಷ್ಟೇ ಅಲ್ಲದೇ, ಎಸ್​ಎಂಎಸ್​ ಶುಲ್ಕವನ್ನು ಸಹ ತೆಗೆದುಹಾಕಲಾಗಿದೆ. ಇದರಿಂದಾಗಿ ಗ್ರಾಹಕರು ನಿರಾಳರಾಗಿದ್ದಾರೆ. ಜೊತೆಗೆ ಉಳಿತಾಯ ಖಾತೆಗಳಿಗೆ ಬಡ್ಡಿ ದರವನ್ನು ಶೇ.3ರಷ್ಟು ಇಳಿಕೆ ಮಾಡಲಾಗಿದೆ ಎಂದು ಎಸ್​ಬಿಐ ಹೇಳಿದೆ.

  ಹಾಲಿ, ಉಳಿತಾಯ ಖಾತೆಗಳಲ್ಲಿ ಒಂದು ಲಕ್ಷದವರೆಗಿನ ಠೇವಣಿಗೆ ಉಳಿತಾಯ ಖಾತೆ ಮೇಲೆ 3.25 ತೆರಿಗೆ ದರ ಇದೆ. ಹಾಗೂ ಒಂದು ಲಕ್ಷಕ್ಕಿಂತ ಹೆಚ್ಚಿನ ಠೇವಣಿಗೆ ಶೇ.3ರಷ್ಟು ಬಡ್ಡಿ ದರ ಇದೆ.

  ಇದನ್ನು ಓದಿ: State Bank of India: ಎಸ್​​ಬಿಐ ಬ್ಯಾಂಕ್​​​ ಗ್ರಾಹಕರಿಗೆ ಸಿಹಿಸುದ್ದಿ; ಇಳಿಕೆಯಾಗಲಿದೆ ಸಾಲದ ಮೇಲಿನ ಬಡ್ಡಿ ದರ

  ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಉಳಿತಾಯ ಖಾತೆಗಳು ತಿಂಗಳ ಮಿನಿಮಮ್​ ಬ್ಯಾಲೆನ್ಸ್​ (ಕನಿಷ್ಠ ದರ) ಹೊಂದಿರಬೇಕು ಎಂಬ ನಿಯಮವನ್ನು ತೆಗೆದುಹಾಕಿದೆ. ಪ್ರಸ್ತುತ ಎಸ್​ಬಿಐನ ಉಳಿತಾಯ ಖಾತೆದಾರರು ಮೆಟ್ರೋ ನಗರ, ಸೆಮಿ ಅರ್ಬನ್ ಮತ್ತು ಗ್ರಾಮೀಣ ಭಾಗದವರು ಕ್ರಮವಾಗಿ 3 ಸಾವಿರ, 2 ಸಾವಿರ ಮತ್ತು ಒಂದು ಸಾವಿರ ಮಾಸಿಕ ಕನಿಷ್ಠ ಹಣವನ್ನು ತಮ್ಮ ಉಳಿತಾಯ ಖಾತೆಯಲ್ಲಿ ಹೊಂದಿರಬೇಕಿತ್ತು. ಇದೀಗ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಇಷ್ಟೇ ಹಣವನ್ನು ಕಡ್ಡಾಯವಾಗಿ ಹೊಂದಿರಬೇಕು ಎಂಬ ನಿಯಮವೇನಿಲ್ಲ. ಇದಕ್ಕೂ ಮುನ್ನ ಉಳಿತಾಯ ಖಾತೆಯಲ್ಲಿ ಕನಿಷ್ಠ ಹಣವನ್ನು ಹೊಂದಿರದಿದ್ದರೆ ಖಾತೆದಾರರಿಗೆ ಬ್ಯಾಂಕ್ 5ರಿಂದ 15 ರೂಪಾಯಿಗೂ ಹೆಚ್ಚಿನ ತೆರಿಗೆ ಹಾಕುತ್ತಿತ್ತು.
  First published: