• Home
  • »
  • News
  • »
  • national-international
  • »
  • SBI ATM - ಎಸ್​ಬಿಐ ಗ್ರಾಹಕರೇ ಗಮನಿಸಿ..! ಎಟಿಎಂನಿಂದ ಹಣ ಹಿಂಪಡೆಯುವ ನಿಯಮದಲ್ಲಿ ಬದಲಾವಣೆ

SBI ATM - ಎಸ್​ಬಿಐ ಗ್ರಾಹಕರೇ ಗಮನಿಸಿ..! ಎಟಿಎಂನಿಂದ ಹಣ ಹಿಂಪಡೆಯುವ ನಿಯಮದಲ್ಲಿ ಬದಲಾವಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಟಿಎಂಗಳಲ್ಲಿ ಹಣ ವಿತ್​ಡ್ರಾ ಮಾಡುವ ನಿಯಮಗಳನ್ನ ಪರಿಷ್ಕರಿಸಿದೆ. ನೀವು ಹಣ ಡ್ರಾ ಮಾಡುವ ಮುನ್ನ ಈ ನಿಯಮಗಳನ್ನ ತಪ್ಪದೇ ತಿಳಿದುಕೊಳ್ಳಿ.

  • News18
  • Last Updated :
  • Share this:

    ಇತ್ತೀಚೆಗೆ ಆನ್‌ಲೈನ್‌ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈ ಹಿನ್ನೆಲೆ ದೇಶದ ಅತಿ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಎಟಿಎಂ ನಗದು ಹಿಂಪಡೆಯುವ ನಿಯಮಗಳನ್ನು ಶುಕ್ರವಾರ ಪರಿಷ್ಕರಿಸಿದೆ. ಇನ್ನು, ನಿಮ್ಮ ಬಳಿ ಎಸ್‌ಬಿಐ ಅಕೌಂಟ್‌ ಇದ್ದು, ಆ ಅಕೌಂಟ್‌ನಲ್ಲಿ ಬ್ಯಾಲೆನ್ಸ್ ಕಡಿಮೆ ಇದ್ದರೂ ಎಟಿಎಂಗೆ ಹೋಗಿ ಹಣ ವಿತ್‌ಡ್ರಾ ಮಾಡಲು ಹೋದರೆ ನಿಮಗೆ ಮತ್ತಷ್ಟು ನಷ್ಟವಾಗಲಿದೆ. 


    ನಿಮ್ಮ ಖಾತೆಯಲ್ಲಿ ಹಣ ಕಡಿಮೆ ಇದ್ದರೂ ಎಟಿಎಂಗೆ ಹೋಗಿ ಹಣ ವಿತ್‌ಡ್ರಾಯಲ್‌ ಮಾಡಲು ಹೋಗಿ ಟ್ರಾನ್ಸಾಕ್ಷನ್‌ ವಿಫಲವಾದರೆ, ಪ್ರತಿ ವಿಫಲ ಟ್ರಾನ್ಸಾಕ್ಷನ್‌ಗೂ ನೀವು 20 ರೂ. ಶುಲ್ಕದ ಜತೆಗೆ ಜಿಎಸ್‌ಟಿಯನ್ನು ತೆರಬೇಕಾಗುತ್ತದೆ.


    ಎಸ್‌ಬಿಐ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಹೊಸ ನಿಯಮಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ನು, ಹಣಕಾಸಿನೇತರ ವಹಿವಾಟುಗಳಿಗೆ ತನ್ನ ಗ್ರಾಹಕರ ಮೇಲೆ ಲೆವಿ ಶುಲ್ಕ ವಿಧಿಸುವುದಾಗಿಯೂ ಹೇಳಿದೆ. ನಿಗದಿತ ಮಿತಿಯನ್ನು ಮೀರಿದ ಯಾವುದೇ ಹೆಚ್ಚುವರಿ ಹಣಕಾಸು ವಹಿವಾಟುಗಳಿಗೆ ಗ್ರಾಹಕರು 10 ರೂ ಶುಲ್ಕ ಜತೆಗೆ ಜಿಎಸ್‌ಟಿಯಿಂದ - 20 ರೂ. ಶುಲ್ಕದ ಜತೆಗೆ ಜಿಎಸ್‌ಟಿಯನ್ನು ತೆರಬೇಕಾಗುತ್ತದೆ ಎಂದೂ ಕೇಂದ್ರ ಸರ್ಕಾರಿ ಸ್ವಾಮ್ಯದ ಎಸ್‌ಬಿಐ ಹೇಳಿದೆ.


    ಪ್ರಸ್ತುತ, ಎಸ್‌ಬಿಐ ತನ್ನ ಎಟಿಎಂ ಕಾರ್ಡ್‌ದಾರರಿಗೆ ದೇಶದ ಮೆಟ್ರೋ ನಗರಗಳಲ್ಲಿ ಒಂದು ತಿಂಗಳಲ್ಲಿ ಎಟಿಎಂಗಳಿಂದ ಎಂಟು ಬಾರಿ ಉಚಿತವಾಗಿ ಹಣವನ್ನು ಹಿಂಪಡೆಯಲು ಅವಕಾಶ ನೀಡುತ್ತದೆ. ಇದು 5 ಎಸ್‌ಬಿಐ ಎಟಿಎಂ ಮತ್ತು 3 ಎಸ್‌ಬಿಐ ಅಲ್ಲದ ಎಟಿಎಂಗಳಿಂದ ಹಿಂಪಡೆಯುವಿಕೆಯನ್ನು ಒಳಗೊಂಡಿದೆ.


    ಇದನ್ನೂ ಓದಿ: BSNL: ಮಾರ್ಚ್​ ತಿಂಗಳಾಂತ್ಯದವರೆಗೆ ಉಚಿತ ಸಿಮ್​​ ಆಫರ್​ ಹೊರಡಿಸಿದ ಬಿಎಸ್​ಎನ್​​ಎಲ್!


    ಎಸ್‌ಬಿಐ ಎಟಿಎಂಗಳಿಂದ ಹಣವನ್ನು ಹಿಂಪಡೆಯುವ ಹೊಸ ನಿಯಮಗಳೇನು..?


    ಎಸ್‌ಬಿಐ ಖಾತೆದಾರರು ಎಟಿಎಂಗಳಿಂದ 10,000 ರೂ.ಗಿಂತ ಹೆಚ್ಚಿನ ಹಣವನ್ನು ಒಮ್ಮಲೇ ಹಿಂಪಡೆಯಬಹುದು. ಆದರೆ ಅದಕ್ಕೆ ಒನ್‌ ಟೈಮ್‌ ಪಾಸ್‌ವರ್ಡ್ (ಒಟಿಪಿ) ಅಗತ್ಯವಿರುತ್ತದೆ. ಪ್ರತಿ ಬಾರಿ ಎಸ್‌ಬಿಐ ಎಟಿಎಂಗಳಿಂದ 10,000 ರೂ.ಗಿಂತ ಹೆಚ್ಚಿನ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಒಟಿಪಿ ನಮೂದಿಸಿದ ಬಳಿಕವೇ ನಿಮಗೆ 10,000 ರೂ.ಗಿಂತ ಹೆಚ್ಚಿನ ಹಣ ಹಿಂಪಡೆಯಲು ಸಾಧ್ಯವಿದೆ. ಎಟಿಎಂಗಳ ವಂಚನೆ ಪ್ರಕರಣಗಳನ್ನು ಇದು ತಗ್ಗಿಸುತ್ತದೆ ಎಂಬುದು ಎಸ್‌ಬಿಐ ಪ್ಲಾನ್‌.


    ನಿಮ್ಮ ಎಸ್‌ಬಿಐ ಖಾತೆ ಬ್ಯಾಲೆನ್ಸ್‌ ಅನ್ನು ನೀವು ಹೇಗೆ ಪರಿಶೀಲಿಸಬಹುದು..?


    ಎಸ್‌ಬಿಐ ಗ್ರಾಹಕರು ಈಗ ಇಂಟರ್ನೆಟ್ ಸಂಪರ್ಕವನ್ನು ಬಳಸದೆ ತಮ್ಮ ಖಾತೆಯ ಬಾಕಿ ಪರಿಶೀಲಿಸಬಹುದು. ಇದಕ್ಕೆ ಎರಡು ಮಾರ್ಗಗಳಿವೆ, ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 9223766666 ಗೆ ಎಸ್‌ಎಂಎಸ್ ಬ್ಯಾಲೆನ್ಸ್ ಕಳುಹಿಸಬಹುದು ಅಥವಾ ಅವರು ಟೋಲ್-ಫ್ರೀ ಬ್ಯಾಲೆನ್ಸ್ ವಿಚಾರಣಾ ಸಂಖ್ಯೆಯಾದ 9223766666 ಗೆ ಮಿಸ್ಡ್ ಕಾಲ್ ನೀಡಬಹುದು.

    Published by:Vijayasarthy SN
    First published: