SBI Home Loan: ಸಾಲಕ್ಕೆ ಹೊರೆ ಹೆಚ್ಚಿಸಿದ ಎಸ್​ಬಿಐ; 30 ಮೂಲಾಂಕಗಳವರೆಗೆ ಸಾಲದ ಬಡ್ಡಿ ಹೆಚ್ಚಳ

Bank lending rates - 30 ಲಕ್ಷದವರೆಗಿನ ಗೃಹ ಸಾಲಗಳಿಗೆ ಬಡ್ಡಿ ದರ ಶೇ. 7.20ರಿಂದ ಶೇ. 7.40ಕ್ಕೆ ಹೆಚ್ಚಳವಾಗಿದೆ. 30ರಿಂದ 75 ಲಕ್ಷದವರೆಗಿನ ಗೃಹ ಸಾಲಗಳ ಮೇಲಿನ ಬಡ್ಡಿ ದರ ಶೇ. 7.45 ರಿಂದ ಶೇ. 7.65ಕ್ಕೆ ಹೆಚ್ಚಳವಾಗಿದೆ.

ಎಸ್​ಬಿಐ ಬ್ಯಾಂಕ್

ಎಸ್​ಬಿಐ ಬ್ಯಾಂಕ್

 • News18
 • Last Updated :
 • Share this:
  ನವದೆಹಲಿ(ಮೇ 09): ಅರ್ಥ ವ್ಯವಸ್ಥೆ ಕುಸಿಯುತ್ತಿರುವಂತೆಯೇ ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸಾಲಗಾರರಿಗೆ ಬಡ್ಡಿಯ ಹೊರೆ ಹೆಚ್ಚಿಸಿದೆ. ಎಸ್​ಬಿಐ ದೊಡ್ಡ ಮೊತ್ತದ ಗೃಹ ಸಾಲ ಮತ್ತು ವೈಯಕ್ತಿಕ ಸಾಲಕ್ಕೆ 30 ಮೂಲಾಂಕಗಳವರೆಗೆ ಹೆಚ್ಚಳ ಮಾಡಿದೆ. ಭಾರತದ ಅಗ್ರಮಾನ್ಯ ಬ್ಯಾಂಕ್ ಎನಿಸಿರುವ ಎಸ್​ಬಿಐ ಈ ಕ್ರಮ ಕೈಗೊಂಡ ಬೆನ್ನಲ್ಲೇ ಇತರೆ ಬ್ಯಾಂಕುಗಳೂ ಕೂಡ ಬಡ್ಡಿ ದರ ಹೆಚ್ಚಿಸುವ ನಿರೀಕ್ಷೆ ಇದೆ.

  ಎಸ್​ಬಿಐನಲ್ಲಿ 75 ಲಕ್ಷದವರೆಗಿನ ಗೃಹ ಸಾಲಗಳಿಗೆ 20 ಬೇಸಿಸ್ ಪಾಯಿಂಟ್ ಹೆಚ್ಚಳವಾಗಿದೆ. 30 ಲಕ್ಷದವರೆಗಿನ ಗೃಹ ಸಾಲಗಳಿಗೆ ಬಡ್ಡಿ ದರ ಶೇ. 7.20ರಿಂದ ಶೇ. 7.40ಕ್ಕೆ ಹೆಚ್ಚಳವಾಗಿದೆ. 30ರಿಂದ 75 ಲಕ್ಷದವರೆಗಿನ ಗೃಹ ಸಾಲಗಳ ಮೇಲಿನ ಬಡ್ಡಿ ದರ ಶೇ. 7.45 ರಿಂದ ಶೇ. 7.65ಕ್ಕೆ ಹೆಚ್ಚಳವಾಗಿದೆ.

  ಮ್ಯಾಕ್ಸ್​ಗೇನ್ ಹೋಮ್ ಲೋನ್ ವಿಭಾಗದಲ್ಲಿ ಗರಿಷ್ಠ, ಅಂದರೆ 30 ಮೂಲಾಂಕಗಳಷ್ಟು ಬಡ್ಡಿ ಹೆಚ್ಚಳವಾಗಿದೆ. 30 ಲಕ್ಷ ರೂಪಾಯಿವರೆಗಿನ ಮ್ಯಾಕ್ಸ್​ಗೇನ್ ಗೃಹ ಸಾಲಗಳ ಮೇಲೆ ಶೇ. 7.45ರಷ್ಟಿದ್ದ ಬಡ್ಡಿ ದರ ಈಗ ಶೇ. 7.75ಕ್ಕೆ ಹೆಚ್ಚಾಗಿದೆ.

  ಇದನ್ನೂ ಓದಿ: Rahul Gandhi - ಕೂಡಲೇ ಕೇಂದ್ರ ಸರ್ಕಾರ ಬಡವರಿಗೆ 65 ಸಾವಿರ ಕೋಟಿ ರೂ ನೀಡಬೇಕು: ರಾಹುಲ್ ಗಾಂಧಿ ಒತ್ತಾಯ

  ಹಾಗೆಯೇ, ಆಸ್ತಿ ಅಡಮಾನ ಇಟ್ಟು ಪಡೆದ ವೈಯಕ್ತಿಕ ಸಾಲಕ್ಕೂ 30 ಮೂಲಾಂಕಗಳಷ್ಟು ಬಡ್ಡಿ ಹೆಚ್ಚಳವಾಗಿದೆ. ಒಂದು ಕೋಟಿ ರೂಪಾಯಿವರೆಗಿನ ಇಂಥ ಸಾಲದ ಮೇಲೆ ಶೇ. 8.90ರಷ್ಟಿದ್ದ ಬಡ್ಡಿ ದರ ಶೇ. 9.20ಕ್ಕೆ ಹೆಚ್ಚಿಸಿ ಎಸ್​ಬಿಐ ನಿರ್ಧಾರ ಕೈಗೊಂಡಿದೆ. ಹಾಗೆಯೇ ಒಂದರಿಂದ ಎರಡು ಕೋಟಿವರೆಗಿನ ಸಾಲಕ್ಕೆ ಬಡ್ಡಿ ಶೇ. 9.40ರಿಂದ ಶೇ. 9.70ಗೆ ಹೆಚ್ಚಳ ಮಾಡಲಾಗಿದೆ.

  ಮೇ 1ರಿಂದಲೇ ಈ ನೂತನ ಬಡ್ಡಿದರಗಳು ಜಾರಿಗೆ ಬರಲಿವೆ.

  ಪಿಟಿಐ ಸುದ್ದಿ ಸಂಸ್ಥೆ ವರದಿ
  First published: